ಮದುವೆಗೆ ಹಾಲಿವುಡ್ ನಟರನ್ನು ಕರೆದ ರೀಚಾ ಚಡ್ಡ-ಅಲಿ ಫಜಲ್

ಬಾಲಿವುಡ್‌ ಪ್ರತಿಭಾವಂತ ಜೋಡಿ ಅಲಿ ಫಜಲ್ ಹಾಗೂ ರೀಚಾ ಚಡ್ಡ ವಿವಾಹವಾಗುತ್ತಿದ್ದು, ಸೆಲೆಬ್ರಿಟಿಗಳಿಗೆ ಆಹ್ವಾನ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸುತ್ತಿದ್ದಾರೆ.

ಇದೇ ತಿಂಗಳಾಂತ್ಯದಿಂದ ಇಬ್ಬರ ಮದುವೆ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ದೆಹಲಿಯಲ್ಲಿ ಅಕ್ಟೋಬರ್ ಎರಡರಂದು ವಿವಾಹವಾಗಲಿದೆ ಈ ಜೋಡಿ. ಆ ಬಳಿಕ ಅಕ್ಟೋಬರ್ 7 ರಂದು ಮುಂಬೈನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಆಯೋಜಿಸಿದೆ.

ಮದುವೆ ಸಂಭ್ರಮಕ್ಕೆ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳಿಗೆ ಈ ಜೋಡಿ ಆಹ್ವಾನ ನೀಡಿದ್ದು, ಬಾಲಿವುಡ್‌ ಮಾತ್ರವಲ್ಲ ಹಾಲಿವುಡ್‌ನ ಸ್ಟಾರ್ ಸೆಲೆಬ್ರಿಟಿಗಳನ್ನು ಸಹ ವಿವಾಹಕ್ಕೆ ಆಹ್ವಾನಿಸಿದ್ದಾರೆ ರೀಚಾ ಚಡ್ಡ ಹಾಗೂ ಅಲಿ ಫಜಲ್.

Ali Fazal And Richa Chadha Invites Hollywood Stars To Their Wedding

ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಎಂಐನ ಮುಖ್ಯಸ್ಥೆಯ ಪಾತ್ರದಲ್ಲಿ ನಟಿಸಿದ್ದ ಹಾಗೂ ಮೊದಲ ಜೇಮ್ಸ್ ಬಾಂಡ್ ಸಿನಿಮಾದ ನಾಯಕಿಯೂ ಆಗಿದ್ದ ಜೂಡಿ ಡೆಚ್ ಅನ್ನು ಅಲಿ ಫಜಲ್ ತಮ್ಮ ವಿವಾಹಕ್ಕೆ ಆಹ್ವಾನಿಸಿದ್ದಾರೆ. ಅಸಲಿಗೆ ಅಲಿ ಫಜಲ್ ಹಾಗೂ ಜೂಡಿ ಡೆಚ್ 2017 ರಲ್ಲಿ 'ವಿಕ್ಟೋರಿಯಾ ಆಂಡ್ ಅಬ್ದುಲ್' ಹೆಸರಿನ ಐತಿಹಾಸಿಕ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ರಾಣಿ ವಿಕ್ಟೋರಿಯಾ ಹಾಗೂ ಆಕೆಯ ಸಿಬ್ಬಂದಿಯಲ್ಲಿ ಒಬ್ಬನಾದ ಅದ್ಭುಲ್ ನಡುವಿನ ಸ್ನೇಹ, ಬಂಧದ ಬಗ್ಗೆ ನಿರ್ಮಿಸಲಾಗಿದ್ದ ಸಿನಿಮಾ ಇದಾಗಿತ್ತು.

