Just In
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೀರು ಮಿತಬಳಕೆ ಜಾಗೃತಿ ಮೂಡಿಸಲು 21 ಕಿ.ಮೀ ನಡೆದ ಅಕ್ಷಯ್ ಕುಮಾರ್
ನಟ ಅಕ್ಷಯ್ ಕುಮಾರ್ ಸಿನಿಮಾಗಳ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸರ್ಕಾರದ ಕೆಲವು ಜನೋಪಯೋಗಿ ಕಾರ್ಯಗಳಿಗೆ ರಾಯಭಾರಿ ಸಹ ಆಗಿದ್ದಾರೆ ಅಕ್ಷಯ್ ಕುಮಾರ್.
ಇದೀಗ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಬರೋಬ್ಬರಿ 21 ಕಿ.ಮೀ ನಡೆದಿದ್ದಾರೆ ನಟ ಅಕ್ಷಯ್ ಕುಮಾರ್.
ನೀರಿನ ಅಭಾವ ಎಂಬುದು ಬಹು ಭೀಕರವಾಗಿರುತ್ತದೆ. ಇಂದು ನೀರಿನ ಸಂರಕ್ಷಣೆ ಮಾಡದಿದ್ದಲ್ಲಿ ನಮ್ಮ ಭವಿಷ್ಯ ಭೀಕರವಾಗಲಿದೆ ಎಂದಿರುವ ನಟ ಅಕ್ಷಯ್ ಕುಮಾರ್. ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲೆಂದು ಟ್ರೆಡ್‌ಮೀಲ್ ಮೇಲೆ 21 ಕಿ.ಮೀ ಕ್ರಮಿಸಿದ್ದಾರೆ.
ಮಹಿಳೆಯರು ಕುಡಿಯುವ ನೀರಿಗಾಗಿ ಹಲವಾರು ಕಿಲೋ ಮೀಟರ್ ಕ್ರಮಿಸುವ ಪರಿಸ್ಥಿತಿ ಹಲವು ಗ್ರಾಮಗಳಲ್ಲಿ ಇದೆ ಮಹಿಳೆಯರ ಆ ಶ್ರಮವನ್ನು ಪ್ರತಿನಿಧಿಸಲು ಅಕ್ಷಯ್ ಕುಮಾರ್ ಟ್ರೆಡ್‌ಮಿಲ್ ಮೇಲೆ 21 ಕಿ.ಮೀ ನಡೆದಿದ್ದಾರೆ.
ಆದರೆ ನಟ ಅಕ್ಷಯ್ ಕುಮಾರ್ ಅವರ ಈ ಟ್ರೆಡ್ ಮಿಲ್ ನಡಿಗೆಗೆ ಹಲವರು ಟೀಕೆಯನ್ನೂ ಮಾಡಿದ್ದಾರೆ. ನಾಲ್ಕು ಗೋಡೆ ಟ್ರೆಡ್‌ಮಿಲ್ ಮೇಲೆ ನಡೆಯುವುದರಿಂದ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಅಕ್ಷಯ್, ತಮ್ಮ ಅನುಕೂಲಕ್ಕೆ ತಕ್ಕಂತೆ 'ಜಾಗೃತಿ ಕಾರ್ಯಕ್ರಮ' ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಕೆಲವು ನೆಟ್ಟಿಗರು.
ಬಾಲಿವುಡ್ ನ ಹಲವು ನಟರು ನೀರಿನ ಮಿತಬಳಕೆ ಹಾಗೂ ಜನಮೂಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಟ ಅಮೀರ್ ಖಾನ್ ನಡೆಸುವ 'ವಾಟರ್ ಕಪ್' ನೀರು ಕುರಿತ ಜಾಗೃತಿ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಕಾರ್ಯಕ್ರಮ ಎನ್ನಲಾಗುತ್ತದೆ.