ಗಣೇಶ್ ಆಚಾರ್ಯ ಬರ್ತಡೇಗೆ ಜನಮೆಚ್ಚಿದ ಉಡುಗೊರೆ ನೀಡಿದ ಅಕ್ಷಯ್ ಕುಮಾರ್
ಬಾಲಿವುಡ್ ಯಶಸ್ವಿ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಇತ್ತೀಚಿಗಷ್ಟೆ ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಂಡರು. ನೆಚ್ಚಿನ ಕೊರಿಯೋಗ್ರಫರ್ ಬರ್ತಡೇಗೆ ಫೋನ್ ಮೂಲಕ ಶುಭಕೋರಿದ ನಟ ಅಕ್ಷಯ್ ಕುಮಾರ್ ಜನರು ಮೆಚ್ಚುವ ಉಡುಗೊರೆ ನೀಡಿದ್ದಾರೆ. ಈ ವಿಚಾರವನ್ನು ಖುದ್ದು ಗಣೇಶ್ ಆಚಾರ್ಯ ಬಾಂಬೆ ಟೈಮ್ಸ್ ಜೊತೆ ಹೇಳಿಕೊಂಡಿದ್ದು, ಅಕ್ಷಯ್‌ಗೆ ಧನ್ಯವಾದ ಅರ್ಪಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಇಡೀ ದೇಶ ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಬಹಳಷ್ಟು ಸಮಸ್ಯೆ ಎದುರಿಸಿದೆ. ಈ ಹಂತದಲ್ಲಿ ಅಕ್ಷಯ್ ಕುಮಾರ್ ಸಾಧ್ಯವಾದಷ್ಟು ಸಹಾಯ ಮಾಡಿದರು. ಹಲವು ಸಂಘ-ಸಂಸ್ಥೆಗಳಿಗೆ ದೇಣಿಗೆ ನೀಡಿದ್ದರು. ಇದೀಗ, ಸುಮಾರು 3600 ಸಾವಿರ ಡ್ಯಾನ್ಸರ್ಸ್‌ಗೆ ಅಗತ್ಯ ವಸ್ತು ಪೂರೈಸುವ ಭರವಸೆ ಕೊಟ್ಟಿದ್ದಾರೆ. ಮುಂದೆ ಓದಿ....

ಗಣೇಶ್ ಆಚಾರ್ಯ ಫೋನ್ ಮಾಡಿದ್ದ ಅಕ್ಷಯ್
ಗಣೇಶ್ ಆಚಾರ್ಯ ಹುಟ್ಟುಹಬ್ಬ ಹಿನ್ನೆಲೆ ಫೋನ್ ಮಾಡಿದ್ದ ಅಕ್ಷಯ್ ಕುಮಾರ್, 'ನಿಮಗೆ ಏನಾದರೂ ಗಿಫ್ಟ್ ಕೊಡಬೇಕು, ಏನು ಬೇಕು ಕೇಳಿ' ಎಂದರಂತೆ. ಈ ಸಂದರ್ಭದಲ್ಲಿ ಸಾಧ್ಯವಾದರೆ ನಮ್ಮ ಜೂನಿಯರ್ ಡ್ಯಾನ್ಸರ್ ಹಾಗೂ ಕೊರಿಯೋಗ್ರಫರ್‌ಗಳಿಗೆ ಸಹಾಯ ಮಾಡಿ ಎಂದು ವಿನಂತಿಸಿದ್ದಾರೆ. ಅದಕ್ಕೆ ಕೂಡಲೇ ಒಪ್ಪಿದ ಅಕ್ಷಯ್ ಕುಮಾರ್ 3600 ಮಂದಿಗೆ ದಿನಸಿ ಕಿಟ್ ನೀಡುವುದಾಗಿ ತಿಳಿಸಿದರು ಎಂಬ ವಿಚಾರನ್ನು ಗಣೇಶ್ ಆಚಾರ್ಯ ಬಹಿರಂಗಪಡಿಸಿದರು.

ಹಣ ಅಥವಾ ದಿನಸಿ ಪಡೆಯಲಿ
ಗಣೇಶ್ ಆಚಾರ್ಯ ಫೌಂಡೇಶನ್ ಮೂಲಕ ತನ್ನ ವ್ಯಾಪ್ತಿಯಲ್ಲಿರುವ ಜೂನಿಯರ್ ಡ್ಯಾನ್ಸರ್, ಕೊರಿಯೋಗ್ರಫರ್‌ಗೆ ತಿಂಗಳ ಕಾಲ ಕುಟುಂಬ ಪೋಷಣೆಗೆ ಆಗುವಷ್ಟು ದಿನಸಿ ಅಥವಾ ಮೂಲಭೂತ ವಸ್ತುಗಳನ್ನು ಖರೀದಿಸಲು ಹಣ ನೀಡಲು ನಿರ್ಧರಿಸಿದ್ದೇವೆ. ಹಣ ಅಥವಾ ದಿನಸಿ ಕಿಟ್ ಯಾವುದು ಬೇಕು ಅದು ಅವರ ಆಯ್ಕೆ. ಎಲ್ಲವನ್ನೂ ಪ್ಯಾಕ್ ಮಾಡಿ, ಅವರ ಮನೆಗೆ ತಲುಪಿಸುವ ಕೆಲಸವನ್ನು ತನ್ನ ಪತ್ನಿ ಮಾಡಲಿದ್ದಾರೆ ಎಂದು ಗಣೇಶ್ ಆಚಾರ್ಯ ಮಾಹಿತಿ ನೀಡಿದ್ದಾರೆ.

ಗೌತಮ್ ಗಂಭೀರ್ ಫೌಂಡೇಶನ್‌ಗೆ ನೆರವು
ಈ ಹಿಂದೆ ದೆಹಲಿಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾದ ಸಂದರ್ಭದಲ್ಲಿ ನಟ ಅಕ್ಷಯ್ ಕುಮಾರ್ ಸಂಸದ ಗೌತಮ್ ಗಂಭೀರ್ ಫೌಂಡೇಶನ್‌ಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗೌತಮ್ ಗಂಭೀರ್ 'ಆಕ್ಸಿಜನ್, ಆಹಾರ ಹಾಗೂ ಔಷಧಿಗಳಿಗಾಗಿ ಈ ಹಣ ಬಳಕೆಯಾಗುತ್ತದೆ'' ಎಂದು ಪ್ರತಿಕ್ರಿಯಿಸಿದ್ದರು.
Recommended Video

100 ಆಕ್ಸಿಜನ್ ಸಾಂದ್ರಕ ವ್ಯವಸ್ಥೆ ಮಾಡಿದ್ದ ದಂಪತಿ
ಏಪ್ರಿಲ್ ತಿಂಗಳಲ್ಲಿ ದೆಹಲಿ, ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಆಕ್ಸಿಜನ್ ಸಮಸ್ಯೆ ಎದುರಾಗಿತ್ತು. ಈ ಸಮಯದಲ್ಲಿ ನಟ ಅಕ್ಷಯ್ ಕುಮಾರ್ ಮತ್ತು ಪತ್ನಿ ಟ್ವಿಂಕಲ್ ಖನ್ನಾ ವೈಯಕ್ತಿಕವಾಗಿ 100 ಆಮ್ಲಜನಕ ಸಾಂದ್ರಕದ ವ್ಯವಸ್ಥೆ ಮಾಡಿದ್ದರು.


Click it and Unblock the Notifications











