»   » ಅಕ್ಷಯ್ ಕುಮಾರ್ ಪ್ರಕಾರ ಹೀಗೂ ಧನ್ಯವಾದ ಹೇಳಬಹುದು

ಅಕ್ಷಯ್ ಕುಮಾರ್ ಪ್ರಕಾರ ಹೀಗೂ ಧನ್ಯವಾದ ಹೇಳಬಹುದು

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಅಭಿನಯದ 'ರುಸ್ತುಂ' ಚಿತ್ರ ಬಾಕ್ಸಾಫೀಸ್ ನಲ್ಲಿ ಯಶಸ್ಸು ಗಳಿಸುವ ಜೊತೆಗೆ, ಪ್ರೇಕ್ಷಕರ ಮನ ಗೆದ್ದಿದೆ. ಇದೀಗ ಇದೇ ಖುಷಿಯಲ್ಲಿ ನಟ ಅಕ್ಷಯ್ ಕುಮಾರ್ ಅವರು ತಮ್ಮೆಲ್ಲಾ ಬಾಲಿವುಡ್ ಗೆಳೆಯರಿಗೆ ಹಾಗೂ ಅಭಿಮಾನಿಗಳಿಗೆ ವಿಶೇಷವಾಗಿ ಜೊತೆಗೆ ವಿಭಿನ್ನವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಸಿನಿಮಾದಲ್ಲಿ ಡಿಫರೆಂಟ್ ರೋಲ್ ಮಾಡಿ ಎಲ್ಲರನ್ನೂ ನಕ್ಕು ನಗಿಸುವ ನಟ, ಇದೀಗ ತಮ್ಮ ಬಾಲಿವುಡ್ ಗೆಳೆಯರಿಗೂ ಡಿಫರೆಂಟ್ ಆಗಿ ಹಾಡು ಕಟ್ಟಿ, ಕಸರತ್ತು ಮಾಡಿ, ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ಶುಕ್ರಿಯಾ (ಧನ್ಯವಾದ) ತಿಳಿಸಿದ್ದಾರೆ.['ರುಸ್ತುಂ' ಕಲೆಕ್ಷನ್: ಬಾಕ್ಸಾಫೀಸ್ ಚಿಂದಿ ಉಡಾಯಿಸಿದ ಅಕ್ಷಯ್]

Akshay Kumar Thanks Salman, Alia and Others In The Most Awesome Way

ಭಾಯ್ ಜಾನ್ ಸಲ್ಮಾನ್ ಖಾನ್, ನಟಿ ಸೋನಂ ಕಪೂರ್, ಆಲಿಯಾ ಭಟ್, ರಣವೀರ್ ಸಿಂಗ್, ಫವಾದ್ ಖಾನ್, ಸೋನಾಕ್ಷಿ ಸಿನ್ಹಾ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಅವರೆಲ್ಲಾ, ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ 'ರುಸ್ತುಂ' ಚಿತ್ರದ ಪ್ರೊಮೋಷನ್ ಮಾಡಿದ್ದರು.[ನಾವು ಹೇಳಿದ್ಹಂಗೆ ಆಯ್ತು : ಅಪ್ಪು-ಅಕ್ಷಯ್ ಬಗ್ಗೆ ಬ್ರೇಕಿಂಗ್ ಬಂತು.!]

Akshay Kumar Thanks Salman, Alia and Others In The Most Awesome Way

ಅದಕ್ಕಾಗಿ ನಟ ಅಕ್ಷಯ್ ಕುಮಾರ್ ಅವರು ವಿಭಿನ್ನವಾಗಿ ತಮ್ಮದೇ ಆದ ಶೈಲಿಯಲ್ಲಿ ಮಂಚದ ಮೇಲೆ ನಿಂತು, ಹಾಡು ಹೇಳಿ ಧನ್ಯವಾದ ತಿಳಿಸಿದ್ದಾರೆ. ಇದನ್ನು ನಾವು ಹೇಳುವುದಕ್ಕಿಂತ ನೀವೇ ಒಂದ್ಸಾರಿ ವಿಡಿಯೋ ನೋಡಿಬಿಡಿ...

English summary
Bollywood Actor Akshay Kumar's latest Facebook video, in which he can be seen thanking all his friends and fans for promoting 'Rustom', by singing a witty song that includes other celebs' upcoming film names.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada