For Quick Alerts
  ALLOW NOTIFICATIONS  
  For Daily Alerts

  ಎಲ್ಲೋ ಆಗಬೇಕಿದ್ದ ಆಲಿಯಾ-ರಣ್ಬೀರ್ ಮದುವೆ ಇಲ್ಲೇ ಆಗಿದ್ದು ಏಕೆ?

  |

  ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ವಿವಾಹ ಕೆಲವು ದಿನಗಳ ಹಿಂದಷ್ಟೆ ಮುಂಬೈನಲ್ಲಿಯೇ ಅದ್ಧೂರಿಯಾಗಿ ನಡೆಯಿತು.

  ಬಾಲಿವುಡ್‌ನ ಬಿ ಕ್ಯಾಟಗೆರಿ ನಟ-ನಟಿಯರು ಸಹ ವಿದೇಶಗಳಲ್ಲಿ ಅದ್ಧೂರಿಯಾಗಿ ಮದುವೆ ಆಗುತ್ತಿರುವ ಈ ಸಮಯದಲ್ಲಿ ಸ್ಟಾರ್‌ಗಳಾಗಿರುವ ಆಲಿಯಾ ಭಟ್, ರಣ್ಬೀರ್ ಕಪೂರ್ ಅವರುಗಳು ಮಾತ್ರ ಮುಂಬೈನಲ್ಲಿ ಅದೂ ತಮ್ಮ ನಿವಾಸದಲ್ಲಿಯೇ ವಿವಾಹವಾಗಿದ್ದು ಭಾರಿ ಆಶ್ಚರ್ಯ ತಂದಿತ್ತು.

  ಯಾವುದೇ ಐಶಾರಾಮಿ ಹೋಟೆಲ್ ಬುಕ್ ಮಾಡದೆ, ತಮ್ಮದೇ ಆದ ಕಪೂರ್ ಸ್ಟುಡಿಯೋ ಅನ್ನೂ ಬಳಸಿಕೊಳ್ಳದೆ ತಮ್ಮದೇ ನಿವಾಸದಲ್ಲಿ ಕೆಲವರು ಸಂಬಂಧಿಕರು, ಆಪ್ತೇಷ್ಟರ ಮುಂದೆ ಸರಳವಾಗಿಯೇ ವಿವಾಹ ಕಾರ್ಯ ಮುಗಿಸಿತು ಈ ಜೋಡಿ. ಆದರೆ ಹೀಗೆ ಮಾಡಲು ಕಾರಣ ಏನೆಂಬುದನ್ನು ರಣ್ಬೀರ್ ಕಪೂರ್ ತಾಯಿ ನೀತು ಕಪೂರ್ ಇದೀಗ ಬಹಿರಂಗಗೊಳಿಸಿದ್ದಾರೆ.

  ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ಅವರುಗಳು ದಕ್ಷಿಣ ಆಫ್ರಿಕಾದಲ್ಲಿ ವಿವಾಹವಾಗಲು ನಿಶ್ಚಯ ಮಾಡಿದ್ದರಂತೆ. ಈ ಬಗ್ಗೆ ಇಬ್ಬರೂ ಸಾಕಷ್ಟು ಪ್ಲಾನ್ ಸಹ ಮಾಡಿದ್ದರಂತೆ. ಅದಕ್ಕೂ ಮೊದಲು ಬೇರೆ ದೇಶಗಳ ಬಗ್ಗೆಯೂ ಚರ್ಚೆ ನಡೆದಿತ್ತು. ಆದರೆ ಕೊನೆಗೆ ಮುಂಬೈನಲ್ಲಿಯೇ ವಿವಾಹ ಕಾರ್ಯಕ್ರಮ ಆಯೋಜಿಸಲು ನಿಶ್ಚಯಿಸಲಾಯಿತಂತೆ.

