ಮೊದಲ ದಿನ ಕೇವಲ 3 ಕೋಟಿ ಗಳಿಸಿದ್ದ ಅಕ್ಷಯ್ ಕುಮಾರ್ 'ಸೆಲ್ಫಿ' 2ನೇ ದಿನ ಗಳಿಸಿದ್ದೆಷ್ಟು?

ರಿಮೇಕ್ ಸಿನಿಮಾಗಳನ್ನು ಮಾಡಿದರೆ ಯಶಸ್ಸು ಸಿಗುವುದಿಲ್ಲ, ಬದಲಾಗಿ ಹೀನಾಯ ಸೋಲು ಸಿಗುತ್ತೆ ಹಾಗೂ ಚಿತ್ರದ ನಿರ್ಮಾಪಕರು ಮತ್ತು ವಿತರಕರು ನಷ್ಟು ಅನುಭವಿಸುವುದು ಪಕ್ಕಾ ಎಂಬುದನ್ನು ಈಗಾಗಲೇ ಇತ್ತೀಚೆಗೆ ಬಿಡುಗಡೆಗೊಂಡ ಹಲವಾರು ರಿಮೇಕ್ ಸಿನಿಮಾಗಳು ನಿರೂಪಿಸಿವೆ. ಇನ್ನು ಸ್ಟಾರ್ ನಟರು ರಿಮೇಕ್ ಸಿನಿಮಾಗಳಲ್ಲಿ ಅಭಿನಯಿಸಿದರೂ ಸಹ ನಿರ್ಮಾಪಕರು ಲಾಭ ಕಾಣದೇ ಇರುವುದು ನಿಜಕ್ಕೂ ಆಶ್ಚರ್ಯವೇ ಸರಿ.

ಹೀಗೆ ಎಂಥಹ ದೊಡ್ಡ ನಟರೂ ಅಭಿನಯಿಸಿದರೂ ಸಹ ರಿಮೇಕ್ ಚಿತ್ರಗಳು ಗೆಲುವು ಕಾಣದೇ ಸೋಲನ್ನು ಅನುಭವಿಸುತ್ತಿದ್ದರೂ ಸಹ ಕೆಲ ಸಿನಿ ಮಂದಿ ರಿಮೇಕ್ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿ ಕೈಸುಟ್ಟುಕೊಳ್ಳುತ್ತಿದ್ದಾರೆ. ಈ ಸಾಲಿಗೆ ಇದೀಗ ಹೊಸ ಸೇರ್ಪಡೆ ಅಕ್ಷಯ್ ಕುಮಾರ್ ಹಾಗೂ ಇಮ್ರಾನ್ ಹಶ್ಮಿ ನಟನೆಯ ಹಿಂದಿ ಚಿತ್ರ ಸೆಲ್ಫಿ. ಹೌದು, ಕಳೆದ ಶುಕ್ರವಾರ ತೆರೆಗೆ ಬಂದ ಈ ಚಿತ್ರ 2019ರಲ್ಲಿ ಬಿಡುಗಡೆಯಾಗಿದ್ದ ಮಲಯಾಳಂ ಸಿನಿಮಾ ಡ್ರೈವಿಂಗ್ ಲೈಸೆನ್ಸ್‌ನ ರಿಮೇಕ್.

Akshay Kumar starrer Selfi Collects just 7 cores in 2 days at box office

ಪೃಥ್ವಿರಾಜ್ ಸುಕುಮಾರನ್ ಹಾಗೂ ಸೂರಜ್ ವೆಂಜರಮೋಡು ನಟಿಸಿದ್ದ ಈ ಚಿತ್ರ ಸೂಪರ್ ಬ್ಲಾಕ್‌ಬಸ್ಟರ್ ಆಗಿತ್ತು. ಖ್ಯಾತ ನಟನೋರ್ವನ ಅಭಿಮಾನಿ ಆರ್‌ಟಿಒ ಆಫೀಸರ್ ಆಗಿರುತ್ತಾನೆ. ಆ ನಟನ ಡ್ರೈವಿಂಗ್ ಲೈಸೆನ್ಸ್ ಕಳೆದು ಹೋದಾಗ ಲೈಸೆನ್ಸ್ ಪಡೆದುಕೊಳ್ಳಲು ಬರುತ್ತಾನೆ. ಆದರೆ ಈ ಸಂದರ್ಭದಲ್ಲಿ ಆ ಸ್ಟಾರ್ ತನ್ನ ಪುಟ್ಟ ಮಗನ ಜತೆ ನಡೆದುಕೊಳ್ಳುವ ರೀತಿಯಿಂದ ಅಭಿಮಾನಿಯಾಗಿದ್ದ ಆರ್‌ಟಿಒ ಅಧಿಕಾರಿ ತಿರುಗಿ ಬೀಳ್ತಾನೆ. ಹೀಗೆ ಮಾಜಿ ಅಭಿಮಾನಿ ಮತ್ತು ಸ್ಟಾರ್ ನಟನ ನಡುವೆ ಡ್ರೈವಿಂಗ್ ಲೈಸೆನ್ಸ್‌ಗಾಗಿ ನಡೆಯುವ ಕಾಳಗವೇ ಚಿತ್ರದ ಕಥೆ. ಇಂಥಹ ಸಿಂಪಲ್ ಕಥೆ ಹೊಂದಿದ್ದ ಚಿತ್ರವನ್ನು ಮಲಯಾಳಂನಲ್ಲಿ ಕೇವಲ 4 ಕೋಟಿ ವೆಚ್ಚದಲ್ಲಿ ತಯಾರಿಸಲಾಗಿತ್ತು. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 23 ಕೋಟಿ ಗಳಿಸಿ ಅಬ್ಬರಿಸಿತ್ತು.

