ಬಿಟೌನ್ ಇಂಡಸ್ಟ್ರಿಯಲ್ಲಿ ವಿಶಿಷ್ಟ ದಾಖಲೆ ಬರೆದ ಅಕ್ಷಯ್ ಕುಮಾರ್

By Bharath Kumar

ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ 'ಗೋಲ್ಡ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬಿಸ್ ನೆಸ್ ಮಾಡ್ತಿದೆ. ಮೊದಲ ನಾಲ್ಕು ದಿನದಲ್ಲಿ 50 ಕೋಟಿ ಗಳಿಸಿದ್ದ ಚಿತ್ರ ಈಗ ನೂರು ಕೋಟಿ ಕ್ಲಬ್ ಸೇರಿದೆ.

ಹೀಗಾಗಿ, ಅಕ್ಷಯ್ ಕುಮಾರ್ ವೃತ್ತಿ ಜೀವನದ ಮತ್ತೊಂದು ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿದೆ. ಇದಕ್ಕು ಮುಂಚೆ ಅಕ್ಷಯ್ ಅಭಿನಯದ ಎಂಟು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದೆ. ಈಗ ಗೋಲ್ಡ್ ಒಂಭತ್ತನೇ ಚಿತ್ರ.

ಇನ್ನು ಈ ವರ್ಷದ ಸೂಪರ್ ಹಿಟ್ ಬಾಲಿವುಡ್ ಚಿತ್ರಗಳ ಸಾಲಿನಲ್ಲಿ ಗೋಲ್ಡ್ ಸಿನಿಮಾ ಸ್ಥಾನ ಪಡೆದುಕೊಂಡಿದ್ದು, ಅತಿ ಹೆಚ್ಚು ಗಳಿಸಿದ ಸಿನಿಮಾಗಳ ಪೈಕಿ ಗೋಲ್ಡ್ ಚಿತ್ರವೂ ಪೈಪೋಟಿ ನಡೆಸುತ್ತಿದೆ. ಹಾಗಿದ್ರೆ, ಅಕ್ಷಯ್ ಕುಮಾರ್ ಅವರ ಈ ಹಿಂದಿನ ಯಾವ ಚಿತ್ರಗಳ ನೂರು ಕೋಟಿ ಕ್ಲಬ್ ಗೆ ಸೇರಿತ್ತು.? ಮುಂದೆ ಓದಿ....

'ಗೋಲ್ಡ್' ಒಂಭತ್ತನೇ ಸಿನಿಮಾ

'ಗೋಲ್ಡ್' ಒಂಭತ್ತನೇ ಸಿನಿಮಾ

ಅಕ್ಷಯ್ ಕುಮಾರ್ ವೃತ್ತಿಜೀವನದಲ್ಲಿ ಒಂಭತ್ತನೇ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ದಾಖಲೆ ಮಾಡಿದೆ. ಸತತ ಹಿಟ್ ಸಿನಿಮಾ ಮಾಡುತ್ತಿರುವ ಅಕ್ಕಿ ವಿಶೇಷವಾದ ಸಿನಿಮಾಗಳು ಮೂಲಕ ಖಾನ್ ಗಳ ಅಬ್ಬರ ಮಧ್ಯೆ ವಿಶೇಷವಾಗಿ ನಿಂತಿದ್ದಾರೆ.

ಸಲ್ಮಾನ್ ಖಾನ್ ನಂತರ ಅಕ್ಕಿ

ಸಲ್ಮಾನ್ ಖಾನ್ ನಂತರ ಅಕ್ಕಿ

ಸದ್ಯ ಬಾಲಿವುಡ್ ಪೈಕಿ ಸಲ್ಮಾನ್ ಖಾನ್ ಅಭಿನಯದ ಚಿತ್ರಗಳು ಅತಿ ಹೆಚ್ಚು ನೂರು ಕೋಟಿ ಗಳಿಸಿದೆ. 13 ಸಿನಿಮಾಗಳು ನೂರು ಕೋಟಿ ಗಳಿಸಿದ್ದು ಸಲ್ಲು ಮೊದಲ ಸ್ಥಾನದಲ್ಲಿದ್ದಾರೆ. ಸಲ್ಮಾನ್ ಖಾನ್ ಬಿಟ್ಟರೇ ಎರಡನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ದಾರೆ.

ಕಳೆದ ನಾಲ್ಕೈದು ವರ್ಷದಿಂದ ಹಿಟ್ ಮೇಲೆ ಹಿಟ್

ಕಳೆದ ನಾಲ್ಕೈದು ವರ್ಷದಿಂದ ಹಿಟ್ ಮೇಲೆ ಹಿಟ್

2012 ರಲ್ಲಿ ತೆರೆಕಂಡಿದ್ದ 'ರೌಡಿ ರಾಥೋರ್' ಸಿನಿಮಾ ಮೊದಲ ಬಾರಿಗೆ ನೂರು ಕೋಟಿ ಕ್ಲಬ್ ಸೇರಿತ್ತು. ಅಲ್ಲಿಂದ 'ಏರ್ ಲಿಫ್ಟ್', 'ರುಸ್ತುಂ', 'ಜಾಲಿ ಎಲ್.ಎಲ್.ಬಿ', 'ಹೌಸ್ ಫುಲ್-2', 'ಹಾಲಿಡೇ', 'ಹೌಸ್ ಫುಲ್-3', 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರಗಳು ಶತಕೋಟಿಯ ಕ್ಲಬ್ ನಲ್ಲಿ ಸ್ಥಾನ ಪಡೆದುಕೊಂಡಿತ್ತು. ಈಗ ಗೋಲ್ಡ್ ಒಂಭತ್ತನೇ ಸಿನಿಮಾ.

ಈ ವರ್ಷದ ಏಂಟನೇ ಸಿನಿಮಾ

ಈ ವರ್ಷದ ಏಂಟನೇ ಸಿನಿಮಾ

ಅಂದ್ಹಾಗೆ, ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ಗೋಲ್ಡ್ ಸಿನಿಮಾ ಏಂಟನೇ ಸ್ಥಾನದಲ್ಲಿದೆ. ದೀಪಿಕಾ ಪಡುಕೋಣೆ ಅಭಿನಯಿಸಿದ್ದ ಪದ್ಮಾವತ್ ಚಿತ್ರದ ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ.

'ಪದ್ಮಾವತ್' ಟು 'ಗೋಲ್ಡ್'

'ಪದ್ಮಾವತ್' ಟು 'ಗೋಲ್ಡ್'

ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್, ಸೋನು ಕಿ ತಿಟು ಕಿ ಸ್ವೀಟಿ, ರೈಡ್, ಭಾಗಿ 2, ರಾಝೀ, ರೇಸ್ 3, ಸಂಜು, ಚಿತ್ರಗಳು ಈ ವರ್ಷ ನೂರು ಕೋಟಿ ಗಳಿಸುವ ಮೂಲಕ ಬಾಲಿವುಡ್ ನಲ್ಲಿ ಸದ್ದು ಮಾಡಿವೆ.

More from Filmibeat

English summary
Akshay Kumar’s Gold has recorded an trend at the Box-Office as the film is inching close to the 100 crore mark at the box office. Gold movie is The 9th Akshay Kumar Film To Enter The 100 Crore Club – 2nd Highest Of All Time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X