ಟ್ವಿಸ್ಟ್ ಮೇಲೆ ಟ್ವಿಸ್ಟ್: ಏನಿದು 'ಶಹಜಾದೇ' V/s 'ಅಲಾ ವೈಕುಂಠಪುರಂಲೊ' ಡಬ್ಬಿಂಗ್ ವರ್ಷನ್ ಫೈಟ್?

'ಅಲಾ ವೈಕುಂಠಪುರಂಲೊ' ಸಿನಿಮಾ ಬಾಲಿವುಡ್‌ ಅಂಗಳದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿದೆ. ಒಂದ್ಕಡೆ ಸಿನಿಮಾ ಹಿಂದಿಗೆ ರೀಮೆಕ್ ಆಗಿ ರಿಲೀಸ್ ಆಗಲು ಸಿದ್ಧವಾಗಿದೆ. ಮತ್ತೊಂದು ಕಡೆ ಇದೇ ಚಿತ್ರವನ್ನು ಹಿಂದಿಗೆ ಡಬ್ ಮಾಡಿ ರಿಲೀಸ್ ಮಾಡಲು ಪೈಪೋಟಿ ನಡೀತಿದೆ. ಹಾಗಾಗಿ ಎರಡೂ ಸಿನಿಮಾ ತಂಡಗಳ ನಡುವೆ ನಾನಾ ನೀನಾ ಎನ್ನುವ ಕದನ ನಡೀತಿದೆ.

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೈಲರ್ 'ಅಲಾ ವೈಕುಂಠಪುರಂಲೊ' ಸಿನಿಮಾ ಟಾಲಿವುಡ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ರೀಮೆಕ್ ರೈಟ್ಸ್ ಖರೀಸಿದಿ ಚಿತ್ರವನ್ನು 'ಶಹಝಾದೇ' ಹೆಸರಿನಲ್ಲಿ ಕಾರ್ತಿಕ್ ಆರ್ಯನ್ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಥೇಟ್ ಅಲ್ಲು ಅರ್ಜುನ್ ಬಾಡಿ ಲಾಂಗ್ವೇಜ್‌ನಲ್ಲಿ ಕಾರ್ತಿಕ್ ದರ್ಬಾರ್ ನಡೆಸೋಕೆ ಬರ್ತಿದ್ದಾರೆ. ಆದರೆ ಈ ಸಿನಿಮಾ ರಿಲೀಸ್‌ಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡೋದು ಕಷ್ಟ ಎನ್ನುವಂತಾಗಿದೆ.

ಕೊರೋನಾ ಸಮಯದಲ್ಲಿ ಸಬ್‌ ಟೈಟಲ್ ಜೊತೆಗೆ ಈ ಚಿತ್ರವನ್ನು ಸಾಕಷ್ಟು ಜನ ನೋಡಿದ್ದಾರೆ. ಆದರೂ ಕೂಡ ಸಿನಿಮಾ ಹಿಂದೆಗೆ ರೀಮೆಕ್ ಆಗಿದೆ. 'ಪುಷ್ಪ' ಸಿನಿಮಾ ಹಿಟ್ ಆಗಿ ಅಲ್ಲು ಅರ್ಜುನ್‌ಗೆ ಬಾಲಿವುಡ್‌ನಲ್ಲೂ ಕ್ರೇಜ್ ಶುರುವಾಗಿದೆ. ಹಾಗಾಗಿ ಗೋಲ್ಡ್‌ಮೈನ್ಸ್ ಸಂಸ್ಥೆ ಚಿತ್ರದ ಡಬ್ಬಿಂಗ್ ರೈಟ್ಸ್ ಕೊಂಡುಕೊಂಡಿತ್ತು.

'ಶಹಝಾದೇ' ಚಿತ್ರಕ್ಕೆ ಹಿನ್ನಡೆ

'ಶಹಝಾದೇ' ಚಿತ್ರಕ್ಕೆ ಹಿನ್ನಡೆ

ಸಿನಿಮಾ ರೀಮೆಕ್ ಮಾಡುವ ಮುನ್ನ ಹಿಂದಿ ಡಬ್ಬಿಂಗ್ ವರ್ಷನ್ ರಿಲೀಸ್ ಮಾಡದಂತೆ ಚಿತ್ರತಂಡ ಕೇಳಿಕೊಂಡಿತ್ತು. ಈ ಬಗ್ಗೆ ಚರ್ಚೆ ನಡೆದು ಎಲ್ಲರೂ ಒಪ್ಪಿಕೊಂಡಿದ್ದರು. ಆದರೆ ಡಬ್ಬಿಂಗ್ ವರ್ಷನ್ ಥಿಯೇಟರ್‌ನಲ್ಲಿ ರಿಲೀಸ್ ಮಾಡಲ್ಲ. ಯೂಟ್ಯೂಬ್ ಹಾಗೂ ಸ್ಯಾಟಲೈಟ್ ಚಾನಲ್ ರಿಲೀಸ್ ಮಾಡೋದಾಗಿ ಗೋಲ್ಡ್‌ಮೈನ್ಸ್ ಸಂಸ್ಥೆ ಹೊಸ ರಾಗ ಎಳೆದಿದೆ. ಇಲ್ಲದಿದ್ದರೆ ಸಿನಿಮಾ ಲಾಭದಲ್ಲಿ ಶೇರ್ ಕೊಡುವಂತೆ ಕೇಳಿತ್ತು. ಇದರಿಂದ ರೀಮೆಕ್ ಮಾಡಿದ್ದ ಕಾರ್ತಿಕ್ ಆರ್ಯನ್‌ಗೆ ತಲೆನೋವು ಶುರುವಾಗಿದೆ.

