For Quick Alerts
  ALLOW NOTIFICATIONS  
  For Daily Alerts

  ಆಲಿಯಾ ಭಟ್‌ಗೆ ಕೊರೊನಾ ನೆಗಟಿವ್: ಬ್ರಹ್ಮಾಸ್ತ್ರ ಚಿತ್ರೀಕರಣದಲ್ಲಿ ಭಾಗಿ

  |

  ಬಾಲಿವುಡ್ ನಟ ರಣ್ಬೀರ್ ಕಪೂರ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಕೊರೊನಾ ಪಾಸಿಟಿವ್ ಬಂದ ನಂತರ ಆಲಿಯಾ ಭಟ್‌ಗೆ ಆತಂಕ ಹೆಚ್ಚಾಗಿತ್ತು.

  ಆಲಿಯಾ ಭಟ್‌ಗೂ ಸೋಂಕು ತಗುಲಿರಬಹುದು ಎಂದು ಅವರ ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಆಲಿಯಾ ಭಟ್‌ಗೆ ಕೊರೊನಾ ನೆಗಟಿವ್ ಬಂದಿದೆ. ಈ ಕುರಿತು ಸ್ವತಃ ಆಲಿಯಾ ಭಟ್ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದು, ''ಸದ್ಯದಲ್ಲೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದೇನೆ'' ಎಂದಿದ್ದಾರೆ.

  ರಣ್ಬೀರ್ ಕಪೂರ್‌ಗೆ ಕೊರೊನಾ ಪಾಸಿಟಿವ್: ಖಚಿತಪಡಿಸಿದ ನೀತು ಕಪೂರ್

  ''ನಿಮ್ಮೆಲ್ಲರ ಸಂದೇಶಗಳನ್ನು ಓದುತ್ತಿದ್ದೇನೆ, ನಿಮ್ಮ ಕಾಳಜಿ ಮತ್ತು ಆರೈಕೆಗೆ ಧನ್ಯವಾದ. ನನಗೆ ಕೊರೊನಾ ನೆಗಟಿವ್ ಬಂದಿದೆ. ವೈದ್ಯರ ಸಲಹೆ ಪಡೆದ ನಂತರ ಇಂದಿನಿಂದಲೇ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.

  ''ನಿಮ್ಮಲ್ಲರ ಪ್ರೀತಿಯಿಂದ ನಾನು ಆರೋಗ್ಯವಾಗಿದ್ದೇನೆ, ನೀವು ಸುರಕ್ಷಿತೆಯಿಂದಿರಿ, ಲವ್ ಯೂ ಆಲ್'' ಎಂದು ಆಲಿಯಾ ಭಟ್ ಬರೆದುಕೊಂಡಿದ್ದಾರೆ.

  ಇತ್ತೀಚಿಗಷ್ಟೆ ನಟ ರಣ್ಬೀರ್ ಕಪೂರ್‌ಗೆ ಕೊರೊನಾ ಸೋಂಕು ತಗುಲಿದೆ. ಈ ಸುದ್ದಿಯನ್ನು ರಣ್ಬೀರ್ ತಾಯಿ ನೀತು ಕಪೂರ್ ಸ್ಪಷ್ಟಪಡಿಸಿದ್ದರು. ''

  ''ರಣ್ಬೀರ್‌ಗೆ ಕೊರೊನಾ ಪಾಸಿಟಿವ್ ಬಂದಿದೆ. ಆತ ಹೋಮ್ ಕ್ವಾರಂಟೈನ್ ಆಗಿದ್ದಾನೆ. ಅದರಿಂದ ಚೇತರಿಸಿಕೊಳ್ಳುತ್ತಿದ್ದಾನೆ. ನಿಮ್ಮೆಲ್ಲರ ಕಾಳಜಿ ಹಾಗೂ ಶುಭ ಹಾರೈಕೆಗೆ ಧನ್ಯವಾದಗಳು'' ಎಂದು ನೀತು ಕಪೂರ್ ಪೋಸ್ಟ್ ಹಾಕಿದ್ದರು. ಅದಕ್ಕೂ ಮುಂಚೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು.

  ಡಿ ಬಾಸ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸೀಕ್ರೆಟ್ ಬಿಚ್ಚಿಟ್ಟ ರಕ್ಷಿತಾ | Filmibeat Kannada

  ಇನ್ನುಳಿದಂತೆ 'ಗಂಗುಬಾಯಿ ಕಥಿಯಾವಾಡಿ' ಸಿನಿಮಾದ ಬಿಡುಗಡೆಯಾಗಿ ಆಲಿಯಾ ಭಟ್ ಕಾಯುತ್ತಿದ್ದಾರೆ. ಜೊತೆಗೆ ಬ್ರಹ್ಮಾಸ್ತ್ರ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಣ್ಬೀರ್ ಕಪೂರ್, ಅಮಿತಾಭ್ ಬಚ್ಚನ್, ನಾಗಾರ್ಜುನ, ಡಿಂಪಲ್ ಕಪಾಡಿಯಾ ಸೇರಿದಂತೆ ಹಲವರು ನಟಿಸಿದ್ದಾರೆ.

  English summary
  Bollywood actress Alia Bhat resumes work after testing negative for Covid 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X