  ''ರಣ್ಬೀರ್‌ಗೆ ತನ್ನ ಮದುವೆ ಒಂದು ರೀತಿಯ ಸರ್ಕಸ್ ಆಗುವುದು ಇಷ್ಟವಿರಲಿಲ್ಲ. ಹಾಗಾಗಿ ಸಾಧ್ಯವಾದಷ್ಟು ಮದುವೆಯನ್ನು ಗುಟ್ಟಾಗಿಟ್ಟಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಮದುವೆಯಾಗುವುದನ್ನು ಸಹ ಇದೇ ಕಾರಣಕ್ಕೆ ತಪ್ಪಿಸಲಾಯಿತು. ನಮ್ಮನ್ನೆಲ್ಲ ಬಹಳ ಗುಟ್ಟಾಗಿ ಇಡಲಾಗಿತ್ತು. ನಾವು ಶಾಪಿಂಗ್ ಸಹ ಮಾಡಲಿಲ್ಲ. ಅಂಗಡಿಗೆ ಹೋದರೆ ಮಾಧ್ಯಮದವರಿಗೆ ಗೊತ್ತಾಗುತ್ತದೆ ಎಂಬ ಭಯವಿತ್ತು'' ಎಂದಿದ್ದಾರೆ ನೀತು ಕಪೂರ್.

  ''ಮದುವೆಯ ವಿಷಯವನ್ನು ಸಾಧ್ಯವಾದಷ್ಟು ಗುಟ್ಟಾಗಿ ಇಟ್ಟಿದ್ದೆವು, ಆದರೂ ಕೊನೆಯ ಕ್ಷಣದಲ್ಲಿ ಅದು ಮಾಧ್ಯಮದವರಿಗೆ ಗೊತ್ತಾಗಿಯೇ ಬಿಟ್ಟಿತು. ಆದರೆ ಖಾಸಗಿಯಾಗಿ ವಿವಾಹ ಮಾಡಿದ್ದಕ್ಕೆ ನಮಗೆ ಖುಷಿ ಇದೆ. ಮದುವೆ ಕಾರ್ಯ ಸಂತೋಶದಿಂದ ಜರುಗಿತು, ಆಲಿಯಾ ಭಟ್ ಅದ್ಭುತವಾಗಿ ಕಾಣುತ್ತಿದ್ದಳು'' ಎಂದಿದ್ದಾರೆ ನೀತು ಕಪೂರ್.

  ಏಪ್ರಿಲ್ 14 ರಂದು ಆಲಿಯಾ ಭಟ್ ಹಾಗೂ ರಣ್ಬೀರ್ ಮುಂಬೈನಲ್ಲಿಯೇ ವಿವಾಹವಾದರು. ಆಪ್ತೇಷ್ಟರು, ಕೆಲವು ಆತ್ಮೀಯ ಸ್ನೇಹಿತರು, ಸಂಬಂಧಿಕರು ಮಾತ್ರವೇ ಮದುವೆ ಕಾರ್ಯದಲ್ಲಿ ಭಾಗವಹಿಸಿದ್ದರು. ಇಬ್ಬರು ಕಳೆದೆರಡು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇಬ್ಬರ ವಿವಾಹ ಇನ್ನಷ್ಟು ಬೇಗನೇ ಆಗಬೇಕಿತ್ತು, ಆದರೆ ರಣ್ಬೀರ್ ಕಪೂರ್ ತಂದೆ ರಿಶಿ ಕಪೂರ್ ಕೋವಿಡ್‌ನಿಂದ ನಿಧನ ಹೊಂದಿದ ಕಾರಣ ಮದುವೆ ತಡವಾಗಿತ್ತು.

  ರಿಶಿ ಕಪೂರ್ ಇದ್ದಾಗಲೇ ಮದುವೆ ಬಗ್ಗೆ ಚರ್ಚೆಗಳಾಗಿದ್ದವು. ಆಗ ರಣ್ಬೀರ್ ಕಪೂರ್ ತಾವು ಸರಳ ವಿವಾಹವಾಗುವುದಾಗಿ ಹೇಳಿದ್ದರು ಆದರೆ ಇದಕ್ಕೆ ರಿಶಿ ಕಪೂರ್ ಸುತಾರಾಂ ಒಪ್ಪಿರಲಿಲ್ಲ. ಅದ್ಧೂರಿಯಾಗಿಯೇ ಮಗನ ಮದುವೆ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ ಮದುವೆ ಯೋಜನೆಗಳು ನಡೆಯುತ್ತಿರುವಾಗಲೇ ರಿಶಿ ಕಪೂರ್ ಕೋವಿಡ್‌ ಗೆ ತುತ್ತಾಗಿ ನಿಧನ ಹೊಂದಿದರು.

  English summary
  Alia Bhatt and Ranbir Kapoor planed their wedding in South Africa but finaly wedding happened in Mumbai.
  Tuesday, May 10, 2022, 9:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X