Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕಿಲಾಡಿ' ಅಕ್ಷಯ್ ಕುಮಾರ್ ವೋಟ್ ಮಾಡದಿರಲು ಕಾರಣ ಇಲ್ಲಿದೆ!
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿಲ್ಲ. ಈ ವಿಚಾರ ಈಗ ಟ್ರೋಲ್ ಪೇಜ್ ಗಳಿಗೆ ದೊಡ್ಡ ಆಹಾರವಾಗಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಅಕ್ಷಯ್ ತಾನೆ ಹಕ್ಕು ಚಲಾಯಿಸದೆ ಇರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತೆ ಸಿನಿಮಾ ತಾರೆಯರಲ್ಲಿ ಮನವಿ ಮಾಡಿಕೊಂಡಿದ್ದರು. ಅಕ್ಷಯ್ ಹೆಸರನ್ನು ಸೂಚಿಸಿದ್ದರು. ಅಷ್ಟೆಯಲ್ಲದೆ ಮೊನ್ನೆ ಮೊನ್ನೆಯಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ಮಾಡಿ ವಿರೋದ ಪಕ್ಷದವರ ಕೆಂಗಣ್ಣಿಗು ಗುರಿಯಾಗಿದ್ದರು. ಇಷ್ಟೆಲ್ಲ ಮಾಡುವ ಅಕ್ಷಯ್ ಮಾತದಾನ ಯಾಕೆ ಮಾಡಲಿಲ್ಲ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.
ಸಿಕ್ಸರ್ ಮೇಲೆ ಸಿಕ್ಸರ್ ಹೊಡಿತ್ತಿದ್ದಾರೆ ಅಕ್ಷಯ್ ಕುಮಾರ್
ಆದ್ರೆ ಈ ಬಗ್ಗೆ ಅಕ್ಷಯ್ ಕುಮಾರ್ ಅವರನ್ನ ಕೇಳಿದ್ರೆ ಉತ್ತರ ಕೊಡದೆ ಸಿಟ್ಟಾಗುತ್ತಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ 'ಚಲಿಯೆ ಬೇಟಾ' ಎಂದು ಹೇಳುತ್ತಾ ಪತ್ರಕರ್ತನ ಬೆನ್ನು ತಟ್ಟಿ ಹಾಗೆ ವಾಪಸ್ ಆಗಿದ್ದಾರೆ. ಮತದಾನ ಮಾಡದೆ ಬಗ್ಗೆ ಎಲ್ಲೂ ಮಾತನಾಡಲು ಇಷ್ಟಪಡುತ್ತಿಲ್ಲ ಅಕ್ಷಯ್.
ಅಸಲಿಗೆ ಅಕ್ಷಯ್ ಮತದಾನ ಮಾಡದೆ ಇರಲು ಒಂದು ಬಲವಾದ ಕಾರಣವಿದೆ. ಯಾಕಂದ್ರೆ ಅಕ್ಷಯ್ ಹೆಸರು ಮತದಾನದ ಲಿಸ್ಟ್ ನಲ್ಲಿ ಇಲ್ಲ. ಕಿಲಾಡಿ ಕೆನಡಾದ ಪ್ರಜೆಯಾಗಿದ್ದಾರೆ. ಅವರ ಬಳಿ ಕೆನಡಾ ಪಾಸ್ ಪೋರ್ಟ್ ಇದೆ. ಹಾಗಾಗಿ ಅಕ್ಷಯ್ ಭಾರತದಲ್ಲಿ ತನ್ನ ಹಕ್ಕು ಚಲಾಯಿಸಲಿಲ್ಲ. ಆದ್ರೆ ಅಕ್ಕಿ ಇದನ್ನು ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ. ಬದಲಿಗೆ ಸಿಕ್ಕಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದಾರೆ.