2021ರಲ್ಲಿ ಅಕ್ಷಯ್ ಕುಮಾರ್ ಶೋ: ಮತ್ತೊಂದು ಹೊಸ ಪ್ರಾಜೆಕ್ಟ್‌ಗೆ ಸಹಿ
ಲಾಕ್‌ಡೌನ್‌ನಿಂದ ಸುಧಾರಿಸಿಕೊಂಡು ಸದ್ಯ ಸ್ಥಗಿತಗೊಂಡಿರುವ ಚಿತ್ರಗಳನ್ನು ಟೇಕ್ ಆನ್ ಮಾಡಿದ್ರೆ ಸಾಕು ಎನ್ನುತ್ತಿರುವ ಚಿತ್ರರಂಗದಲ್ಲಿ ಅಕ್ಷಯ್ ಕುಮಾರ್ ಬಹಳ ವಿಶೇಷ. ಲಾಕ್‌ಡೌನ್, ಕೊರೊನಾ ವೈರಸ್‌ಗೆ ತಲೆಕೆಡಿಸಿಕೊಳ್ಳದ ಖಿಲಾಡಿ ಬ್ಯಾಕ್ ಟು ಬ್ಯಾಕ್ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತಿದ್ದಾರೆ.
ಈ ವಾರವಷ್ಟೇ ಅಕ್ಷಯ್ ಕುಮಾರ್ ನಟಿಸಿರುವ ಲಕ್ಷ್ಮಿ ಸಿನಿಮಾ ಬಿಡುಗಡೆಯಾಗಿದೆ. ಒಟಿಟಿ ಮೂಲಕ ತೆರೆಕಂಡ ಲಕ್ಷ್ಮಿ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಮತ್ತೊಂದು ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ ಅಕ್ಷಯ್ ಕುಮಾರ್. ಹಾಗ್ನೋಡಿದ್ರೆ, ಮುಂದಿನ ವರ್ಷ ಪೂರ್ತಿ ಅಕ್ಷಯ್ ಕುಮಾರ್ ಸಿನಿಮಾಗಳೇ ಇರಲಿದೆ. ಯಾವ ಯಾವ ಚಿತ್ರಗಳು ಸಾಲಿನಲ್ಲಿವೆ? ಮುಂದೆ ಓದಿ...

'ಬೆಲ್ ಬಾಟಂ' ಮುಗಿತು
ರಂಜಿತ್ ಎಂ ತಿವಾರಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸ್ಪೈ ಥ್ರಿಲ್ಲರ್ ಸಿನಿಮಾ ಬೆಲ್ ಬಾಟಂ ಶೂಟಿಂಗ್ ಮುಗಿಸಿದೆ. ಕೊನೆಯ ಹಂತದ ಚಿತ್ರೀಕರಣವನ್ನು ಸ್ಕಾಟ್‌ಲ್ಯಾಂಡ್‌ನಲ್ಲಿ ಪೂರ್ಣಗೊಳಿಸಿದೆ. ಈ ಸಿನಿಮಾ 2021ರ ಆರಂಭದಲ್ಲಿ ತೆರೆಕಾಣಬಹುದು.

ಪೃಥ್ವಿರಾಜ್ ಚೌಹಣ್
ಯಶ್ ರಾಜ್ ಬ್ಯಾನರ್‌ನಲ್ಲಿ ಸಿದ್ಧವಾಗುತ್ತಿರುವ ಐತಿಹಾಸಿಕ ಸಿನಿಮಾ ಪೃಥ್ವಿರಾಜ್ ಶೂಟಿಂಗ್ ನಡೆಯುತ್ತಿದೆ. ರಜಪೂತ ರಾಜ ಪೃಥ್ವಿರಾಜ್ ಚೌಹಣ್ ಕುರಿತಾದ ಸಿನಿಮಾ ಇದಾಗಿದ್ದು, ವಿಶ್ವ ಸುಂದರಿ ಮಾನುಷಿ ಚಿಲ್ಲರ್ ನಟಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷದ ಬೇಸಿಗೆ ರಜೆಯೊತ್ತಿಗೆ ಚಿತ್ರಮಂದಿರಕ್ಕೆ ಬರಬಹದು.

ಧನುಶ್ ಜೊತೆ 'ಅತ್ರಂಗಿ ರೇ'
ಆನಂದ್ ಎಲ್ ರೈ ನಿರ್ದೇಶನದಲ್ಲಿ ತಯಾರಾಗುತ್ತಿರುವ ಅತ್ರಂಗಿ ರೇ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಧನುಶ್ ಮತ್ತು ಸಾರಾ ಅಲಿ ಖಾನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

2021ರಲ್ಲಿ ಬಚ್ಚನ್ ಪಾಂಡೆ ಶುರು
ಸಾಜೀದ್ ನದಿಯಾದ್‌ವಾಲ್ ಅವರ ಆಕ್ಷನ್ ಕಾಮಿಡಿ ಸಿನಿಮಾ 'ಬಚ್ಚನ್ ಪಾಂಡೆ' ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಶುರುವಾಗಲಿದೆ. ಫರ್ಹಾದ್ ಸಂಜಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಕೃತಿ ಸನನ್ ಒಟ್ಟಿಗೆ ನಟಿಸುತ್ತಿದ್ದಾರೆ.

ಮುದಾಸರ್ ಅಜೀಜ್ ಸಿನಿಮಾ
ಇಷ್ಟೆಲ್ಲ ಚಿತ್ರಗಳಲ್ಲಿ ಬ್ಯುಸಿಯಿರುವ ಅಕ್ಷಯ್ ಕುಮಾರ್ ಈಗ ಮತ್ತೊಂದು ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ. ಮುದಾಸರ್ ಅಜೀಜ್ ಅವರ ಜೊತೆ ಸಿನಿಮಾ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದೊಂದು ಕಾಮಿಡಿ ಪ್ರಧಾನ ಸಿನಿಮಾ ಆಗಿದ್ದು, ಜುಲೈ ತಿಂಗಳಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.
Recommended Video

ಸೂರ್ಯವಂಶಿ ಬಿಡುಗಡೆಯಾಗಬೇಕು
ರಾಘವ ಲಾರೆನ್ಸ್ ನಿರ್ದೇಶನದ ಲಕ್ಷ್ಮಿ ಸಿನಿಮಾ ರಿಲೀಸ್ ಆಯ್ತು. ಅದಕ್ಕೂ ಮುಂಚೆ ಚಿತ್ರೀಕರಣ ಮುಗಿಸಿದ್ದ ಸೂರ್ಯವಂಶಿ ಸಿನಿಮಾವೂ ಬಿಡುಗಡೆಯಾಗಬೇಕಿದೆ. ಲಾಕ್‌ಡೌನ್ ಕಾರಣದಿಂದ ಮುಂದೂಡಿಕೆಯಾಗಿದ್ದ ಈ ಚಿತ್ರ ಸದ್ಯದಲ್ಲೆ ತೆರೆಗೆ ಬರಲಿದೆ.


Click it and Unblock the Notifications











