ವಿದೇಶದಲ್ಲಿ ಕೋಟಿಗಟ್ಟಲೆ ಹಣ ಗಳಿಸುತ್ತಿದೆ ಅಕ್ಷಯ್ ಕುಮಾರ್ ಸಿನಿಮಾ

ಕೊರೊನಾ ಕಾರಣಕ್ಕೆ ಬಂದ್ ಆಗಿದ್ದ ಚಿತ್ರಮಂದಿರಗಳು ಈಗ ಕೆಲವು ದಿನಗಳಿಂದ ತೆರೆದಿವೆಯಾದರೂ ಹೊಸ ಸಿನಿಮಾಗಳು ಬಿಡುಗಡೆ ಆಗಲು ಹಿಂದಡಿ ಇಡುತ್ತಿವೆ.

ಯಾವುದೇ ಚಿತ್ರರಂಗದ ಸ್ಟಾರ್ ನಟನೊಬ್ಬನ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಎಂಟು ತಿಂಗಳಾಗುತ್ತಾ ಬಂತು. ಅಕ್ಷಯ್ ಕುಮಾರ್, ಅಮಿತಾಬ್ ಬಚ್ಚನ್ ಇನ್ನೂ ಹಲವು ಬಾಲಿವುಡ್ ನಟರ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆಗುತ್ತಿವೆ.

ಇತ್ತೀಚೆಗಷ್ಟೆ ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ' ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಯಿತು. ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆದ ದಿನ ಅತಿ ಹೆಚ್ಚು ಜನರಿಂದ ನೋಡಲ್ಪಟ್ಟ ಎಂಬ ದಾಖಲೆ ಬರೆಯಿತು ಲಕ್ಷ್ಮಿ ಸಿನಿಮಾ. ಭಾರತದಲ್ಲಿ ಬಿಡುಗಡೆ ಆಗದಿದ್ದರೂ ಹೊರದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಇದೇ ಸಿನಿಮಾ ಕೋಟಿಗಟ್ಟಲೆ ಗಳಿಸಿದೆ.

ಹಲವು ದೇಶಗಳಲ್ಲಿ ಬಿಡುಗಡೆ ಆಗಿರುವ 'ಲಕ್ಷ್ಮಿ'

ಹಲವು ದೇಶಗಳಲ್ಲಿ ಬಿಡುಗಡೆ ಆಗಿರುವ 'ಲಕ್ಷ್ಮಿ'

ಭಾರತದಲ್ಲಿ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆದ ಅಕ್ಷಯ್ ಕುಮಾರ್ ಅವರ 'ಲಕ್ಷ್ಮಿ' ಸಿನಿಮಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಫಿಜಿ, ಪಾಪಾ ನ್ಯು ಗಿನಿ, ಯುಎಸ್‌ಎ, ದುಬೈ, ಇನ್ನೂ ಹಲವು ದೇಶಗಳಲ್ಲಿ ಬಿಡುಗಡೆ ಆಗಿದೆ. ಅಲ್ಲೆಲ್ಲಾ ಉತ್ತಮ ಪ್ರದರ್ಶನ ಕಾಣುತ್ತಿದೆ 'ಲಕ್ಷ್ಮಿ' ಸಿನಿಮಾ.

ದುಬೈನಲ್ಲಿ ಆರು ದಿನಕ್ಕೆ 1.46 ಕೋಟಿ

ದುಬೈನಲ್ಲಿ ಆರು ದಿನಕ್ಕೆ 1.46 ಕೋಟಿ

'ಲಕ್ಷ್ಮಿ' ಸಿನಿಮಾವು ವಿದೇಶದಲ್ಲಿ ಮಾಡಿರುವ ಬಾಕ್ಸ್‌ ಆಫೀಸ್ ಕಲೆಕ್ಷನ್‌ ಬಗ್ಗೆ, ಸಿನಿಮಾ ವಿಮರ್ಶಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಲಕ್ಷ್ಮಿ ಸಿನಿಮಾ ದುಬೈನಲ್ಲಿ ಆರು ದಿನದಲ್ಲಿ (ನವೆಂಬರ್ 9 ರಿಂದ ನವೆಂಬರ್ 15) 1.46 ಕೋಟಿ ಗಳಿಸಿದೆ.

ಆಸ್ಟ್ರೇಲಿಯಾದಲ್ಲಿ ಮೂರು ದಿನಕ್ಕೆ 72 ಲಕ್ಷ

ಆಸ್ಟ್ರೇಲಿಯಾದಲ್ಲಿ ಮೂರು ದಿನಕ್ಕೆ 72 ಲಕ್ಷ

ಕೊರೊನಾ ಕಡಿಮೆ ಇರುವ ನ್ಯೂಜಿಲೆಂಡ್‌ನಲ್ಲಿ 21 ಕಡೆಗಳಲ್ಲಿ 'ಲಕ್ಷ್ಮಿ' ಸಿನಿಮಾದ ಪ್ರದರ್ಶನವಾಗುತ್ತಿದ್ದು, ಇಲ್ಲಿ ಮೂರು ದಿನಕ್ಕೆ 42.38 ಲಕ್ಷ ಗಳಿಸಿದೆ. ಆಸ್ಟ್ರೇಲಿಯಾದಲ್ಲಿ 52 ಕಡೆ ಸಿನಿಮಾ ಪ್ರದರ್ಶನವಾಗುತ್ತಿದ್ದು, ಇಲ್ಲಿ ಮೂರು ದಿನಕ್ಕೆ 72.48 ಲಕ್ಷ ಹಣ ಗಳಿಸಿದೆ.

ಫಿಜಿಯಲ್ಲಿ ಮೂರು ದಿನಕ್ಕೆ 17.16 ಲಕ್ಷ

ಫಿಜಿಯಲ್ಲಿ ಮೂರು ದಿನಕ್ಕೆ 17.16 ಲಕ್ಷ

ಪಾಪಾ ನ್ಯೂ ಗಿನಿಯ ಒಂದು ಥಿಯೇಟರ್‌ನಲ್ಲಿ ಲಕ್ಷ್ಮಿ ಸಿನಿಮಾ ಬಿಡಗುಡೆ ಆಗಿದ್ದು ಒಂದು ಥಿಯೇಟರ್‌ನಲ್ಲಿ ಮೂರು ದಿನಕ್ಕೆ 18,538 ರೂ ಸಂಪಾದಿಸಿದೆ. ಫಿಜಿಯಲ್ಲಿ ಏಳು ಕಡೆ ಸಿನಿಮಾ ಪ್ರದರ್ಶನ ಕಾಣುತ್ತಿದ್ದು 3 ದಿನಕ್ಕೆ 17.16 ಲಕ್ಷ ಹಣ ಗಳಿಸಿದೆ.

More from Filmibeat

English summary
Akshay Kumar starer Laxmii movie box office collection overseas is impressive. In Coronavirus situation Laxmii earning crores of money overseas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X