ಒಂದು ಕಾಲದಲ್ಲಿ 'ಲಕ್ಕಿ'ಯಾಗಿದ್ದ 'ಅಕ್ಕಿ' ಈಗ ಬಾಲಿವುಡ್ ಪಾಲಿಗೆ 'ಅನ್ ಲಕ್ಕಿ'...!

ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಬಾಲಿವುಡ್‌ನ ಕಿಲಾಡಿ ಅಕ್ಷಯ್ ಕುಮಾರ್ ಇದಕ್ಕೆ ಸದ್ಯದ ಉದಾಹರಣೆ.

ಹೌದು, ಹಿಂದೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಾ, ಆಕಾಶಕ್ಕೆ ಏಣಿ ಹಾಕಿ ಕುಂತಿದ್ದ ಅಕ್ಕಿ ಈಗ ಇದೇ ಬಾಲಿವುಡ್‌ ಪಾಲಿಗೆ ಅನ್‌ಲಕ್ಕಿಯಾಗಿದ್ದಾರೆ. ಸೋತು ಸುಣ್ಣವಾಗಿದ್ದಾರೆ. ಹೀಗಾಗಿಯೇ ಮೊನ್ನೆ ಬಿಡುಗಡೆಯಾದ 'ಖೇಲ್ ಖೇಲ್ ಮೇ' ಮೇಲೆ ಎಲ್ಲರ ಕಣ್ಣಿತ್ತು. ಈ ಸೋಲಿನ ಸರಪಳಿ ಕಳಚಿ ಗೆಲುವು ಅಕ್ಷಯ್ ಕುಮಾರ್ ಪಾಲಾಗುತ್ತೆ ಎಂದು ಇವರ ಅಭಿಮಾನಿ ಬಣ ಅಂದುಕೊಂಡಿತ್ತು. ಆದರೆ, ದಕ್ಕಿದ್ದು ಮಾತ್ರ ನಿರಾಸೆ. ಮತ್ತೊಂದು ಸೋಲು.

Akshay Kumar s flop streak continues with Khel Khel Mein

ಆ ಕಡೆ ಸ್ತ್ರೀ 2.. ಈ ಕಡೆ ವೇದಾ.. ಇನ್ನೊಂದು ಕಡೆ ತಂಗಾಲನ್.. ಈ ಮೂವರ ನಡುವೆ ಸಿಲುಕಿಕೊಂಡ 'ಖೇಲ್ ಖೇಲ್ ಮೇ' ಮೊದಲ ದಿನ ಕೇವಲ ಐದು ಕೋಟಿಯನ್ನಷ್ಟೇ ಗಳಿಸಿತು. ಎರಡನೇ ದಿನ ಎರಡು ಕೋಟಿಯನ್ನು ಗಳಿಸಿದ ಚಿತ್ರ, ಮೂರನೇ ದಿನ ಮೂರು ಕೋಟಿಯನ್ನಷ್ಟೇ ಗಳಿಸಿತು. ನಿಜಾ, ನಾಲ್ಕನೇ ದಿನದ ಗಳಿಕೆಯಲ್ಲಿ ಏರಿಕೆಯಾಯಿತು. ಹತ್ ಹತ್ರ ನಾಲ್ಕು ಕೋಟಿ ಹಣ ಕೂಡ ಹರಿದು ಬಂತು. ಆದರೆ, ಈ ನಾಲ್ಕು ದಿನದ ಗಳಿಕೆಯನ್ನು ಕೂಡಿಸಿದರು 15 ಕೋಟಿಯ ಗಡಿಯನ್ನು ಕೂಡ ಚಿತ್ರ ತಲುಪದಿರುವುದು ದುರದೃಷ್ಟಕರ.

ಹೀಗಾಗಿಯೇ ಅಕ್ಷಯ್ ಕುಮಾರ್ ಹೆಸರಿಗೆ ಇರುವ ಬೆಲೆ ಇಷ್ಟೇನಾ ಎಂಬ ಪ್ರಶ್ನೆ ಅನೇಕರನ್ನು ಈಗ ಕಾಡುತ್ತಿದೆ. ಇವತ್ತು ಚಿತ್ರದ ಗಳಿಕೆ ಪಾತಾಳಕ್ಕೆ ಕುಸಿಯುವ ಮೂಲಕ ಮತ್ತೊಂದು ಸೋಲು ಅಕ್ಷಯ್ ಕುಮಾರ್ ಖಾತೆಗೆ ಜಮೆಯಾಗಿದೆ.

akshay-kumars-flop-streak-continues-with-khel-khel-mein

ಇನ್ನೂ ವಿಶೇಷ ಅಂದರೆ ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸುತ್ತಿರುವ ಸ್ತ್ರೀ -02 ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೆಸ್ಟ್ ರೋಲ್ ಮಾಡಿದ್ದಾರೆ. ಆದರೆ, ಖೇಲ್ ಖೇಲ್ ಮೇ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರನ್ನು ನೋಡಲು ತೆರಳದ ಪ್ರೇಕ್ಷಕರು, ಸ್ತ್ರೀ 2 ಚಿತ್ರದಲ್ಲಿ ಇವರ ಚಿಕ್ಕ ಪಾತ್ರಕ್ಕೆ ಶಿಳ್ಳೆ-ಚಪ್ಪಾಳೆ ಹೊಡೆಯುತ್ತಿದ್ದಾರೆ. ಅಕ್ಷಯ್ ಕುಮಾರ್ ಅಭಿನಯವನ್ನು ಹಾಡಿ ಹೊಗಳುತ್ತಿದ್ದಾರೆ. ಪ್ರೇಕ್ಷಕರ ಈ ನಡೆ ಬಾಲಿವುಡ್ ಸೇರಿ ಅಕ್ಷಯ್ ಕುಮಾರ್ ಅವರನ್ನು ಗೊಂದಲಕ್ಕೀಡು ಮಾಡಿದೆ. ಅಕ್ಷಯ್ ಕುಮಾರ್ ಅವರ ಮುಂದಿನ ಚಿತ್ರಗಳ ನಿರ್ಮಾಪಕರ ಚಿಂತೆಯನ್ನು ಹೆಚ್ಚು ಮಾಡಿದೆ.

ಅಂದ್ಹಾಗೇ ಅಕ್ಷಯ್ ಕುಮಾರ್ ಸದ್ಯಕ್ಕೆ 'ಸ್ಕೈ ಪೋರ್ಸ್‌' ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಆಕ್ಷನ್ ಹೀರೋ ಅವತಾರದಲ್ಲಿ ಕಾಣಸಿಗುವ ಅಕ್ಷಯ್ ಕುಮಾರ್ ಆ ನಂತರ 'ಜಾಲಿ ಎಲ್ ಎಲ್ ಬಿ'ಯ ಭಾಗ 3 ಮತ್ತು 'ವೆಲ್ ಕಂ ಟು ಜಂಗಲ್' ಚಿತ್ರದ ಮೂಲಕ ಹಾಸ್ಯದ ರಸದೌತಣ ಬಡಿಸಲಿದ್ದಾರೆ. ಇವೆರಡು ಚಿತ್ರಗಳನ್ನು ಹೊರತು ಪಡಿಸಿದರೆ 'ಫಿರ್ ಹೇರಾ ಫೇರಿ' ಮತ್ತು ಹೌಸ್‌ಫುಲ್ 5 ಚಿತ್ರದಲ್ಲಿ ಕೂಡ ಆಕ್ಟ್ ಮಾಡುತ್ತಿದ್ದಾರೆ ಕಿಲಾಡಿ ಅಕ್ಷಯ್ ಕುಮಾರ್

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X