ಜೂಡಿ ಡೆಚ್ ಮಾತ್ರವೇ ಅಲ್ಲದೆ ಹಾಲಿವುಡ್‌ನ ಮತ್ತೊಬ್ಬ ಪ್ರಮುಖ ತಾರೆ ಗೆರಾರ್ಡ್ ಬಟ್ಲರ್ ಅನ್ನು ಸಹ ಅಲಿ ಆಹ್ವಾನಿಸಿದ್ದಾರೆ. ಅಲಿ ಫಜಲ್ ಹಾಗೂ ಗೆರಾರ್ಡ್ ಬಟ್ಲರ್ ಹಾಲಿವುಡ್ ಸಿನಿಮಾ 'ಕಂದಹಾರ್'ನಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಇವರಿಬ್ಬರು ಮಾತ್ರವೇ ಅಲ್ಲದೆ ಈ ಸಿನಿಮಾಗಳ ಇತರೆ ಸದಸ್ಯರನ್ನು ಸಹ ಮದುವೆಗೆ ಆಹ್ವಾನಿಸಿದ್ದಾರಂತೆ ಅಲಿ ಫಜಲ್.

ಅಲಿ ಫಜಲ್ ಹಾಗೂ ರೀಚಾ ಚಡ್ಡ 'ಇಕೋ ಫ್ರೆಂಡ್ಲಿ' ಥೀಮ್‌ನಲ್ಲಿ ಮದುವೆಯಾಗುತ್ತಿದ್ದಾರೆ. ಮದುವೆಯ ಯಾವುದೇ ಹಂತದಲ್ಲಿಯೂ ಪ್ಲಾಸ್ಟಿಕ್ ಬಳಸುತ್ತಿಲ್ಲ ಇವರು. ಕೊಳೆಯ ಬಲ್ಲ ಪ್ಲೇಟ್‌ಗಳು, ಲೋಟಗಳನ್ನೇ ಬಳಸಲಾಗುತ್ತಿದೆ. ಆಹಾರ ಸಹ ವೇಸ್ಟ್ ಆಗದ ರೀತಿ ಎಚ್ಚರಿಕೆ ವಹಿಸಲಾಗುತ್ತಿದೆ. ಇವರ ವಿವಾಹದ ಆಮಂತ್ರಣ ಪತ್ರಿಕೆಯನ್ನು ಸಹ ಬಿಸಾಡಿದರೆ ಅದರಿಂದ ಗಿಡ ಬೆಳೆಯುವಂತೆ ವಿನ್ಯಾಸ ಮಾಡಲಾಗಿದೆ.

ಬಾಲಿವುಡ್‌ನ ಸೆಲೆಬ್ರಿಟಿಗಳ ಮದುವೆಯಲ್ಲಿ 'ನೋ ಫೋನ್ ಪಾಲಿಸಿ' ಮಾಡಲಾಗುತ್ತದೆ. ಆದರೆ ಇವರ ಮದುವೆಯಲ್ಲಿ ಅತಿಥಿಗಳ ಮೇಲೆ ಯಾವುದೇ ನಿಬಂಧನೆ ವಿಧಿಸಲಾಗಿಲ್ಲ. ಅತಿಥಿಗಳು ತಮ್ಮ ಫೋನ್‌ಗಳನ್ನು ಬಳಸಬಹುದಾಗಿದೆ, ಚಿತ್ರಗಳನ್ನು ಸಹ ತೆಗೆದುಕೊಳ್ಳಬಹುದಾಗಿದೆ.

2012 ರಲ್ಲಿ 'ಫಕ್ರೆ' ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು. ಬಹಳ ಸಮಯ ಗೆಳೆಯರಾಗಿದ್ದ ಇವರು 2019 ರಲ್ಲಿ ಪ್ರೇಮಿಗಳಾದರು. ಈಗ ಇಬ್ಬರು ಪತಿ-ಪತ್ನಿ ಆಗುತ್ತಿದ್ದಾರೆ.

More from Filmibeat

English summary
actor Ali Fazal and Richa Chadha invites Hollywood stars to their wedding. Actress Judi Dench may attend the wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X