ಅಕ್ಷಯ್‌ ಕುಮಾರ್‌ಗೆ ಮತ್ತೆ ನಿರಾಸೆ: 'ರಕ್ಷಾ ಬಂಧನ್' ಫಸ್ಟ್‌ ಡೇ ಕಲೆಕ್ಷನ್ ಎಷ್ಟು?

ಬಾಲಿವುಡ್‌ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಚೇತರಿಸಿಕೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಈ ವಾರ ಪ್ರೇಕ್ಷಕರನ್ನು ರಂಜಿಸೋಕೆ ಬಂದ ಆಮಿರ್ ಖಾನ್ ಹಾಗೂ ಅಕ್ಷಯ್‌ ಕುಮಾರ್‌ಗೂ ನಿರಾಸೆ ಎದುರಾಗಿದೆ. ಬಾಕ್ಸಾಫೀಸ್‌ನಲ್ಲಿ 'ಲಾಲ್‌ ಸಿಂಗ್‌ ಚಡ್ಡಾ' ಹಾಗೂ 'ರಕ್ಷಾ ಬಂಧನ್' ಸಿನಿಮಾಗಳ ಪರ್ಫಾರ್ಮೆನ್ಸ್‌ ನೀರಸವಾಗಿದೆ.

ಬಹಳ ದಿನಗಳ ಬಿಟೌನ್‌ನ ಇಬ್ಬರು ಸೂಪರ್ ಸ್ಟಾರ್‌ಗಳ ಸಿನಿಮಾಗಳು ಒಂದೇ ದಿನ ತೆರೆಗಪ್ಪಳಿಸಿವೆ. 'ಲಾಲ್‌ ಸಿಂಗ್‌ ಚಡ್ಡಾ' ಮುಗ್ಗರಿಸಿದ್ದು,'ರಕ್ಷಾ ಬಂಧನ್' ಸಿನಿಮಾ ಬಗ್ಗೆ ಪಾಸಿಟಿವ್ ಟಾಕ್ ಕೇಳಿಬಂದಿದೆ. ಆದರೂ ಕಲೆಕ್ಷನ್ ಮಾತ್ರ ಹೇಳಿಕೊಳ್ಳುವಂತಿಲ್ಲ. ಟೈಟಲ್‌ಗೆ ಹೇಳುವಂತೆ ಅಣ್ಣತಂಗಿ ಬಾಂಧವ್ಯದ ಕತೆ ಈ ಸಿನಿಮಾದಲ್ಲಿದೆ. ಇನ್ನು 'ರಕ್ಷಾ ಬಂಧನ್' ಹಬ್ಬದ ಸಂಭ್ರಮದಲ್ಲೇ ಸಿನಿಮಾ ತೆರೆಗೆ ಬಂದಿರೋದು ವಿಶೇಷ.

ಆನಂದ್ ಎಲ್. ರಾಯ್ ಈ ಫ್ಯಾಮಿಲಿ ಕಾಮಿಡಿ ಡ್ರಾಮಾ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಭೂಮಿ ಪಡ್ನೇಕರ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಅಕ್ಷಯ್‌ ಕುಮಾರ್‌ ಸಹೋದರಿಯರ ಪಾತ್ರಗಳಲ್ಲಿ ಸಾದಿಯಾ ಖತೀಬ್, ದೀಪಿಕಾ ಖನ್ನಾ, ಸ್ಮ್ರಿತಿ ಶ್ರೀಕಾಂತ್ ಹಾಗೂ ಸಹೆಜ್‌ ಮೀನ್ ಕೌರ್ ಕಾಣಿಸಿಕೊಂಡಿದ್ದಾರೆ. ಅಣ್ಣ ತಂಗಿಯರ ಭಾವನಾತ್ಮಕ ಕಥೆ ಪ್ರೇಕ್ಷಕರ ಮನಗೆದ್ದಿದೆ. ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗ್ತಿದೆ.

 ಫಸ್ಟ್ ಡೇ ಕಲೆಕ್ಷನ್ ಎಷ್ಟು?

ಫಸ್ಟ್ ಡೇ ಕಲೆಕ್ಷನ್ ಎಷ್ಟು?

'ರಕ್ಷಾ ಬಂಧನ್' ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗಳಿಕೆ ಹೇಳಿಕೊಳ್ಳುವಂತಿಲ್ಲ. ಖಿಲಾಡಿ ಅಕ್ಷಯ್ ಕ್ರೇಜ್‌ ನೋಡಿದ್ರೆ, ಸಿನಿಮಾ ಮೊದಲ ದಿನ 15 ಕೋಟಿ ರೂ. ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆದರೆ ಭಾರತದಲ್ಲಿ ಈ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಗುರುವಾರ 8.20 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿದೆ. ಬಾಲಿವುಡ್ ಬಾಕ್ಸಾಫೀಸ್ ಪಂಡಿತ ತರಣ್ ಆದರ್ಶ್‌ ಟ್ವೀಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

 ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್

ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್

ತಾಯಿಗೆ ಕೊಟ್ಟ ಮಾತಿನಂತೆ ತನ್ನ ನಾಲ್ಕು ಜನ ತಂಗಿಯರಿಗೆ ಮದುವೆ ಮಾಡಲು ಅಣ್ಣ ಏನೆಲ್ಲಾ ಸರ್ಕಸ್ ಮಾಡುತ್ತಾನೆ ಅನ್ನುವುದೇ 'ರಕ್ಷಾ ಬಂಧನ್' ಕಥೆ. ಕಳೆ ಹಳೆಯದ್ದೇ ಆದರೂ ಅದನ್ನು ನಿರ್ದೇಶಕರು ಕಟ್ಟಿಕೊಟ್ಟಿರುವ ಬಗೆ ಸೊಗಸಾಗಿದೆ. ತಮಾಷೆ ಜೊತೆಗೆ ಭಾವನಾತ್ಮಕ ದೃಶ್ಯಗಳನ್ನು ಪೋಣಿಸಿ, ಕಂಪ್ಲೀಟ್ ಫ್ಯಾಮಿಲಿಗೆ ಇಷ್ಟವಾಗುವಂತಹ ಸಿನಿಮಾ ತೆರೆಗೆ ತಂದಿದ್ದಾರೆ. ಶನಿವಾರ, ಭಾನುವಾರ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.

 ಆಮಿರ್ ಸಿನಿಮಾ ಸೋಲು ವರವಾಗುತ್ತಾ?

ಆಮಿರ್ ಸಿನಿಮಾ ಸೋಲು ವರವಾಗುತ್ತಾ?

'ಲಾಲ್ ಸಿಂಗ್ ಚಡ್ಡಾ' ಸಿನಿಮಾ 'ರಕ್ಷಾ ಬಂಧನ್'ಗೆ ಟಫ್ ಕಾಂಪಿಟೇಷನ್ ಕೊಡುವ ನಿರೀಕ್ಷೆ ಇತ್ತು. ಆದರೆ ಮಿಸ್ಟರ್ ಪರ್ಫೆಕ್ಷನಿಸ್ಟ್‌ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತಿದ್ದಾರೆ. ಸಿನಿಮಾ ಬಗ್ಗೆ ನೆಗೆಟಿವ್ ಟಾಕ್ ಬರ್ತಿದೆ. ಸಿನಿಮಾ ಮೊದಲ ದಿನ 11 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕಳೆದ 10 ವರ್ಷಗಳಲ್ಲಿ ಆಮಿರ್ ಖಾನ್ ನಟನೆಯ ಯಾವುದೇ ಸಿನಿಮಾ ಮೊದಲ ದಿನ ಇಷ್ಟು ಕಡಿಮೆ ಕಲೆಕ್ಷನ್ ಮಾಡಿದ ಉದಾಹರಣೆ ಇಲ್ಲ. ಇನ್ನು 'ಲಾಲ್ ಸಿಂಗ್ ಚಡ್ಡಾ' ಸೋಲು, ಅಕ್ಷಯ್ 'ರಕ್ಷಾ ಬಂಧನ್' ಚಿತ್ರಕ್ಕೆ ವರವಾಗುವ ಸಾಧ್ಯತೆಯಿದೆ.

Recommended Video

Gaalipata 2 | Ramesh Reddy | 'ಗಾಳಿಪಟ 2' ಕಲೆಕ್ಷನ್ ಬಗ್ಗೆ ಈಗ್ಲೆ ಹೇಳೊಕೆ ಆಗಲ್ಲಾ *Movie Review
 ಸೋಲಿನ ಸರಣಿ ಮುಂದುವರಿಕೆ

ಸೋಲಿನ ಸರಣಿ ಮುಂದುವರಿಕೆ

ಕೊರೊನಾ ಹಾವಳಿ ನಂತರ ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿಲ್ಲ. ಸೂಪರ್ ಸ್ಟಾರ್‌ಗಳ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳು ಸಹ ಮುಗ್ಗರಿಸುತ್ತಿವೆ. ಈ ಸೋಲಿನ ಸರಪಳಿ ತುಂಡರಿಸಲು 'ಲಾಲ್ ಸಿಂಗ್ ಚಡ್ಡಾ' ಆಮಿರ್ ಖಾನ್ ಕೈಯಲ್ಲೂ ಸಾಧ್ಯವಾಗಲಿಲ್ಲ. ಶಾರುಖ್ ಖಾನ್ ಸೋತು ಸುಣ್ಣವಾಗಿ 3 ವರ್ಷ ಆಯಿತು. ಸಲ್ಮಾನ್ ಖಾನ್ ಮ್ಯಾಜಿಕ್ ನಡೀತಿಲ್ಲ. ಆಮಿರ್ ಕೂಡ ಮಂಕಾಗಿದ್ದಾರೆ. ಸಾಲು ಸಾಲು ಸಕ್ಸಸ್‌ನಿಂದ ಸಂಚಲನ ಸೃಷ್ಟಿಸಿದ್ದ ಅಕ್ಷಯ್‌ ಕುಮಾರ್ ಸಹ ಈಗ ಮಂಕಾಗುತ್ತಿದ್ದಾರೆ.

More from Filmibeat

English summary
Akshay Kumar Starrer Raksha Bandhan First Day Collection Disappoints.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X