For Quick Alerts
  ALLOW NOTIFICATIONS  
  For Daily Alerts

  ರಕ್ಷಾ ಬಂಧನ್ ಚಿತ್ರೀಕರಣ ಮುಗಿಸಿದ ಅಕ್ಷಯ ಕುಮಾರ್

  |

  ಅಕ್ಷಯ್ ಕುಮಾರ್ ನಟನೆಯ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ. ಸೂರ್ಯವಂಶಿ, ಅತ್ರಂಗಿ ರೇ, ಪೃಥ್ವಿರಾಜ್, ಬಚ್ಚನ್ ಪಾಂಡೆ ಚಿತ್ರಗಳು ರಿಲೀಸ್ ದಿನಾಂಕ ಪ್ರಕಟಿಸಿದೆ. ಇದರೊಂದಿಗೆ ಆನಂದ್ ಎಲ್ ರೈ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ರಕ್ಷಾ ಬಂಧನ್' ಚಿತ್ರವೂ ರಿಲೀಸ್ ದಿನಾಂಕ ಲಾಕ್ ಮಾಡಿದೆ.

  ರಕ್ಷಾ ಬಂಧನ್ ಚಿತ್ರ ಆಗಸ್ಟ್ 11ಕ್ಕೆ ರಿಲೀಸ್ ಆಗುತ್ತಿದೆ ಎಂದು ಸ್ವತಃ ನಿರ್ಮಾಪಕರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದಕ್ಕೂ ಮುಂಚೆ ಈ ಚಿತ್ರ 2021ರ ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಹೊಸ ದಿನಾಂಕ ಪ್ರಕಟಿಸಿದೆ.

  ಚಿತ್ರಮಂದಿರ ತೆರೆದರೂ ಒಟಿಟಿಗೆ ಜೈ ಎಂದ ಧನುಶ್-ಅಕ್ಷಯ್ ಕುಮಾರ್ಚಿತ್ರಮಂದಿರ ತೆರೆದರೂ ಒಟಿಟಿಗೆ ಜೈ ಎಂದ ಧನುಶ್-ಅಕ್ಷಯ್ ಕುಮಾರ್

  ಇದೀಗ, ಅಕ್ಷಯ್ ಕುಮಾರ್ ರಕ್ಷಾ ಬಂಧನ್ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಈ ಕುರಿತು ಅಕ್ಷಯ್ ಮಾಹಿತಿ ನೀಡಿದ್ದು, ''ಕಳೆದ ರಾತ್ರಿ ರಕ್ಷಾ ಬಂಧನ್ ಚಿತ್ರೀಕರಣ ಮುಗಿಸಿದೆವು. ದುಃಖದ ಛಾಯೆ ಇತ್ತು. ಇದೆಲ್ಲವೂ ಮೀರಿ ಹೊಸ ದಿನ, ಹೊಸ ದಿನಚರಿ'' ಎಂದು ಪೋಸ್ಟ್ ಹಾಕಿದ್ದಾರೆ.

  ರಕ್ಷಾ ಬಂಧನ್ ಚಿತ್ರ ಬಿಡುಗಡೆ ದಿನವೇ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಸಹಜವಾಗಿ ಅಕ್ಷಯ್ ಚಿತ್ರಕ್ಕೆ ಸ್ವಲ್ಪಮಟ್ಟಿಗೆ ತಲೆನೋವು ತರಿಸಿದೆ. ಓಂ ರಾವತ್ ನಿರ್ದೇಶನದ ಆದಿಪುರುಷ್ ಚಿತ್ರ ಆಗಸ್ಟ್ 11 ರಂದು ರಿಲೀಸ್ ಆಗುತ್ತಿದೆ. ಇದು ಪೌರಾಣಿಕ ಚಿತ್ರವಾಗಿದ್ದು, ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಹಾಗೂ ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್ ನಟಿಸುತ್ತಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಸನೂನ್ ಬಣ್ಣ ಹಚ್ಚಿದ್ದಾರೆ.

  ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಆದಿಪುರುಷ್ ಸಿನಿಮಾ ರಿಲೀಸ್ ಆಗುತ್ತಿದ್ದು, ಸುಮಾರು 450 ಕೋಟಿ ಬಜೆಟ್‌ನಲ್ಲಿ ಸಿದ್ಧವಾಗುತ್ತಿದೆ.

  ದೊಡ್ಡ ಚಿತ್ರಗಳು ರಿಲೀಸ್ ಪಟ್ಟಿ: ದಿನಾಂಕ ಘೋಷಿಸಿದ ಆದಿಪುರುಷ್ದೊಡ್ಡ ಚಿತ್ರಗಳು ರಿಲೀಸ್ ಪಟ್ಟಿ: ದಿನಾಂಕ ಘೋಷಿಸಿದ ಆದಿಪುರುಷ್

  ಆದಿಪುರುಷ್ ಮತ್ತು ರಕ್ಷಾ ಬಂಧನ್ ಎರಡು ಚಿತ್ರಗಳು ಆಗಸ್ಟ್ ಎರಡನೇ ವಾರದಲ್ಲಿ ರಿಲೀಸ್ ಆಗುತ್ತಿದೆ. ಆಗಸ್ಟ್ 11 ಅಂದ್ರೆ ಗುರುವಾರ ಎರಡು ಚಿತ್ರವೂ ಬಿಡುಗಡೆಯಾಗಲಿದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ವೀಕೆಂಡ್ ರಜೆ ಸಿಗಲಿದೆ. ಜೊತೆಗೆ ಆಗಸ್ಟ್ 15 ಸ್ವಾತಂತ್ರ ದಿನಾಚರಣೆಯ ರಜೆಯೂ ಇರಲಿದೆ. ಹೀಗಾಗಿ, ಮೊದಲ ಐದು ದಿನದ ಲೆಕ್ಕಾಚಾರದಲ್ಲಿ ಈ ಎರಡು ಚಿತ್ರಗಳು ಥಿಯೇಟರ್‌ಗೆ ಬರ್ತಿದೆ.

  ಆನಂದ್ ಎಲ್ ರೈ ನಿರ್ದೇಶಿಸುತ್ತಿರುವ ರಕ್ಷಾ ಬಂಧನ್ ಚಿತ್ರದಲ್ಲಿ ಭೂಮಿ ಪಡ್ನೆಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

  ಇನ್ನುಳಿದಂತೆ ಸೂರ್ಯವಂಶಿ ಸಿನಿಮಾ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಜನವರಿ 21ಕ್ಕೆ ಪೃಥ್ವಿರಾಜ್ ತೆರೆಗೆ ಬರ್ತಿದೆ. ಮಾರ್ಚ್ 4ರಂದು ಬಚ್ಚನ್ ಪಾಂಡೆ ಹಾಗೂ ಅತ್ರಂಗಿ ರೇ ಒಟಿಟಿಯಲ್ಲಿ ರಿಲೀಸ್ ಆಗಲಿದ್ದು, ಸದ್ಯಕ್ಕೆ ದಿನಾಂಕ ಪ್ರಕಟಿಸಿಲ್ಲ.

  English summary
  Bollywood actor Akshay kumar Starrer Raksha Bandhan directed by anand l rai shoot is over in Delhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X