'3 ಇಡಿಯಟ್ಸ್' ಸಿನಿಮಾದಲ್ಲಿ ನಟಿಸಿ ಖಿನ್ನತೆಗೆ ಒಳಗಾಗಿದ್ದೆ: ಅಲಿ ಫಜಲ್

'3 ಇಡಿಯಟ್ಸ್' ಸಿನಿಮಾ ಬಾಲಿವುಡ್‌ನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಆ ಸಿನಿಮಾದಲ್ಲಿ ನಟಿಸಿದ ಎಲ್ಲರಿಗೂ ಬಹಳ ಒಳ್ಳೆಯ ಹೆಸರು ದೊರಕಿಸಿಕೊಟ್ಟ, ಕೆಲವರ ಬದುಕನ್ನೇ ಬದಲಿಸಿದ ಸಿನಿಮಾ. ಆದರೆ ಅದೇ ಸಿನಿಮಾದಲ್ಲಿ ನಟಿಸಿದ್ದ ಅಲಿ ಫಜಲ್‌ಗೆ ಮಾತ್ರ ಸಿನಿಮಾದಿಂದಾಗಿ ದೊಡ್ಡ ಸಮಸ್ಯೆ ಎದುರಾಗಿತ್ತಂತೆ.

'3 ಇಡಿಯಟ್ಸ್' ಸಿನಿಮಾದಲ್ಲಿ ಜೋಯ್ ಲೋಬೊ ಎಂಬ ಪುಟ್ಟ ಆದರೆ ಬಹಳ ಪರಿಣಾಮಕಾರಿಯಾದ ಪಾತ್ರದಲ್ಲಿ ಅಲಿ ಫಜಲ್ ನಟಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಯಾದರೂ ಶಿಸ್ತಿನ ಪ್ರಾಂಶುಪಾಲರ ನಿರ್ಣಯದಿಂದ ಪದವಿ ಪಡೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪಾತ್ರವದು.

ಪಾತ್ರವನ್ನು ಬಹಳ ಚೆನ್ನಾಗಿ ಅಭಿನಯಿಸಿದ್ದರು ಜೋಯ್ ಲೋಬೊ ಆದರೆ ಆ ಸಿನಿಮಾದ ಬಳಿಕ ನಡೆದ ಕೆಲವು ಘಟನೆಗಳಿಂದ ಮನನೊಂದು ಖಿನ್ನತೆಗೆ ಜಾರಿದ್ದರಂತೆ ಅಲಿ.

Ali Fazal Gone Into Depression After Doing 3 Idiots Movie

''ಆ ಸಿನಿಮಾದ ಅವಧಿಯಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡ ನಿರ್ವಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಗಳು ಪ್ರಕಟವಾಗುವುದು ಹೆಚ್ಚಾಯ್ತು. ಹಾಗೆ ವರದಿಗಳು ಪ್ರಕಟವಾದಾಗಲೆಲ್ಲ ಮಾಧ್ಯಮಗಳ ಕೆಲವರು ನನಗೆ ಕರೆ ಮಾಡಿ ನೋಡು ನಿಮ್ಮ ಪಾತ್ರದಂತೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನಿಮಗೆ ಏನನ್ನಿಸುತ್ತದೆ ಎಂದು ಕೇಳಲು ಆರಂಭಿಸಿದರು ಅದು ನನಗೆ ತೀವ್ರ ನೋವುಂಟು ಮಾಡುತ್ತಿತ್ತು'' ಎಂದಿದ್ದಾರೆ ಅಲಿ ಫಜಲ್.

''ಆ ಸಿನಿಮಾದ ಚಿತ್ರೀಕರಣ ಪ್ರಾರಂಭವಾದಾಗ ನಾನಿನ್ನೂ ಕಾಲೇಜಿನಲ್ಲಿದ್ದೆ. ನನಗೆ ಆ ಒತ್ತಡವನ್ನು ನಿಭಾಯಿಸುವುದು ಹೇಗೆಂದು ಗೊತ್ತಾಗುತ್ತಿರಲಿಲ್ಲ. ಆಗ ನಾನು ಸಿನಿಮಾದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಬಳಿ ನನ್ನ ಕಷ್ಟ ಹೇಳಿಕೊಂಡೆ'' ಎಂದಿದ್ದಾರೆ ಅಲಿ.

''ನನಗೆ ಧೈರ್ಯ ತುಂಬಿದ ರಾಜ್‌ಕುಮಾರ್ ಹಿರಾನಿ, ಯಾರೆ ಕರೆ ಮಾಡಿದರೂ ನಿರ್ಮಾಪಕರೊಂದಿಗೆ, ನಿರ್ದೇಶಕರೊಂದಿಗೆ ಮಾತನಾಡಲು ಹೇಳು ಎಂದರು. ನಂತರ ನಾನು ಹಾಗೆಯೇ ಮಾಡಿದೆ'' ಎಂದಿದ್ದಾರೆ ಅಲಿ.

Recommended Video

ಇಂದಿರಾಗಾಂಧಿ ಕುರಿತ ಚಿತ್ರವನ್ನು ನನ್ನಷ್ಟು ಯಾರೂ ಚೆನ್ನಾಗಿ ಡೈರೆಕ್ಟ್ ಮಾಡಲ್ಲ | Filmibeat Kannada

ಅಲಿ ಫಜಲ್ 'ಫಕ್ರೆ', 'ಹ್ಯಾಪಿ ಭಾಗ್ ಜಾಯೇಗಿ', 'ಪ್ರಸ್ತಾನಂ' ಇನ್ನೂ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶ್ವ ವಿಖ್ಯಾತ 'ಫಾಸ್ಟ್ ಆಂಡ್ ಫ್ಯೂರಿಯಸ್ 7' ನಲ್ಲಿ ಸಣ್ಣ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹಾಲಿವುಡ್ ಸಿನಿಮಾ 'ವಿಕ್ಟೋರಿಯಾ ಆಂಡ್ ಅಬ್ದುಲ್ಲ' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 'ಮಿರ್ಜಾಪುರ್' ವೆಬ್ ಸರಣಿಯ ಮುಖ್ಯ ಪಾತ್ರ ಗುಡ್ಡು ಆಗಿಯೂ ಅಲಿ ಜನಪ್ರಿಯರು.

More from Filmibeat

English summary
Actor Ali Fazal said he went to depression after acting in 3 Idiots movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X