ರಣ್ಬೀರ್-ಆಲಿಯಾ ನಡುವೆ ಪ್ರೇಮಾಂಕುರ! ಇದು ನಿರ್ದೇಶಕರ 'ಬ್ರಹ್ಮಾಸ್ತ್ರ'?

By Harshitha

ದೀಪಿಕಾ ಪಡುಕೋಣೆ ಹಾಗೂ ಕತ್ರಿನಾ ಕೈಫ್ ಜೊತೆಗೆ ಬ್ರೇಕಪ್ ಆದ್ಮೇಲೆ ಕಪೂರ್ ಕುಡಿ ರಣ್ಬೀರ್ ಹೆಸರು ತಳುಕು ಹಾಕಿಕೊಂಡಿರುವುದು ಆಲಿಯಾ ಭಟ್ ನೊಂದಿಗೆ.!

ಹೌದು, ಕಳೆದ ಕೆಲವು ದಿನಗಳಿಂದ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ... ಇಬ್ಬರ ಫ್ರೆಂಡ್ ಶಿಪ್ ಎಕ್ಸ್ ಟ್ರಾ ಸ್ಪೆಷಲ್ ಆಗಿದೆ... ಸಿಂಗಲ್ ಆಗಿರುವ ಇಬ್ಬರೂ ಜಂಟಿ ಆಗಲು ಮನಸ್ಸು ಮಾಡಿದ್ದಾರೆ... ಎಂಬೆಲ್ಲ ಗುಸು ಗುಸು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಆದ್ರೆ, ಇದಕ್ಕೆ ತದ್ವಿರುದ್ಧವಾದ ವರದಿ 'ಫಿಲ್ಮ್ ಫೇರ್' ಪ್ರಕಟ ಮಾಡಿದೆ. ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಡುವಿನ ಲಿಂಕಪ್ ರೂಮರ್ ಗಳಿಗೆ ನಿರ್ದೇಶಕ ಅಯಾನ್ ಮುಖರ್ಜಿ ಕಾರಣ ಎನ್ನಲಾಗಿದೆ.

Alia Bhat and Ranbir Kapoor link up: Is Ayan Mukerji reason.?

ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ರಣ್ಬೀರ್ ಕಪೂರ್ ಹೀರೋ ಆದರೆ, ಆಲಿಯಾ ಭಟ್ ಹೀರೋಯಿನ್. ಆದ್ದರಿಂದ, 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಡುವಿನ ಕೆಮಿಸ್ಟ್ರಿ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕೆ ಇಬ್ಬರೂ ಕೆಲ ಕಾಲ ಸಮಯ ಕಳೆಯಬೇಕು ಅಂತ ನಿರ್ದೇಶಕ ಅಯಾನ್ ಮುಖರ್ಜಿ ಸೂಚಿಸಿದ್ದರಂತೆ.

ನಿರ್ದೇಶಕರ ಸೂಚನೆ ಮೇರೆಗೆ ಹಲವು ಕಡೆ ಒಟ್ಟಾಗಿ ಕಾಣಿಸಿಕೊಂಡ ರಣ್ಬೀರ್-ಆಲಿಯಾ ಸಹಜವಾಗಿ ಮಾಧ್ಯಮಗಳ ಕಣ್ಣಿಗೆ ಬಿದ್ದರು. ಅಲ್ಲಿಂದ ಇಬ್ಬರ ಹೆಸರು ಗಾಸಿಪ್ ಕಾಲಂನಲ್ಲಿ ಬರಲಾರಂಭಿಸಿತು. ಯಾವುದೇ ಗಾಸಿಪ್ ಗಳಿಗೆ ಕಿವಿ ಕೊಡದ ರಣ್ಬೀರ್ ಕಪೂರ್ ಸದ್ಯ 'ಬ್ರಹ್ಮಾಸ್ತ್ರ' ಚಿತ್ರಕಥೆ ಮೇಲೆ ಗಮನ ಹರಿಸಿದ್ದಾರೆ.

ಮುಂದಿನ ತಿಂಗಳು 'ಬ್ರಹ್ಮಾಸ್ತ್ರ' ಸಿನಿಮಾ ಸೆಟ್ಟೇರಲಿದೆ.

More from Filmibeat

English summary
According to the latest reports, 'Brahmastra' director Ayan Mukerji is the reason for Alia Bhat and Ranbir Kapoor link up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X