For Quick Alerts
  ALLOW NOTIFICATIONS  
  For Daily Alerts

  ಹರಾಜಿನಲ್ಲಿರುವ ಅಕ್ಷಯ್ ಕುಮಾರ್ ಬಟ್ಟೆಯ ಬೆಲೆ ಕೋಟಿ ದಾಟಿದೆ

  By Bharath Kumar
  |

  ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ತಾವು ತೊಟ್ಟಿದ್ದ ಬಟ್ಟೆಯನ್ನ ಹಾರಾಜಿಗೆ ಇಟ್ಟಿದ್ದಾರೆ. ಪ್ರಾಣಿಗಳ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ 'ರುಸ್ತುಂ' ಚಿತ್ರದಲ್ಲಿ ತಾವು ಧರಿಸಿದ್ದ ನೇವಿ ಆಫೀಸರ್ ಯೂನಿಫಾರಂ ಅನ್ನು ಅಕ್ಷಯ್ ಈಗ ಬಿಡ್ ಮಾಡಿದ್ದಾರೆ. ಈ ಬಟ್ಟೆಯ ಬೆಲೆ ಈಗ ಕೋಟಿ ರೂಪಾಯಿ ದಾಟಿದೆ.

  ಹೌದು, ಏಪ್ರಿಲ್ 26 ರಂದು ಆರಂಭವಾಗಿರುವ ಈ ಹರಾಜು ಸುಮಾರು ಒಂದು ತಿಂಗಳು ಕಾಲ ನಡೆಯಲಿದೆ. ಸದ್ಯ, ಹರಾಜಿಗಿಟ್ಟ 24 ಗಂಟೆಗಳಲ್ಲೇ ಈ ಬಟ್ಟೆಗೆ ಕೋಟಿ ಕೋಟಿ ನೀಡಲು ಮುಂದೆ ಬಂದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮೂಲ ಬೆಲೆ 20 ಸಾವಿರ ನಿಗಿದಯಾಗಿತ್ತು, ಅದಕ್ಕೀಗ ಸುಮಾರು 2.5 ಕೋಟಿಯವರೆಗೂ ಬಿಡ್ ಹೋಗಿದೆ ಎನ್ನಲಾಗಿದೆ.

  ತಾನು ಧರಿಸಿದ್ದ ಬಟ್ಟೆಯನ್ನು ಹರಾಜಿಗೆ ಇಟ್ಟ ಅಕ್ಷಯ್ ಕುಮಾರ್ ತಾನು ಧರಿಸಿದ್ದ ಬಟ್ಟೆಯನ್ನು ಹರಾಜಿಗೆ ಇಟ್ಟ ಅಕ್ಷಯ್ ಕುಮಾರ್

  ಯಾರೂ ಬೇಕಾದರೂ ಈ ಸಮವಸ್ತ್ರವನ್ನ ಬಿಡ್ಡಿಂಗ್ ಮಾಡಬಹುದು. ಹರಾಜು ದಿನಾಂಕ ಮುಗಿಯುವಷ್ಟರಲ್ಲಿ ಸುಮಾರು 5 ಕೋಟಿ ಬರುವ ನಿರೀಕ್ಷೆ ಇದೆ. ಈ ಹರಾಜಿನಿಂದ ಬರುವ ಹಣವನ್ನು ಪ್ರಾಣಿಗಳ ರಕ್ಷಣೆಗಾಗಿ ಬಳಸಲಾಗುವುದಾಗಿ ಸ್ವತಃ ಅಕ್ಷಯ್ ಹೇಳಿರುವುದರಿಂದ ದುಬಾರಿ ಬೆಲೆಗೆ ಮಾರಾಟವಾಗುವ ಸಾಧ್ಯತೆ ಇದೆ.

  ಒಂದಲ್ಲ ಒಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಕ್ಷಯ್ ಕುಮಾರ್, ಈ ಹಿಂದೆ ಮಹಾರಾಷ್ಟ್ರದಲ್ಲಿ ಬರಪೀಡಿತ ಪ್ರದೇಶದ ರೈತರ ನೆರವಿಗೆ 90 ಲಕ್ಷ ರೂ. ಧನ ಸಹಾಯ, ಅಭಿಮಾನಿಯೊಬ್ಬರ ತಂದೆಯ ಆಸ್ಪತ್ರೆ ಖರ್ಚಿಗಾಗಿ 25 ಲಕ್ಷ ರೂ ಸಹಾಯ, ಮಹಿಳೆಯರ ಆತ್ಮರಕ್ಷಣೆಗಾಗಿ ಮಾರ್ಷಲ್ ಆರ್ಟ್‌ ಸ್ಕೂಲ್ ಸ್ಥಾಪನೆ ಸೇರಿದಂತೆ ಸಾಕಷ್ಟು ಒಳ್ಳೆ ಒಳ್ಳೆಯ ಕೆಲಸವನ್ನು ಅಕ್ಷಯ್ ಮಾಡಿದ್ದಾರೆ.

  ಅಂದ್ಹಾಗೆ, 'ರುಸ್ತಂ' ಸಿನಿಮಾ 2016ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ನೂಜ ಕಥೆಯಾಧರಿತ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿ ಸುಮಾರು 125 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು. ಇದೀಗ, 'ಪ್ಯಾಡ್ ಮ್ಯಾನ್' ಸಿನಿಮಾದ ಗೆಲುವಿನ ನಂತರ ಅಕ್ಷಯ್ ಕುಮಾರ್ ನಾಲ್ಕು ಹೊಸ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸದ್ಯ, ಅಕ್ಷಯ್ ಮತ್ತು ರಜನಿಕಾಂತ್ ಕಾಂಬಿನೇಶನ್ ನಲ್ಲಿ ಬರುತ್ತಿರುವ '2.0' ಇದೇ ವರ್ಷ ಬಿಡುಗಡೆಯಾಗಲಿದೆ.

  English summary
  Akshay Kumar has donated his Rustom uniform for fund-raising to an animal welfare NGO. Akshay’s Rustom uniform is being auctioned for crores. You won’t believe the price.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X