ಮೈಸೂರಿನ ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಆಲಿಯಾ ಭಟ್
ಮೈಸೂರು ದಸರಾ ಮುಗಿತು. ನವರಾತ್ರಿ ಉತ್ಸವ ಮುಗಿದ ಮೇಲೆ ಅರಮನೆ ನಗರಿಯಲ್ಲಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಮೈಸೂರಿನ ರಸ್ತೆಯ ಬದಿ ಕುಳಿತುಕೊಂಡು ಫೋಸ್ ಕೊಟ್ಟಿದ್ದಾರೆ ಆಲಿಯಾ.
ಈ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ''ದೊಡ್ಡ ಅಕ್ಕನ ಜೊತೆ'' ಎಂದು ಅಡಿಬರಹ ಹಾಕಿದ್ದಾರೆ. ಅಂದ್ಹಾಗೆ, ಆಲಿಯಾ ಭಟ್ ಅವರಿಗೆ ಮೈಸೂರಿನಲ್ಲಿ ಏನು ಕೆಲಸ, ದಸರಾ ಮುಗಿದ ಮೇಲೆ ಬಂದಿದ್ದಾರೆ ಯಾಕೆ ಎಂಬ ಕುತೂಹಲ ಕಾಡುತ್ತೆ. ಆಲಿಯಾ ಬಂದಿರುವುದು ಸಡಕ್ 2 ಚಿತ್ರದ ಶೂಟಿಂಗ್ ಗಾಗಿ ಎನ್ನುವುದು ಗಮನಿಸಬೇಕು.
ಆಲಿಯಾ ಭಟ್ ಅವರ ತಂದೆ ನಿರ್ದೇಶನ ಮಾಡುತ್ತಿರುವ ಸಡಕ್ 2 ಸಿನಿಮಾದಲ್ಲಿ ಸಂಜತ್ ದತ್, ಆದಿತ್ಯ ರಾಯ್ ಕಪೂರ್, ಪೂಜಾ ಭಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

1991ರಲ್ಲಿ ತೆರೆಕಂಡಿದ್ದ ಸಡಕ್ ಸಿನಿಮಾದ ಮುಂದುವರಿದ ಭಾಗ ಸಡಕ್ 2. ಆ ಚಿತ್ರವನ್ನೂ ಮಹೇಶ್ ಭಟ್ ನಿರ್ದೇಶಿಸಿದ್ದಾರೆ. ಸಂಜಯ್ ದತ್, ಪೂಜಾ ಭಟ್ ಆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಸಡಕ್ 2 ಸಿನಿಮಾ ಬಿಟ್ಟು, ಅಮಿತಾಭ್ ಬಚ್ಚನ್ ಮತ್ತು ರಣ್ಬೀರ್ ಕಪೂರ್ ಜೊತೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಆಲಿಯಾ ನಟಿಸುತ್ತಿದ್ದಾರೆ. ಈ ಕಡೆ ಸೌತ್ ಇಂಡಸ್ಟ್ರಿಯಲ್ಲಿ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಪ್ರಾಜೆಕ್ಟ್ ನಲ್ಲೀ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