ಟ್ವಿಸ್ಟ್‌ ಮೇಲಿ ಟ್ವಿಸ್ಟ್ ಸಿಗುತ್ತಿದೆ

ಟ್ವಿಸ್ಟ್‌ ಮೇಲಿ ಟ್ವಿಸ್ಟ್ ಸಿಗುತ್ತಿದೆ

ಈಗಾಗಲೇ ಒಂದು ಬಾರಿ 'ಶಹಝಾದೇ' ತಂಡ ಸಿನಿಮಾ ರಿಲೀಸ್ ಡೇಟ್ ಮುಂದೂಡಿದೆ. ಮತ್ತೊಂದು ಕಡೆ ಗೋಲ್ಡ್‌ಮೈನ್ಸ್ ಸಂಸ್ಥೆ ಯೂಟ್ಯೂಬ್ ಚಾನಲ್‌ನಲ್ಲಿ ಸಿನಿಮಾ ಅಪ್‌ಲೋಡ್ ಮಾಡೋದಾಗಿ ಹೇಳಿತ್ತು. ಆದರೆ ಅಲ್ಲು ಅರ್ಜುನ್ ಈ ಬಗ್ಗೆ ಚರ್ಚೆ ನಡೆಸಿದ್ದಾರಂತೆ. ಪರಿಣಾಮ ಡಿಜಿಟಲ್ ರಿಲೀಸ್(ಯೂಟ್ಯೂಬ್‌ ಅಪ್‌ಲೋಡ್) ತಡವಾಗುತ್ತದೆ ಎಂದು ಸಂಸ್ಥೆ ಹೇಳಿದೆ. ಆದರೆ ಈಗ ಮತ್ತೊಂದು ಟ್ವಿಸ್ಟ್ ಕೊಟ್ಟಿದೆ.

ಟಿವಿಯಲ್ಲಿ ಡಬ್ ವರ್ಷನ್ ಪ್ರಸಾರ

ಟಿವಿಯಲ್ಲಿ ಡಬ್ ವರ್ಷನ್ ಪ್ರಸಾರ

ಗೋಲ್ಡ್‌ಮೈನ್ಸ್ ಸಂಸ್ಥೆ ಸದ್ಯಕ್ಕೆ ಯೂಟ್ಯೂಬ್‌ಗೆ ಹಾಕಲ್ಲ. ಆದರೆ ನಮ್ಮ ಸ್ಯಾಟಲೈಟ್ ಚಾನಲ್‌ನಲ್ಲಿ ಪ್ರಸಾರ ಮಾಡುತ್ತೇವೆ ಎಂದಿದೆ. ಅಲ್ಲು ಅರ್ಜುನ್ ಅಭಿಮಾನಿಗಳಿಗಾಗಿ ಸಿನಿಮಾ ಪ್ರಸಾರ ಮಾಡುತ್ತೇವೆ ಎಂದು ಹೇಳಿ ಈಗಾಗಲೇ ಒಂದು ಬಾರಿ ಡಬ್ಬಿಂಗ್‌ ವರ್ಷನ್ ಪ್ರಸಾರ ಮಾಡಿದೆ. 'ಶಹಜಾದೇ' ಫೆಬ್ರವರಿ 17ಕ್ಕೆ ರಿಲೀಸ್ ಆಗಲಿದ್ದು, ಫೆಬ್ರವರಿ 18ಕ್ಕೆ ಮತ್ತೊಮ್ಮೆ ಪ್ರಸಾರ ಮಾಡೋದಾಗಿ ಘೋಷಿಸಿದ್ದಾರೆ. ಇದು 'ಶಹಝಾದೇ' ತಂಡಕ್ಕೆ ಸಹಜವಾಗಿಯೇ ಬೇಸರ ತಂದಿದೆ.

 ಅಲ್ಲು ಅರ್ಜುನ್ ಸುದ್ದಿಗೋಷ್ಠಿ

ಅಲ್ಲು ಅರ್ಜುನ್ ಸುದ್ದಿಗೋಷ್ಠಿ

ಇನ್ನು ನಟ ಅಲ್ಲು ಅರ್ಜುನ್ ಸಂಜೆ ಸುದ್ದಿಗೋಷ್ಠಿ ಕರೆದಿದ್ದು ಯಾವ ವಿಚಾರದ ಬಗ್ಗೆ ಮಾತನಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಬಾಲಿವುಡ್‌ನಲ್ಲಿ ಶಹಜಾದೇ ಮತ್ತು ಅಲಾ ವೈಕುಂಠಪುರಂಲೋ ಡಬ್ಬಿಂಗ್ ವರ್ಷನ್ ಕಿರಿಕ್ ಬಗ್ಗೆ ಮಾತನಾಡುತ್ತಾರಾ? ಎನ್ನುವ ಚರ್ಚೆ ನಡೀತಿದೆ. ಒಟ್ನಲ್ಲಿ ರೀಮೆಕ್ ವರ್ಸಸ್ ಡಬ್ಬಿಂಗ್ ಗದ್ದಲ ಬಾಲಿವುಡ್‌ ಅಂಗಳದಲ್ಲಿ ಭಾರೀ ಸದ್ದು ಮಾಡ್ತಿದೆ.

More from Filmibeat

English summary
Ala Vaikuntapuramaloo Hindi dubbed version to Premiere on Goldmines channel on 18th february. Team decided to delay the digital release. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X