For Quick Alerts
  ALLOW NOTIFICATIONS  
  For Daily Alerts

  ತಾನು ಧರಿಸಿದ್ದ ಬಟ್ಟೆಯನ್ನು ಹರಾಜಿಗೆ ಇಟ್ಟ ಅಕ್ಷಯ್ ಕುಮಾರ್

  By Naveen
  |

  ಸಿನಿಮಾದಲ್ಲಿ ನಟ, ನಟಿಯರು ಬಳಸಿರುವ ಬಟ್ಟೆಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುತ್ತದೆ. ಅದೇ ರೀತಿ ಅಭಿಮಾನಿಗಳು ಬೆಲೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸ್ಟಾರ್ ಗಳ ವಸ್ತುಗಳನ್ನು ಖರೀದಿಸುತ್ತಾರೆ. ಈಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಾವು ತೊಟ್ಟಿದ್ದ ಬಟ್ಟೆಯನ್ನು ಹಾರಾಜಿಗೆ ಇಟ್ಟಿದ್ದಾರೆ.

  ಅಕ್ಷಯ್ ಕುಮಾರ್ ಬಟ್ಟೆ ಹಾರಾಜಿಗೆ ಇಟ್ಟಿರುವ ಹಿಂದೆ ಒಂದು ಒಳ್ಳೆಯ ಉದ್ದೇಶ ಇದೆ. ಪ್ರಾಣಿಗಳ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಅಕ್ಷಯ್ ಕುಮಾರ್ ಈ ಕೆಲಸ ಮಾಡುತ್ತಿದ್ದಾರೆ. 'ರುಸ್ತುಂ' ಚಿತ್ರದಲ್ಲಿ ತಾವು ಧರಿಸಿದ್ದ ನೇವಿ ಆಫೀಸರ್ ಯೂನಿಫಾರಂ ಅನ್ನು ಅಕ್ಷಯ್ ಈಗ ಬಿಡ್ ಮಾಡಿದ್ದಾರೆ. ಹರಾಜಿನಿಂದ ಬರುವ ಹಣವನ್ನು ಪ್ರಾಣಿಗಳ ರಕ್ಷಣೆಗಾಗಿ ಬಳಸಲಾಗುವುದಾಗಿ ಅಕ್ಷಯ್ ಹೇಳಿದ್ದಾರೆ.

  ಇತ್ತೀಚಿಗೆ ಒಂದರ ನಂತರ ಒಂದರಂತೆ ಸಾಮಾಜಿಕ ಸಂದೇಶ ಹೊಂದಿರುವ ಸಿನಿಮಾ ಮಾಡುತ್ತಿರುವ ಅಕ್ಷಯ್ ಅದೇ ರೀತಿ ಸಮಾಜಮುಖಿ ಕೆಲಸ ಮಾಡುತ್ತಾರೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಬರಪೀಡಿತ ಪ್ರದೇಶದ ರೈತರ ನೆರವಿಗೆ 90 ಲಕ್ಷ ರೂ. ಧನ ಸಹಾಯ, ಅಭಿಮಾನಿಯೊಬ್ಬರ ತಂದೆಯ ಆಸ್ಪತ್ರೆ ಖರ್ಚಿಗಾಗಿ 25 ಲಕ್ಷ ರೂ ಸಹಾಯ, ಮಹಿಳೆಯರ ಆತ್ಮರಕ್ಷಣೆಗಾಗಿ ಮಾರ್ಷಲ್ ಆರ್ಟ್‌ ಸ್ಕೂಲ್ ಸ್ಥಾಪನೆ ಸೇರಿದಂತೆ ಸಾಕಷ್ಟು ಒಳ್ಳೆ ಒಳ್ಳೆಯ ಕೆಲಸವನ್ನು ಅಕ್ಷಯ್ ಮಾಡಿದ್ದಾರೆ.

  ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ' ಸೆಟ್ ನಲ್ಲಿ ಅಗ್ನಿ ಅವಘಡ.!ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ' ಸೆಟ್ ನಲ್ಲಿ ಅಗ್ನಿ ಅವಘಡ.!

  ಅಕ್ಷಯ್ ಕುಮಾರ್ 'ಪ್ಯಾಡ್ ಮ್ಯಾನ್' ಸಿನಿಮಾದ ಗೆಲುವಿನ ನಂತರ ನಾಲ್ಕು ಹೊಸ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅಕ್ಷಯ್ ಮತ್ತು ರಜನಿಕಾಂತ್ ಕಾಂಬಿನೇಶನ್ ನಲ್ಲಿ ಬರುತ್ತಿರುವ '2.0' ಇದೇ ವರ್ಷ ಬಿಡುಗಡೆಯಾಗಲಿದೆ.

  English summary
  Actor Akshay Kumar is putting up the naval uniform, which he donned in the film "Rustom",for auction. The proceedings from the bid will support the cause of animal welfare.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X