For Quick Alerts
  ALLOW NOTIFICATIONS  
  For Daily Alerts

  ಬಳಲಿ ಬೆಂಡಾಗಿದ್ದ ಬಾಲಿವುಡ್‌ಗೆ ಜೀವತುಂಬಿದ ಸೂರ್ಯವಂಶಿ: 1 ದಿನದ ಗಳಿಕೆ 26 ಕೋಟಿ

  |

  ಕೊರೊನಾ ಭಾರತಕ್ಕೆ ಪ್ರವೇಶ ಮಾಡಿದ್ದಲ್ಲಿಂದ ಬಾಲಿವುಡ್‌ನಲ್ಲಿ ಸಿನಿಮಾ ಚಟುವಟಿಕೆಗಳು ತಣ್ಣಾಗಿದ್ದವು. ವರ್ಷಗಳ ಕಾಲ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ಕೊರೊನಾ ಮೊದಲನೇ ಅಲೆ, ಎರಡನೇ ಅಲೆ, ಲಾಕ್‌ಡೌನ್ ಬಳಲಿ ಬೆಂಡಾಗಿದ್ದ ಬಾಲಿವುಡ್ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಭಾರತದ ಹಲವೆಡೆ ಶೇ.50ರಷ್ಟು ಚಿತ್ರಮಂದಿರ ತೆರೆದಿದ್ದರೂ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಥಿಯೇಟರ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿತ್ತು.

  ಬೆಳಕಿನ ಹಬ್ಬ ದೀಪಾವಳಿಗೆ ಬಾಲಿವುಡ್ ಸಿನಿಮಾ ಸೂರ್ಯವಂಶಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ಕೋಟಿ ಕೋಟಿ ಹಣ ಲೂಟಿ ಮಾಡಿದೆ. ಕೊರೊನಾ ಕಾಲದಲ್ಲಿ ಹಿಂದೇಟು ಹಾಕಿದ್ದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಕಾಂಬಿನೇಷನ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹಾಗಿದ್ರೆ, ಸೂರ್ಯವಂಶಿ ಮೊದಲ ಎಲ್ಲೆಲ್ಲಿ ಎಷ್ಟೆಷ್ಟು ಗಳಿಸಿದೆ? ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು? ಈ ಎಲ್ಲಾ ಮಾಹಿತಿ ಇಲ್ಲಿದೆ.

  ಬಾಲಿವುಡ್‌ಗೆ ಬೆಳಕು ತಂದ ಅಕ್ಷಯ್ ಕುಮಾರ್ ಸೂರ್ಯವಂಶಿ

  ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಜೋಡಿಯ ಸೂರ್ಯವಂಶಿ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಿತ್ತು. ಮೊದಲ ದಿನ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಪ್ರೇಕ್ಷಕರಿಗೆ ರೋಹಿತ್ ಶೆಟ್ಟಿಯ ಪೊಲೀಸ್ ಸ್ಟೋರಿ ಇಷ್ಟ ಆಗಿದೆ. ಬಹಳ ದಿನಗಳ ಬಳಿಕ ತೆರೆಕಂಡಿರುವ ಸ್ಟಾರ್ ನಟನ ಮಾಸ್ ಸಿನಿಮಾ ಆಡಿಯನ್ಸ್ ಚಪ್ಪಾಳೆ ತಟ್ಟಿದ್ದಾರೆ. ಹೀಗಾಗಿ ವಿಶ್ವದಾದ್ಯಂತ ತೆರೆ ಕಂಡ ಸೂರ್ಯವಂಶಿ ಬಳಲಿ ಬೆಂಡಾಗಿ ಹೋಗಿದ್ದ ಬಾಲಿವುಡ್ ಅಂಗಳಲ್ಲಿ ಹೊಸ ಭರವಸೆಯ ಬೆಳಕು ಮೂಡಿಸಿದೆ.

  ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ 26 ಕೋಟಿ

  ರಿಲಯನ್ಸ್ ಎಂಟರ್‌ಟೈನ್ಮೆಂಟ್ ಹಾಗೂ ಕರಣ್ ಜೋಹರ್ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ ನಿರ್ಮಿಸಿದ್ದ ಸೂರ್ಯವಂಶಿ ಬಾಲಿವುಡ್‌ಗೆ ಹೊಸ ಚೈತನ್ಯ ನೀಡಿದೆ. ಶುಕ್ರವಾರ (ನವೆಂಬರ್ 05)ರಂದು ತೆರೆಕಂಡಿದ್ದ ಸೂರ್ಯವಂಶಿ ಮೊದಲ ದಿನವೇ ಬರೋಬ್ಬರಿ 26.29 ಕೋಟಿ ಗಳಿಕೆ ಕಂಡಿದೆ. ಮುಂಬೈ, ಪೂನಾ, ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಸೂರ್ಯವಂಶಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ದೆಹಲಿ ಹಾಗೂ ಉತ್ತರ ಭಾರತದ ಹಲವೆಡೆ ಸಾಧಾರಣ ಓಪನಿಂಗ್ ಕಂಡಿದೆ. ಹೀಗಿದ್ದರೂ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ದೆಹಲಿ ಹಾಗೂ ಉತ್ತರ ಪ್ರದೇಶದಿಂದ ಮೊದಲ ದಿನದ ಕಲೆಕ್ಷನ್ 5.58 ಕೋಟಿ, ಗುಜರಾತ್ ಹಾಗೂ ಸೌರಾಷ್ಟ್ರದಿಂದ 5.16 ಕೋಟಿ, ಮಹಾರಾಷ್ಟ್ರ ಹಾಗೂ ಗೋವಾದಿಂದ 4.57 ಕೋಟಿ ಗಳಿಕೆ ಕಂಡಿದೆ.

  Akshay Kumar Starrer Sooryavanshi Biggest Bollywood Opener Day 1 Box Office Earns Rs 26 Cr

  5 ಸಾವಿರ ಚಿತ್ರಮಂದಿರಗಳಲ್ಲಿ ಸೂರ್ಯವಂಶಿ ರಿಲೀಸ್

  ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ಸಿನಿಮಾ ವಿಶ್ವದಾದ್ಯಂತ ಸುಮಾರು 5 ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಅಲ್ಲದೆ 66 ದೇಶಗಳಲ್ಲಿ ಸೂರ್ಯವಂಶಿ ತೆರೆಕಂಡಿದೆ. ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ, ವಿದೇಶದಲ್ಲೂ ಸೂರ್ಯವಂಶಿ ಸಿನಿಮಾ ನೋಡಲು ಪ್ರೇಕ್ಷಕರು ಚಿತ್ರಮಂದಿರದೆಡೆಗೆ ಧಾವಿಸುತ್ತಿದ್ದಾರೆ. ಹೀಗಾಗಿ ಎರಡನೇ ದಿನವೂ ಅಡ್ವಾನ್ಸ್ ಬುಕಿಂಗ್ ಆಗಿದ್ದು, ಭರ್ಜರಿ ಗಳಿಕೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಮುಂಬೈನಲ್ಲಿ ಬಹುತೇಕ ಚಿತ್ರಮಂದಿರಗಳು ತುಂಬಿವೆ, ದೆಹಲಿಯಲ್ಲಿ ಶೇ.30ರಷ್ಟು, ಬೆಂಗಳೂರಿನಲ್ಲಿ ಶೇ. 50, ಪೂನಾದಲ್ಲಿ ಶೇ. 60ರಷ್ಟು ಟಿಕೆಟ್ ಅಡ್ವಾನ್ಸ್ ಬುಕಿಂಗ್ ಆಗಿವೆ.

  ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾಗಳಿಗೆ ಬಂತು ಜೀವ

  ಸೂರ್ಯವಂಶಿ ಹಿಂದೆನೇ ಸಲ್ಮಾನ್ ಖಾನ್ ಸಿನಿಮಾ ಅಂತಿಮ್, ಜಾನ್ ಅಬ್ರಾಹಂ ನಟಿಸಿದ ಸತ್ಯಮೇವ ಜಯತೆ 2, ಸೈಫ್ ಅಲಿಖಾನ್, ರಾಣಿಮುಖರ್ಜಿ ಹಾಗೂ ಸಿದ್ಧಾರ್ಥ್ ಚತುರ್ವೇದಿಯ ಬಂಟಿ ಔರ್ ಬಬ್ಲಿ 2 ಸಿನಿಮಾಗಳು ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಆದರೆ, ಪ್ರೇಕ್ಷಕರು ಥಿಯೇಟರ್‌ಗೆ ಬರ್ತಾರಾ ಅನ್ನುವ ಅನುಮಾನದಲ್ಲೇ ರಿಲೀಸ್ ಡೇಟ್ ಘೋಷಣೆ ಮಾಡಿದ್ದ ಚಿತ್ರಗಳಿಗೆ ಈಗ ಜೀವ ಬಂದಂತಾಗಿದೆ. ಸೂರ್ಯವಂಶಿಯ ಬಾಕ್ಸಾಫೀಸ್ ಗಳಿಕೆ ಸೊರಗಿ ಹೋಗಿದ್ದ ಬಾಲಿವುಡ್‌ಗೆ ಹೊಸ ಹುರುಪುನೀಡಿದೆ.

  English summary
  Akshay Kumar, Katrina Kaif Starrer Sooryavanshi film day 1 box office earns Rs 26 crore. Sooryavanshi highest Bollywood opening since the Covid-19 outbreak Started.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X