ಆದರೆ ಇಂಥಹ ಬಾಕ್ಸ್ ಆಫೀಸ್ ಲೆಕ್ಕಾಚಾರ ಸೆಲ್ಫಿ ವಿಚಾರದಲ್ಲಿ ಜರುಗುತ್ತಿಲ್ಲ. ಬಿಡುಗಡೆಯಾದ ಮೊದಲ ದಿನ ( ಫೆಬ್ರವರಿ 24 ) 3.6 ಕೋಟಿ ಗಳಿಕೆ ಮಾಡಿದ್ದ ಸೆಲ್ಫಿ ಚಿತ್ರ ಎರಡನೇ ದಿನ 4 ಕೋಟಿ ಗಳಿಕೆ ಮಾಡಿದೆ. ಅದೂ ಸಹ ವಿಶ್ವದಾದ್ಯಂತ. ಈ ಮೂಲಕ ಚಿತ್ರ ಎರಡು ದಿನಗಳಲ್ಲಿ 7.6 ಕೋಟಿ ಗಳಿಸಿದ್ದು, ಅತಿ ಕೆಟ್ಟ ಓಪನಿಂಗ್ ಪಡೆದುಕೊಂಡಿದೆ. ಇನ್ನು ಈ ಚಿತ್ರವನ್ನು ಬರೋಬ್ಬರಿ 80 ಕೋಟಿ ಬಜೆಟ್‌ನಲ್ಲಿ ತಯಾರಿಸಲಾಗಿದ್ದು, ಚಿತ್ರತಂಡ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸುವುದು ಖಚಿತ.

ಸದ್ಯ ಸೆಲ್ಫಿ ಚಿತ್ರ ಮಾಡಿರುವ ಈ ಕಲೆಕ್ಷನ್ ನೋಡಿದ ಸಿನಿ ರಸಿಕರು ಸ್ಟಾರ್ ನಟನ ಚಿತ್ರವೊಂದು ಇಂಥ ಕಳಪೆ ಕಲೆಕ್ಷನ್ ಮಾಡುತ್ತಿದೆ, ಅಕ್ಷಯ್ ಕುಮಾರ್ ಇಂಥ ಸಮಯದಲ್ಲಿ ವಿಶೇಷವಾಗಿ ಏನಾದರೂ ಮಾಡಿ ಕಮ್ ಬ್ಯಾಕ್ ಮಾಡಬೇಕು, ಇಲ್ಲವೆಂದರೆ ನಿವೃತ್ತಿ ಪಡೆಯಬೇಕು, ಸುಮ್ಮನೆ ನಿರ್ಮಾಪಕರನ್ನು ನಷ್ಟ ಅನುಭವಿಸುವಂತೆ ಮಾಡುತ್ತಿರುವುದೇಕೆ ಎಂದು ಕಿಡಿಕಾರಿದ್ದಾರೆ.

Akshay Kumar starrer Selfi Collects just 7 cores in 2 days at box office

ಇನ್ನು ಈ ಚಿತ್ರ ಮಾತ್ರವಲ್ಲದೇ ಅಕ್ಷಯ್ ಕುಮಾರ್ ನಟಿಸಿರುವ ಈ ಹಿಂದಿ ಐದಾರು ಚಿತ್ರಗಳದ್ದೂ ಸಹ ಇದೇ ಕಥೆ. ಎಲ್ಲಾ ಚಿತ್ರಗಳು ಸಹ ತೀರ ಕೆಳ ಮಟ್ಟದ ಓಪನಿಂಗ್ ಪಡೆದುಕೊಂಡಿವೆ. ಇದೂ ಸಹ ಅದೇ ಮಾರ್ಗದಲ್ಲಿ ಸಾಗಿದ್ದು, ಅಕ್ಷಯ್ ಕುಮಾರ್ ಸಿನಿ ಜೀವನ ಇಕ್ಕಟ್ಟಿನಲ್ಲಿ ಇರುವುದಂತೂ ಪಕ್ಕಾ. ಮೊದಲ ದಿನ ಚಿತ್ರ ಪಡೆದುಕೊಂಡಿದ್ದ ಪ್ರದರ್ಶನಗಳಿಗಿಂತ ಕಡಿಮೆ ಸಂಖ್ಯೆಯ ಪ್ರದರ್ಶನಗಳನ್ನು ಎರಡನೇ ದಿನ ಪಡೆದುಕೊಂಡಿದೆ. ಇನ್ನು ಇರುವ ಪ್ರದರ್ಶನಗಳೂ ಸಹ ಜನರಿಲ್ಲದೆ ಖಾಲಿ ಹೊಡೆಯುತ್ತಿದ್ದು, ಮುಂದಿನ ವಾರ ಬರುವಷ್ಟರಲ್ಲಿ ಸೆಲ್ಫಿ ಓಟ ಬಹುತೇಕ ಅಂತ್ಯಗೊಳ್ಳಲಿದೆ.

More from Filmibeat

English summary
Akshay Kumar starrer Selfi Collects just 7 cores in 2 days at box office. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X