twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರಿನ ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಆಲಿಯಾ ಭಟ್

    |

    ಮೈಸೂರು ದಸರಾ ಮುಗಿತು. ನವರಾತ್ರಿ ಉತ್ಸವ ಮುಗಿದ ಮೇಲೆ ಅರಮನೆ ನಗರಿಯಲ್ಲಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಮೈಸೂರಿನ ರಸ್ತೆಯ ಬದಿ ಕುಳಿತುಕೊಂಡು ಫೋಸ್ ಕೊಟ್ಟಿದ್ದಾರೆ ಆಲಿಯಾ.

    ಈ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ''ದೊಡ್ಡ ಅಕ್ಕನ ಜೊತೆ'' ಎಂದು ಅಡಿಬರಹ ಹಾಕಿದ್ದಾರೆ. ಅಂದ್ಹಾಗೆ, ಆಲಿಯಾ ಭಟ್ ಅವರಿಗೆ ಮೈಸೂರಿನಲ್ಲಿ ಏನು ಕೆಲಸ, ದಸರಾ ಮುಗಿದ ಮೇಲೆ ಬಂದಿದ್ದಾರೆ ಯಾಕೆ ಎಂಬ ಕುತೂಹಲ ಕಾಡುತ್ತೆ. ಆಲಿಯಾ ಬಂದಿರುವುದು ಸಡಕ್ 2 ಚಿತ್ರದ ಶೂಟಿಂಗ್ ಗಾಗಿ ಎನ್ನುವುದು ಗಮನಿಸಬೇಕು.

    ಆಲಿಯಾ ಭಟ್ ತಾಯಿಯ ಮೇಲೆ ಅತ್ಯಾಚಾರ ಪ್ರಯತ್ನ ಆಗಿತ್ತಂತೆ.!ಆಲಿಯಾ ಭಟ್ ತಾಯಿಯ ಮೇಲೆ ಅತ್ಯಾಚಾರ ಪ್ರಯತ್ನ ಆಗಿತ್ತಂತೆ.!

    ಆಲಿಯಾ ಭಟ್ ಅವರ ತಂದೆ ನಿರ್ದೇಶನ ಮಾಡುತ್ತಿರುವ ಸಡಕ್ 2 ಸಿನಿಮಾದಲ್ಲಿ ಸಂಜತ್ ದತ್, ಆದಿತ್ಯ ರಾಯ್ ಕಪೂರ್, ಪೂಜಾ ಭಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

    Alia Bhat Movie Shooting In Mysore

    1991ರಲ್ಲಿ ತೆರೆಕಂಡಿದ್ದ ಸಡಕ್ ಸಿನಿಮಾದ ಮುಂದುವರಿದ ಭಾಗ ಸಡಕ್ 2. ಆ ಚಿತ್ರವನ್ನೂ ಮಹೇಶ್ ಭಟ್ ನಿರ್ದೇಶಿಸಿದ್ದಾರೆ. ಸಂಜಯ್ ದತ್, ಪೂಜಾ ಭಟ್ ಆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

    ಆಲಿಯಾ ಭಟ್ 'ಕಿಸ್' ಬಗ್ಗೆ ಪ್ರಶ್ನೆ: ಕೌನ್ ಬನೇಗಾ ಕರೋರ್ ಪತಿ ಬಗ್ಗೆ ನೆಟ್ಟಿಗರ ಲೇವಡಿ.!ಆಲಿಯಾ ಭಟ್ 'ಕಿಸ್' ಬಗ್ಗೆ ಪ್ರಶ್ನೆ: ಕೌನ್ ಬನೇಗಾ ಕರೋರ್ ಪತಿ ಬಗ್ಗೆ ನೆಟ್ಟಿಗರ ಲೇವಡಿ.!

    ಸಡಕ್ 2 ಸಿನಿಮಾ ಬಿಟ್ಟು, ಅಮಿತಾಭ್ ಬಚ್ಚನ್ ಮತ್ತು ರಣ್ಬೀರ್ ಕಪೂರ್ ಜೊತೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಆಲಿಯಾ ನಟಿಸುತ್ತಿದ್ದಾರೆ. ಈ ಕಡೆ ಸೌತ್ ಇಂಡಸ್ಟ್ರಿಯಲ್ಲಿ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಪ್ರಾಜೆಕ್ಟ್ ನಲ್ಲೀ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

    English summary
    Bollywood actress Alia Bhatt visit to mysore for her upcoming movie sadak 2 shooting.
    Friday, October 18, 2019, 19:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X