ಮೆಟ್ರೋದಲ್ಲಿ ಪ್ರಯಾಣಿಸಿದ ಅಕ್ಷಯ್ ಕುಮಾರ್: ಯಾರೂ ಕಂಡುಹಿಡಿದಿಲ್ಲ

Recommended Video

ಮೆಟ್ರೋದಲ್ಲಿ ಪ್ರಯಾಣಿಸಿದ ಅಕ್ಷಯ್ ಕುಮಾರ್ | Akshay Kumar | FILMIBEAT KANNADA

ಮೆಟ್ರೋ ವಿರೋಧಿಸಿ ಸಾಮಾಜಿಕ ಹೋರಾಟಗಾರರು, ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ, ಮೆಟ್ರೋ ಪ್ರಯಾಣ ಮಾಡಿ ಪ್ರತಿಭಟನೆಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ನಟ ಅಕ್ಷಯ್ ಕುಮಾರ್.

''ಘಾಟ್ ಕೋಪರ್ ನಿಂದ ವರ್ಸೋವಾಗೆ 'ಬಾಸ್ ರೀತಿ' ಮುಂಬೈ ಮೆಟ್ರೋದಲ್ಲಿ ಪ್ರಯಾಣ ಮಾಡುವ ಮೂಲಕ ಅತಿ ಹೆಚ್ಚು ಟ್ರಾಫಿಕ್ ಗೆ ಸೆಡ್ಡು ಹೊಡೆದೆ'' ಎಂದು ಅಕ್ಷಯ್ ಕುಮಾರ್ ಮೆಟ್ರೋದಲ್ಲಿ ಪ್ರಯಾಣ ಮಾಡಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.

''ಘಾಟ್ ಕೋಪರ್ ದಲ್ಲಿ ಚಿತ್ರೀಕರಣ ಮುಗಿಸಿ ವರ್ಸೋವಾಗೆ ಹೋಗಬೇಕಿತ್ತು. 13 ಕಿಮೀ ದೂರ ಇತ್ತು. ನನ್ನ ಮ್ಯಾಪ್ ನಲ್ಲಿ ನೋಡಿದಾಗ 2 ಗಂಟೆ ಸಮಯ ಬೇಕು ಎಂದು ತೋರಿಸುತ್ತಿತ್ತು. ಇಂತಹ ಸಮಯದಲ್ಲಿ ನನ್ನ ನಿರ್ದೇಶಕ ರಾಜ್ ಮೆಹ್ತಾ ಮೆಟ್ರೋದಲ್ಲಿ ಹೋಗು ಎಂದರು. ಜನ ಹೆಚ್ಚು ಇರ್ತಾರೆ ಹೇಗೆ ಎಂದು ಪ್ರಶ್ನಿಸಿದ್ದಕ್ಕೆ ಟ್ರೈ ಮಾಡು ಎಂದರು, ಅದಕ್ಕೆ ಬಂದೆ'' ಎಂದು ಅಕ್ಷಯ್ ಕುಮಾರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನ ಕೂಡ ಮೆಟ್ರೋ ರೈಲಿನ ಒಳಗಡೆಯೇ ಮಾಡಿದ್ದಾರೆ.

Akshay Kumar Travelled in Mumbai Metro

ಅಕ್ಷಯ್ ಕುಮಾರ್ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡುವ ಮೂಲಕ ಮುಂಬೈ ಮೆಟ್ರೋಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರು ಟೀಕಿಸುತ್ತಿದ್ದಾರೆ.

ಮೆಟ್ರೋ ಕಾಮಗಾರಿ ಹಿನ್ನಲೆ ಅರೇ ಕಾಲೋನಿಯಲ್ಲಿ ಸುಮಾರು 2600ಕ್ಕೂ ಅಧಿಕ ಗಿಡಮರಗಳನ್ನ ಕಡಿಯಲು ಮುಂಬೈ ಮಹಾನಗರ ಪಾಲಿಕೆ ಮುಂದಾಗಿದೆ. ಇದನ್ನ ಖಂಡಿಸಿ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅಮಿತಾಭ್ ಬಚ್ಚನ್ ಕೂಡ ಮುಂಬೈ ಮೆಟ್ರೋ ಬೆಂಬಲಿಸಿದ್ದಕ್ಕೆ ಅವರ ಮನೆ ಮುಂದೆ ಪ್ರತಿಭಟನೆ ಮಾಡಲಾಗಿತ್ತು.

More from Filmibeat

English summary
Bollywood super star akshay kumar travelled in mumbai metro from Ghatkopar to Versova.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X