ಯಶ್ 'ಟಾಕ್ಸಿಕ್' ಮೇಕಿಂಗ್ ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟ ನಟ ಅಕ್ಷಯ್ ಒಬೆರಾಯ್

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಗ್ಗೆ ಭಾರತೀಯ ಚಿತ್ರರಂಗದಲ್ಲಿ ಭಾರೀ ಚರ್ಚೆ ಆಗ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕೊನೆ ಹಂತದ ಚಿತ್ರೀಕರಣ ನಡೀತಿದೆ. ಈಗಾಗಲೇ ಶೇಕಡಾ 60% ಸಿನಿಮಾ ಸಂಪೂರ್ಣವಾಗಿದೆ. ಚಿತ್ರದ ಮೇಕಿಂಗ್ ಬಗ್ಗೆ ಚಿತ್ರದಲ್ಲಿ ನಟಿಸಿರುವ ನಟ ಅಕ್ಷಯ್ ಒಬೆರಾಯ್ ಮಾತನಾಡಿದ್ದಾರೆ.

'KGF' ಸರಣಿ ಬಳಿಕ ಯಶ್ ನಟಿಸುತ್ತಿರುವ ಸಿನಿಮಾ ಇದು. ಅಳೆದು ತೂಗಿ ರಾಕಿಂಗ್ ಸ್ಟಾರ್ ಈ ಕಥೆ ಆಯ್ಕೆ ಮಾಡಿಕೊಂಡಿದ್ದರು. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ತಾವೇ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಯನತಾರಾ, ಹುಮಾ ಖುರೇಶಿ, ಕಿಯಾರಾ ಅದ್ವಾನಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹಾಲಿವುಡ್ ತಂತ್ರಜ್ಞರು, ಬ್ರಿಟೀಷ್ ಕಲಾವಿದರು 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ರೇಂಜ್ ಸಿನಿಮಾ ಇದಾಗಿದೆ.

Akshay Oberoi Shares Experience Working with Yash as Toxic Gears Up for March 19 Release

ಯುಎಸ್‌ನಲ್ಲಿ ನೆಲೆಸಿರುವ ಭಾರತ ಮೂಲದ ನಟ ಅಕ್ಷಯ್ ಒಬೆರಾಯ್ 'ಟಾಕ್ಸಿಕ್' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಕೆಲಸ ಮಾಡಿದ ಅನುಭವವನ್ನು ಅವರು ಬಿಚ್ಚಿಟ್ಟಿದ್ದಾರೆ. 'ಟಾಕ್ಸಿಕ್' ಸಿನಿಮಾ ಮೇಕಿಂಗ್ ಬಗ್ಗೆ ಮಾತನಾಡಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗುತ್ತಿರುವ ಬಗ್ಗೆ ಅವರು ತಿಳಿಸಿದ್ದಾರೆ. The Motor Mouth ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅಕ್ಷಯ್ ಮಾತನಾಡಿದ್ದಾರೆ.

'ಟಾಕ್ಸಿಕ್' ಚಿತ್ರವನ್ನು ಏಕಕಾಲಕ್ಕೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ನನಗೆ ಇಂಗ್ಲೀಷ್‌ಗಿಂತ ಕನ್ನಡ ಸುಲಭ ಎನಿಸಿತು. ಭಾರತೀಯ ಭಾಷೆಗಳಲ್ಲಿ ಭಾವನೆಗಳನ್ನು ಚೆನ್ನಾಗಿ ಅಭಿವ್ಯಕ್ತಿಗೊಳಿಸಬಹುದು. ಇಂಗ್ಲೀಷ್‌ನಲ್ಲಿ ಅದು ಸಾಧ್ಯವಿಲ್ಲ. ಹಾಗಾಗಿ ಕನ್ನಡದಲ್ಲಿ ಮಾತನಾಡುವುದು ನನಗೆ ಬಗಳ ಆಪ್ತ ಎನಿಸಿತು. ಕನ್ನಡ ತರಬೇತುದಾದರು ನಮಗೆ ಭಾಷೆ ಹೇಳಿಕೊಟ್ರು. ನಾನು ಯಾವುದೇ ಭಾಷೆಯ ಉಚ್ಛಾರಣೆ ಬೇಗ ಗ್ರಹಿಸುತ್ತೇನೆ" ಎಂದು ಅಕ್ಷಯ್ ಹೇಳಿದ್ದಾರೆ.

ಇನ್ನು ನಟ ಯಶ್ ಬಗ್ಗೆಯೂ ಅಕ್ಷಯ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಯಶ್ ಅವರನ್ನು ನಾನು 'ಬಾಸ್' ಎಂದೇ ಕರೆಯುತ್ತೇನೆ. ಅವರ ಪ್ರಭಾವಳಿ ಆ ರೀತಿ ಇರುತ್ತದೆ. 'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿ ತೊಟ್ಟಿದ್ದ ಕಾಸ್ಟ್ಯೂಮ್‌ನಲ್ಲಿ ಮೊದಲಿಗೆ ಯಶ್ ಅವರನ್ನು ನೋಡಿದ್ದೆ. ಅವರು ನಡೆದು ಬರುತ್ತಿದ್ದರೆ ಬಹಳ ಸುಂದರವಾಗಿ ಕಾಣುತ್ತಿದ್ದರು. 'KGF' ಚಿತ್ರದಲ್ಲೇ ಅವ್ರು ಸಾಬೀತು ಮಾಡಿದ್ದಾರೆ. ನಾನು ಅವರ ಅಭಿಮಾನಿ. ಯಶ್ ದೂರದೃಷ್ಟಿ ಬಹಳ ವಿಶೇಷ. ಕನ್ನಡ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದವರು ಅವ್ರು. ನಿಜಕ್ಕೂ ಹ್ಯಾಟ್ಸಾಪ್" ಎಂದು ಅಕ್ಷಯ್ ಹೇಳಿರುವುದು ವೈರಲ್ ಆಗುತ್ತಿದೆ.

ಮಾರ್ಚ್ 19ಕ್ಕೆ ದೇಶ ವಿದೇಶದ ಭಾಷೆಗಳಲ್ಲಿ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದಲ್ಲಿ 69, 70ರ ದಶಕದ ಡ್ರಗ್ಸ್ ಮಾಫಿಯಾ ಕಥೆ ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಲುಕ್ ಅಭಿಮಾನಿಗಳ ಮನಗೆದ್ದಿದೆ. ಮತ್ತೊಮ್ಮೆ ಯಶ್ ಗ್ಯಾಂಗ್‌ಸ್ಟರ್ ಅವತಾರದಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ಅಬ್ಬರಿಸಲು ಬರ್ತಿದ್ದಾರೆ.

ಮುಂಬೈನಲ್ಲಿ 'ಟಾಕ್ಸಿಕ್' ಚಿತ್ರದ ಅದ್ಧೂರಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣಕ್ಕೆ ವೇದಿಕೆ ಸಿದ್ಧವಾಗಿದೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆ‌ಜೆ‌‌ಪೆರ್ರಿ ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್ಸ್ ಟೀಮ್ ಜೊತೆಗೂಡಿ ಬರೋಬ್ಬರಿ 45 ದಿನಗಳ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಮುಂದಾಗಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿದ್ದು ಇದು ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

More from Filmibeat

English summary
Yash’s Toxic Nears Completion: Akshay Oberoi Reveals Making Secrets, Grand Release on March 19
Read more about: yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X