'ಕಾಸ್ಟಿಂಗ್ ಕೌಚ್' ಎದುರಾದ್ರೆ ಹೀಗೆ ಮಾಡಿ ಎಂದ ಆಲಿಯಾ ಭಟ್
ಸಿನಿ ಜಗತ್ತಿನಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಹಳ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಎಲ್ಲ ರಂಗದಲ್ಲೂ ಈ ಸಂಸ್ಕ್ರತಿ ಇದೆ ಎನ್ನುವ ತಾರೆಯರು ಚಿತ್ರವಲಯದಲ್ಲಿ ಹೆಚ್ಚಿದೆ ಎಂದು ಬಹುತೇಕರು ಒಪ್ಪಿಕೊಂಡಿದ್ದಾರೆ.
ಮತ್ತೊಂದೆಡೆ ತೆಲುಗು ನಟಿ ಶ್ರೀರೆಡ್ಡಿ 'ಕಾಸ್ಟಿಂಗ್ ಕೌಚ್' ಖಂಡಿಸಿ, ತೆಲುಗು ವಾಣಿಜ್ಯ ಮಂಡಳಿ ಎದುರು ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದರು. ಅದಾದ ಬಳಿಕ ಈ ಸಮಸ್ಯೆಯ ಬಗ್ಗೆ ಹಲವು ನಟಿಯರು ಬಹಿರಂಗವಾಗಿ ಮಾತನಾಡಿದರು.
ಇದೀಗ, ಬಾಲಿವುಡ್ ನಟಿ ಆಲಿಯಾ ಭಟ್ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೆ ನೀಡಿದ್ದು, ಈ ಸಮಸ್ಯೆಗೆ ಸಿಲುಕಿದವರು ಏನು ಮಾಡ್ಬೇಕು ಎಂದು ಸಂದೇಶ ನೀಡಿದ್ದಾರೆ.

''ಕಾಸ್ಟಿಂಗ್ ಕೌಚ್ ಎಂಬ ವಿಷ್ಯ ದಿಢೀರ್ ಅಂತ ಚರ್ಚೆಗೆ ಬಂದಿದೆ. ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ವಿಷ್ಯದ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಕೆಟ್ಟ ಪರಿಣಾಮ ಬೀರುತ್ತೆ. ಇಂಡಸ್ಟ್ರಿಯ ಬಗ್ಗೆ ತಪ್ಪು ತಿಳುವಳಿಕೆ ಮೂಡುತ್ತೆ. ಇದುವರೆಗೂ ಅಂತಹ ಪರಿಸ್ಥಿತಿ ನಾನು ಎದುರಿಸಿಲ್ಲ. ಆದರೆ, ಚಿತ್ರರಂಗದಲ್ಲಿ ಕೆಲಸ ಮಾಡುವುದು ಎಲ್ಲರಿಗೂ ಸುಲಭವಲ್ಲ. ಅವಕಾಶಕ್ಕಾಗಿ ಕಷ್ಟಪಡುತ್ತಿರುವ ವೇಳೆ ಕೆಲವರು ಅದನ್ನು ದುರಪಯೋಗ ಪಡಿಸಿಕೊಳ್ಳುತ್ತಾರೆ'' ಎಂದಿದ್ದಾರೆ.
ಇನ್ನು ಚಿತ್ರರಂಗಕ್ಕೆ ಬರುವ ಹೊಸಬರಿಗೆ ಈ ಬಗ್ಗೆ ಸಂದೇಶ ನೀಡಿರುವ ಆಲಿಯಾ ಭಟ್ ''ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಚಿತ್ರರಂಗಕ್ಕೆ ಬನ್ನಿ. ಒಂದು ವೇಳೆ ನಿಮಗೆ ಕಾಸ್ಟಿಂಗ್ ಕೌಚ್ ಅಂತಹ ಪರಿಸ್ಥಿತಿ ಎದುರಾದ್ರೆ ಮೊದಲು ನಿಮ್ಮ ಮನೆಯವರಿಗೆ ಹೇಳಿ. ಬಳಿಕ ಪೊಲೀಸರಿಗೆ ದೂರು ನೀಡಿ'' ಎಂದಿದ್ದಾರೆ.
ಸದ್ಯ ಆಲಿಯಾ ಭಟ್ ಅಭಿನಯದ 'ರಾಝೀ' ಸಿನಿಮಾ ಸೂಪರ್ ಸಕ್ಸಸ್ ಕಂಡಿದ್ದು, ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿದೆ. ಬಿಡುಗಡೆಯಾದ ಎರಡೇ ವಾರದಲ್ಲಿ ನೂರ ಕೋಟಿಯ ಸನಿಹದಲ್ಲಿದೆ.


Click it and Unblock the Notifications











