ಮದುವೆ ಯಾವಾಗ? ಆಲಿಯಾ ಭಟ್ ಕೊಟ್ಟರು ಉತ್ತರ
ಈ ವರ್ಷ ಹಲವು ನಟ-ನಟಿಯರು ಮದುವೆಯಾದರು. ಈ ವರ್ಷ ಮದುವೆ ಆಗುತ್ತಾರೆ ಎಂದು ನಿರೀಕ್ಷಿಸಲಾಗಿದ್ದ ಹಲವರು ಮದುವೆ ಆಗಲಿಲ್ಲ. ಅದರಲ್ಲಿ ಆಲಿಯಾ ಭಟ್-ರಣಬೀರ್ ಕಪೂರ್ ಜೋಡಿ ಸಹ ಒಂದು.
ಹೌದು, ಆಲಿಯಾ ಭಟ್-ರಣಬೀರ್ ಕಪೂರ್ ಅವರುಗಳು ಈ ವರ್ಷ ಮದುವೆ ಆಗುತ್ತಾರೆ ಎನ್ನಲಾಗಿತ್ತು. ಆದರೆ ಮದುವೆ ಆಗಲಿಲ್ಲ, ಆದರೆ ಒಟ್ಟಿಗೆ ಓಡಾಡುತ್ತಿದ್ದಾರೆ. ಲಿವಿ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ ಸಹ.
ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಭಟ್ ಅಭಿಮಾನಿಗಳೊಂದಿಗೆ ವಿಡಿಯೋ ಸಂವಾದ ಮಾಡಿದ್ದು. ಸಂವಾದದಲ್ಲಿ ಎದುರಾದ ಮದುವೆ ಕುರಿತಾದ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಮದುವೆ ಬಗ್ಗೆ ಆಲಿಯಾ ಸ್ಪಷ್ಟನೆ
ಸಂವಾದದಲ್ಲಿ ಮದುವೆ ಬಗ್ಗೆ ಹಲವಾರು ಪ್ರಶ್ನೆಗಳನ್ನು ಅಭಿಮಾನಿಗಳು ಆಲಿಯಾ ಭಟ್‌ಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆಲಿಯಾ ಭಟ್, 'ನನಗಿನ್ನೂ 25 ವರ್ಷ ವಯಸ್ಸಷ್ಟೆ, ಇಷ್ಟು ಬೇಗ ಮದುವೆ ಬೇಡ ಎಂದುಕೊಂಡಿದ್ದೇನೆ' ಎಂದಿದ್ದಾರೆ ಆಲಿಯಾ ಭಟ್.

ವಯಸ್ಸಿನ ಬಗ್ಗೆ ಸುಳ್ಳು ಹೇಳಿದ ಆಲಿಯಾ
ಆದರೆ ಆಲಿಯಾ ಭಟ್‌ಗೆ 25 ವರ್ಷ ವಯಸ್ಸಲ್ಲ ಬದಲಿಗೆ 27 ವರ್ಷ ವಯಸ್ಸು. ತಮ್ಮ ವಯಸ್ಸನ್ನು ಎರಡು ವರ್ಷ ಕಡಿಮೆ ಹೇಳಿದ ಆಲಿಯಾ ಭಟ್ ಅನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು ಇನ್ನೂ ಕೆಲ ವರ್ಷ ಕಾದು 30 ರ ನಂತರ ಮದುವೆ ಆಗಿ ಎಂದಿದ್ದಾರೆ.

ಲಿವ್ ಇನ್ ರಿಲೇಶನ್‌ನಲ್ಲಿ ಆಲಿಯಾ ಭಟ್-ರಣಬೀರ್
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಪ್ರಸ್ತುತ ಡೇಟಿಂಗ್‌ನಲ್ಲಿದ್ದಾರೆ. ಇಬ್ಬರು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಸಹ ಇದ್ದಾರೆ ಎನ್ನಲಾಗುತ್ತಿದೆ. ಈ ವರ್ಷ ರಣಬೀರ್ ಕಪೂರ್ ತಂದೆ ರಿಶಿ ಕಪೂರ್ ಮೃತರಾದ ಕಾರಣ ಆಲಿಯಾ-ರಣಬೀರ್ ಮದುವೆ ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ.

ಹಲವು ಸಿನಿಮಾಗಳಲ್ಲಿ ಬ್ಯುಸಿ
ನಟಿ ಆಲಿಯಾ ಭಟ್ ಪ್ರಸ್ತುತ ತೆಲುಗಿನ ಬಹುನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್' ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ಜೊತೆ ನಟಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. 'ಗಂಗೂಬಾಯಿ ಕಾತೆವಾಡಿ', 'ಆಶಿಕಿ 3', 'ತಕ್ತ್' ಸಿನಿಮಾಗಳಲ್ಲಿ ನಟಿಸಲಿದ್ದಾರೆ.


Click it and Unblock the Notifications











