ರಿಚಾ ಚಡ್ಡಾ ಮದುವೆಗೆ ದಿನಾಂಕ ರೆಡಿ: ಖಾತ್ರಿ ಪಡಿಸಿದ ನಟ ಅಲಿ ಫಾಜಲ್

ಕೊರೊನಾ ವೈರಸ್ ಕಾಟ ಇಲ್ಲವಾಗಿದ್ದರೆ ಇಷ್ಟೊತ್ತಿಗಾಗಲೇ ಬಾಲಿವುಡ್ ನಟಿ ರಿಚಾ ಚಡ್ಡಾ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳೆಯ ನಟ ಅಲಿ ಫಾಜಲ್ ಜೊತೆ ಸಪ್ತಪದಿ ತುಳಿಯಲು ಸಜ್ಜಾಗಿರುವ ರಿಚಾ ಮದುವೆ 2021ರಲ್ಲಿ ಆಗಬೇಕಿತ್ತು. ಅದಕ್ಕೆ ಬೇಕಾದ ತಯಾರಿ ಸಹ ನಡೆಸಿದ್ದರು. ಆದರೆ, ಅನಿರೀಕ್ಷಿತವಾಗಿ ಬಂದ ಕೊರೊನಾ ಸಾಂಕ್ರಮಿಕ ರೋಗ ಎಲ್ಲಾ ಯೋಜನೆಯನ್ನು ತಲೆಕೆಳಗಾಗಿಸಿತು.

ಈಗ ಕೋವಿಡ್ ಎರಡನೇ ಅಲೆ ಕಡಿಮೆಯಾಗಿದೆ. ಎಲ್ಲಾ ಕ್ಷೇತ್ರಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಮೊದಲಿನಂತೆ ಕಾರ್ಯಕ್ರಮಗಳು ಆಯೋಜಿಸಲು ಅನುಮತಿ ಸಿಗ್ತಿದೆ. ಈ ಹಿನ್ನೆಲೆ ರಿಚಾ ಮತ್ತು ಅಲಿ ಫಾಜಲ್ ಮದುವೆ ದಿನಾಂಕ ನಿಗದಿ ಪಡಿಸಲು ಕುಟುಂಬಸ್ಥರು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮದುವೆ ಬಗ್ಗೆ ಇಂಡಿಯಾ ಟುಡೇ ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿರುವ ಅಲಿ ಫಾಜಲ್, ''2022ರ ಆರಂಭದಲ್ಲಿ ಸಂಭ್ರಮ ನಡೆಯುವುದು ಖಚಿತ'' ಎಂದು ತಿಳಿಸಿದ್ದಾರೆ. ''ಎಲ್ಲವೂ ತೆರೆದ ತಕ್ಷಣ ನಮ್ಮ ಕೆಲಸ ಶುರು ಮಾಡಿ ಕಮಿಟ್‌ಮೆಂಟ್‌ಗಳನ್ನು ಮುಗಿಸಿದೆವು. ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ನಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸಂಭ್ರಮಕ್ಕೆ ತಯಾರಿ ನಡೆಯುತ್ತಿದೆ. ಖಂಡಿತಾ ಶೀಘ್ರವೇ ನಮ್ಮ ಕುಟುಂಬದಲ್ಲೊಂದು ಸಂತೋಷದ ದಿನ ಇದೆ. ಕೋವಿಡ್ ಸಂಬಂಧಿತ ಯಾವ ರೀತಿಯ ನಿಯಮಗಳು ಇರಲಿದೆ ಎನ್ನುವುದರ ಬಗ್ಗೆ ನನಗೆ ತಿಳಿದಿಲ್ಲ. ಆದರೂ ಸಂಭ್ರಮ ಆಚರಣೆ ಮಾತ್ರ ಖಂಡಿತಾ ಇದ್ದೆ ಇರುತ್ತದೆ'' ಎಂದು ತಿಳಿಸಿದ್ದಾರೆ.

Ali Fazal Confirms Richa Chadha Marriage Date

ನಿಖರವಾದ ದಿನಾಂಕ ಪಕ್ಕಾ ಆಗಿದೆಯೇ ಎಂದು ಕೇಳಿದ್ದಕ್ಕೆ ಸದ್ಯಕ್ಕೆ ಇಬ್ಬರು ಒಟ್ಟಿಗೆ ಸಮಯ ಕಳೆಯುತ್ತಿದ್ದೇವೆ, ದಿನಾಂಕ ನಿಗದಿಯಾಗಿಲ್ಲ ಎಂದು ಮಾಹಿತಿ ನೀಡಿದರು. ಆದರೆ ನಮಗೆ ಸ್ವಲ್ಪ ಸಮಯ ಸಿಕ್ಕರೂ ಅದರ ಸದುಪಯೋಗವನ್ನು ಮಾಡಿಕೊಳ್ಳುತ್ತೇವೆ ಎಂದು ನಟ ಹೇಳಿದರು. ಆ ಕಡೆ ರಿಚಾ ಚಡ್ಡಾ ತನ್ನ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಪ್ರಖ್ಯಾತ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಏಷಿಯನ್ ಕಂಟೆಂಟ್ಸ್ ಅವಾರ್ಡ್ಸ್‌ನ ಅತ್ಯುತ್ತಮ ನಟ ವಿಭಾಗದಲ್ಲಿ ಅಲಿ ಫಾಜಲ್ ನಾಮನಿರ್ದೇಶನವಾಗಿದ್ದಾರೆ. ಇದು ಸಹ ನಟನ ಜೀವನದಲ್ಲಿ ಸಂಭ್ರಮವೇ ಆಗಿದೆ.

ರಿಚಾ ಮತ್ತು ಅಲಿ ಇಬ್ಬರು ಕಳೆದ ಐದು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಇಬ್ಬರು ಸಿನಿಮಾ ಶೂಟಿಂಗ್ ವೇಳೆ ಪರಿಚಿಯವಾಗಿ ನಂತರ ಪ್ರೀತಿಯಲ್ಲಿ ಬಿದ್ದರು ಎನ್ನಲಾಗಿದೆ. 'ಫಕ್ರಿ' ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಇಬ್ಬರು ಸ್ನೇಹಿತರಾಗಿದ್ದಾರೆ. ನಂತರ ಅದೇ ಸ್ನೇಹ ಪ್ರೀತಿಗೆ ತಿರುಗಿ ಈಗ ಮದುವೆ ಆಗಲು ನಿರ್ಧರಿಸಿದರು.

ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಶಕೀಲಾ ಬಯೋಪಿಕ್‌ನಲ್ಲಿ ರಿಚಾ ಚಡ್ಡಾ ನಟಿಸಿದ್ದರು. ಅದಾದ ನಂತರ ಮೇಡಂ ಚೀಫ್ ಮಿನಿಸ್ಟರ್, ಲಾಹೋರ್ ಕಾನ್ಫಿಡೆನ್ಷಿಯನ್ ಚಿತ್ರಗಳಲ್ಲಿ ಕಾಣಿಸಿಕೊಂಡರು. ಪ್ರಸ್ತುತ 'ಅಭಿ ತೋಹ್ ಪಾರ್ಟಿ ಶುರು ಹುಯ್ ಹೈ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
'Fukrey' Actor Ali Fazal Confirms actress Richa Chadha Marriage Date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X