For Quick Alerts
  ALLOW NOTIFICATIONS  
  For Daily Alerts

  ಪತ್ನಿಯನ್ನು ದಿಢೀರನೆ ಆಸ್ಪತ್ರೆಗೆ ಕರೆದೊಯ್ದ ನಟ ಅಕ್ಷಯ ಕುಮಾರ್: ವಿಡಿಯೋ ವೈರಲ್

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೊರೊನಾ ವಿರುದ್ಧ ಹೋರಾಟಕ್ಕೆ 25 ಕೋಟಿ ದೇಣಿಗೆ ನೀಡಿರುವ ಸುದ್ದಿ ಸದ್ಯ ವೈರಲ್ ಆಗುತ್ತಿದೆ.

  ಕೊರೊನಾದಿಂದ ಸರಳ ವಿವಾಹವಾಗಲು ಮುಂದಾದ ನಿಖಿಲ್ | Nikhil weds Revathi | Filmibeat kannada

  ಇದರ ಬೆನ್ನಲ್ಲೆ ಈಗ ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾರನ್ನು ದಿಢೀರನೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಪತ್ನಿಯನ್ನು ಕೂರಿಸಿಕೊಂಡು ಸ್ವತಹ ಅಕ್ಷಯ್ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಮಾಸ್ಕ್ ಧರಿಸಿ ಕಾರು ಚಲಾಯಿಸುತ್ತಿರುವ ಅಕ್ಷಯ್ ಕುಮಾರ್ ವಿಡಿಯೋವನ್ನು ಟ್ವಿಂಕಲ್ ಖನ್ನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಪತಿಯನ್ನು ಕಾರ್ ಚಾಲಕನೆಂದು ಕಿಚಾಯಿಸಿದ ಟ್ವಿಂಕಲ್

  ಪತಿಯನ್ನು ಕಾರ್ ಚಾಲಕನೆಂದು ಕಿಚಾಯಿಸಿದ ಟ್ವಿಂಕಲ್

  "ನನ್ನ ಚಾಲಕ ನನ್ನನ್ನು ಚಾಂದನಿ ಚೌಕ್ ನಿಂದ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ" ಎಂದು ಪತಿ ಅಕ್ಷಯ್ ಕುಮಾರ್ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾರೆ.

  ಆಸ್ಪತ್ರೆಗೆ ಹೋಗಲು ಕೊರೊನಾ ಕಾರಣವಲ್ಲ ಎಂದ ಟ್ವಿಂಕಲ್

  ಆಸ್ಪತ್ರೆಗೆ ಹೋಗಲು ಕೊರೊನಾ ಕಾರಣವಲ್ಲ ಎಂದ ಟ್ವಿಂಕಲ್

  ಟ್ವಿಂಕಲ್ ಖನ್ನಾ ದಿಢೀರ್ ಆಸ್ಪತ್ರೆಗೆ ಹೋಗಿದ್ದೇಕೆ? ಕೊರೊನಾ ಸೋಂಕು ತಗುಲಿದೆಯೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಟ್ವಿಂಕಲ್ ಖನ್ನಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಕಾರಿನಲ್ಲಿ ಹೋಗುತ್ತಿರುವಾಗ ವಿಡಿಯೋ ಮಾಡಿರುವ ಅಕ್ಷಯ್ ಪತ್ನಿ "ನಾನು ಆಸ್ಪತ್ರೆಗೆ ಹೋಗಲು ಕೊರೊನಾ ಕಾರಣವಲ್ಲ. ಕಾಲು ಮುರಿದುಕೊಂಡಿದ್ದೇನೆ" ಎಂದು ಹೇಳಿ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.

  ಲಾಕ್ ಡೌನ್ ಕಾರಣಕ್ಕೆ ರಸ್ತೆಗಳು ಖಾಲಿ-ಖಾಲಿ

  ಲಾಕ್ ಡೌನ್ ಕಾರಣಕ್ಕೆ ರಸ್ತೆಗಳು ಖಾಲಿ-ಖಾಲಿ

  "ಲಾಕ್ ಡೌನ್ ಹಿನ್ನಲೆ ರಸ್ತೆಗಳು ಖಾಲಿ ಖಾಲಿ ಆಗಿವೆ. ಹಾಗಾಗಿ ಆಸ್ಪತ್ರೆಗೆ ಬೇಗನೆ ಹೋಗಿ ಬರಲು ಸಾಧ್ಯವಾಯಿತು. ಅಲ್ಲಲ್ಲಿ ಪಾರಿವಾಳಗಳು, ಕಾಗೆಗಳು ಕಂಡು ಬಂದವು ಸಂತೋಷವಾಯಿತು" ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಜೊತೆಗೆ ಕಾಲು ಮುರಿದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

  25 ಕೋಟಿ ದೇಣಿಗೆ ನೀಡಿರುವ ಅಕ್ಷಯ್ ಕುಮಾರ್

  25 ಕೋಟಿ ದೇಣಿಗೆ ನೀಡಿರುವ ಅಕ್ಷಯ್ ಕುಮಾರ್

  ಕೊರೊನಾ ವಿರುದ್ಧ ಹೋರಾಡಲು ನಟ ಅಕ್ಷಯ್ ಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ 25 ಕೋಟಿ ರೂ ದೇಣಿಗೆ ನೀಡಿದ್ದಾರೆ. ಪತಿ ಮಾಡಿರುವ ಕಾರ್ಯಕ್ಕೆ ಪತ್ನಿ ಟ್ವಿಂಕಲ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಸಹ ಮಾಡಿದ್ದರು.

  Read more about: akshay kumar
  English summary
  Bollywood Actor Akshay Kumar takes his wife Twinkle Khanna to Hospital for leg broken.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X