ಅಕ್ಷಯ್ ಕುಮಾರ್ ಗಿಂತ ಸ್ಮಾರ್ಟ್, ಎತ್ತರ, ಒಳ್ಳೆಯವನು ಈ ಹುಡುಗ

ಬಾಲಿವುಡ್ ನಟ ಅಕ್ಷಯ್ ಕುಮಾರ್ ನಿಜ ಜೀವನದಲ್ಲೂ ಹೀರೋ. ಸಿನಿಮಾಗಳ ಮೂಲಕ ಮನರಂಜನೆ ನೀಡುವ ಈ ಸ್ಟಾರ್ ನಟ, ಅದೇಷ್ಟೋ ಸಾಮಾಜಿಕ ಕೆಲಸಗಳನ್ನ ಕೂಡ ಮಾಡ್ತಿದ್ದಾರೆ. ತಮ್ಮ ಪ್ರತಿಯೊಂದು ಸಿನಿಮಾದಲ್ಲೂ ಕೂಡ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುತ್ತಾ ಬಂದಿದ್ದಾರೆ.

ಇಂತಹ ನಟನಿಗಿಂತ ಸ್ಮಾರ್ಟ್, ಎತ್ತರವಾಗಿರುವ, ಬುದ್ದಿವಂತನಾಗಿರುವ, ಒಳ್ಳೆಯವನಾಗಿರುವ ಹುಡುಗನನ್ನ ಸ್ವತಃ ಅಕ್ಷಯ್ ಕುಮಾರ್ ಅವರೇ ಪರಿಚಯ ಮಾಡಿಕೊಟ್ಟಿದ್ದಾರೆ.

ಹೌದು, ಅಕ್ಷಯ್ ಕುಮಾರ್ ಅವರ ಮಗನ ಅರವ್ ಇತ್ತೀಚಿಗಷ್ಟೆ 16ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಈ ವಿಶೇಷವಾಗಿ ಶುಭಕೋರಿರುವ ನಟ ಅಕ್ಷಯ್ ಕುಮಾರ್ ತಮ್ಮ ಮಗನ ಬಗ್ಗೆ ಹೀಗೆ ಕೊಂಡಾಡಿದ್ದಾರೆ.

Akshay Kumar wishes son Aarav

''ನನಗಿಂತ ಎತ್ತರ, ನನಗಿಂತ ಸ್ಮಾರ್ಟ್, ನನಗಿಂತ ಹೆಚ್ಚು ಶ್ರೀಮಂತ, ನನಗಿಂತ ಒಳ್ಳೆಯ ವ್ಯಕ್ತಿ. ನೀನು ಯಾವಾಗಲೂ ಖುಷಿಯಾಗಿರು, ಹ್ಯಾಪಿ ಬರ್ತಡೇ'' ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಇನ್ನು ಅರವ್ ಸಿನಿಮಾ ಇಂಡಸ್ಟ್ರಿಗೆ ಬರುವ ಬಗ್ಗೆ ಈ ಹಿಂದಿನಿಂದಲೂ ಚರ್ಚೆಯಾಗುತ್ತಿದೆ. ಆದ್ರೆ, ಸದ್ಯಕ್ಕೆ ಶಿಕ್ಷಣದ ಬಗ್ಗೆ ಮಾತ್ರ ಗಮನ ಹರಿಸುತ್ತಿರುವುದಾಗಿ ಅಕ್ಷಯ್ ಕುಮಾರ್ ತಿಳಿಸಿದ್ದರು.

ಸದ್ಯ, ಅಕ್ಷಯ ಕುಮಾರ್ 'ಕೇಸರಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಕೇಸರಿ' ಚಿತ್ರವನ್ನ ಪಂಜಾಬಿಯ ಖ್ಯಾತ ನಿರ್ದೇಶಕ ಅನುರಾಗ್ ಸಿಂಗ್ ಡೈರೆಕ್ಟ್ ಮಾಡುತ್ತಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಹಾಗೂ ಕೇಪ್ ಆಫ್ ಗುಡ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಕೇಸರಿ ತೆರೆಗೆ ಬರಲಿದೆ.

'ಕೇಸರಿ' ಸಿನಿಮಾ ಐತಿಹಾಸಿಕ ಕಥೆಯಾಗಿದ್ದು, 1987ರಲ್ಲಿ ನಡೆದ ಸಾರಗರ್ಹಿ ಕದನದ ಕಥೆ ಹೊಂದಿದೆ. ಈ ಕದನದಲ್ಲಿ 21 ಸಿಖ್ಖರು, 10 ಸಾವಿರ ಅಫ್ಘಾನ್ ಗಳ ವಿರುದ್ಧ ಹೋರಾಡಿದ್ದರು. ಈ ಕಥೆಯನ್ನಿಟ್ಟು 'ಕೇಸರಿ' ಸಿನಿಮಾ ಮಾಡಲಾಗಿದೆ.

More from Filmibeat

English summary
Akshay Kumar wishes son Aarav on birthday, says he’s smarter, nicer than him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X