twitter
    For Quick Alerts
    ALLOW NOTIFICATIONS  
    For Daily Alerts

    ನೀರು ಮಿತಬಳಕೆ ಜಾಗೃತಿ ಮೂಡಿಸಲು 21 ಕಿ.ಮೀ ನಡೆದ ಅಕ್ಷಯ್ ಕುಮಾರ್

    |

    ನಟ ಅಕ್ಷಯ್ ಕುಮಾರ್ ಸಿನಿಮಾಗಳ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸರ್ಕಾರದ ಕೆಲವು ಜನೋಪಯೋಗಿ ಕಾರ್ಯಗಳಿಗೆ ರಾಯಭಾರಿ ಸಹ ಆಗಿದ್ದಾರೆ ಅಕ್ಷಯ್ ಕುಮಾರ್.

    ಇದೀಗ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಬರೋಬ್ಬರಿ 21 ಕಿ.ಮೀ ನಡೆದಿದ್ದಾರೆ ನಟ ಅಕ್ಷಯ್ ಕುಮಾರ್.

    ನೀರಿನ ಅಭಾವ ಎಂಬುದು ಬಹು ಭೀಕರವಾಗಿರುತ್ತದೆ. ಇಂದು ನೀರಿನ ಸಂರಕ್ಷಣೆ ಮಾಡದಿದ್ದಲ್ಲಿ ನಮ್ಮ ಭವಿಷ್ಯ ಭೀಕರವಾಗಲಿದೆ ಎಂದಿರುವ ನಟ ಅಕ್ಷಯ್ ಕುಮಾರ್. ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲೆಂದು ಟ್ರೆಡ್‌ಮೀಲ್‌ ಮೇಲೆ 21 ಕಿ.ಮೀ ಕ್ರಮಿಸಿದ್ದಾರೆ.

    Akshay Kumar Walked 21 KM On Treadmill To Create Awareness About Water

    ಮಹಿಳೆಯರು ಕುಡಿಯುವ ನೀರಿಗಾಗಿ ಹಲವಾರು ಕಿಲೋ ಮೀಟರ್ ಕ್ರಮಿಸುವ ಪರಿಸ್ಥಿತಿ ಹಲವು ಗ್ರಾಮಗಳಲ್ಲಿ ಇದೆ ಮಹಿಳೆಯರ ಆ ಶ್ರಮವನ್ನು ಪ್ರತಿನಿಧಿಸಲು ಅಕ್ಷಯ್ ಕುಮಾರ್ ಟ್ರೆಡ್‌ಮಿಲ್‌ ಮೇಲೆ 21 ಕಿ.ಮೀ ನಡೆದಿದ್ದಾರೆ.

    ಆದರೆ ನಟ ಅಕ್ಷಯ್ ಕುಮಾರ್ ಅವರ ಈ ಟ್ರೆಡ್ ಮಿಲ್ ನಡಿಗೆಗೆ ಹಲವರು ಟೀಕೆಯನ್ನೂ ಮಾಡಿದ್ದಾರೆ. ನಾಲ್ಕು ಗೋಡೆ ಟ್ರೆಡ್‌ಮಿಲ್‌ ಮೇಲೆ ನಡೆಯುವುದರಿಂದ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಅಕ್ಷಯ್, ತಮ್ಮ ಅನುಕೂಲಕ್ಕೆ ತಕ್ಕಂತೆ 'ಜಾಗೃತಿ ಕಾರ್ಯಕ್ರಮ' ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಕೆಲವು ನೆಟ್ಟಿಗರು.

    Recommended Video

    ಇದುನ್ನ ನಾವಿಬ್ರು ಮಾಡೋಣ ಅಂತ ನಾನೇ ಐಂದ್ರಿತಾಗೆ ಹೇಳಿದ್ದು | Filmibeat Kannada

    ಬಾಲಿವುಡ್‌ ನ ಹಲವು ನಟರು ನೀರಿನ ಮಿತಬಳಕೆ ಹಾಗೂ ಜನಮೂಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಟ ಅಮೀರ್ ಖಾನ್ ನಡೆಸುವ 'ವಾಟರ್ ಕಪ್' ನೀರು ಕುರಿತ ಜಾಗೃತಿ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಕಾರ್ಯಕ್ರಮ ಎನ್ನಲಾಗುತ್ತದೆ.

    English summary
    Actor Akshay Kumar walked 21 km on treadmill to create awareness about water conservation.
    Wednesday, January 27, 2021, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X