For Quick Alerts
  ALLOW NOTIFICATIONS  
  For Daily Alerts

  ಮಹಾಕಾಳೇಶ್ವರ ದೇವಾಲಯ ಪ್ರವೇಶಿಸದಂತೆ ಆಲಿಯಾ-ರಣ್ಬೀರ್‌ಗೆ ತಡೆ

  |

  'ಬ್ರಹ್ಮಾಸ್ತ್ರ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ಅವರು ನಿನ್ನೆ (ಸೆಪ್ಟೆಂಬರ್ 06) ರ ರಾತ್ರಿ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಅವರುಗಳು ದೇವಾಲಯ ಪ್ರವೇಶದಂತೆ ಹಿಂದು ಸಂಘಟನೆಗಳ ಕಾರ್ಯಕರ್ತರು ತಡೆದಿದ್ದಾರೆ.

  ರಣ್ಬೀರ್ ಕಪೂರ್, ಆಲಿಯಾ ಭಟ್ ಹಾಗೂ ನಿರ್ದೇಶಕ ಅಯಾನ್ ಮುಖರ್ಜಿ ಒಟ್ಟಿಗೆ ನಿನ್ನೆ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ದೇವಾಲಯದ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದ ಭಜರಂಗದಳ ಕಾರ್ಯಕರ್ತರು ರಣ್ಬೀರ್ ಹಾಗೂ ಆಲಿಯಾ ಭಟ್ ದೇವಾಲಯ ಪ್ರವೇಶದಂತೆ ತಡೆದರು.

  ರಣ್ಬೀರ್ ಕಪೂರ್ ಈ ಹಿಂದೆ ತಾವು ಬೀಫ್ ತಿನ್ನುವುದಾಗಿ ನೀಡಿದ್ದ ಹೇಳಿಕೆಯಿಂದಾಗಿ ಅವರು ಮಹಾಕಾಳೇಶ್ವರ ದೇವಾಲಯ ಪ್ರವೇಶಿಸಬಾರದು ಎಂದು ಭಜರಂಗದಳ ಕಾರ್ಯಕರ್ತರು ತಡೆದಿದ್ದಾರೆ. ರಣ್ಬೀರ್ ಹಾಗೂ ಆಲಿಯಾ ವಿರುದ್ಧ ಘೋಷಣೆಗಳನ್ನು ಕೂಗಿರುವ ಭಜರಂಗದಳ ಕಾರ್ಯಕರ್ತರು, 'ಜೈ ಶ್ರೀರಾಮ್' ಘೋಷಣೆಗಳನ್ನು ಸಹ ಕೂಗಿದ್ದಾರೆ.

  ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ರಣ್ಬೀರ್ ಕಪೂರ್, ತಮಗೆ, ಚಿಕನ್, ಮಟನ್ ಹಾಗೂ ಬೀಫ್ ಆಹಾರಗಳು ತಿನ್ನಲು ಇಷ್ಟವೆಂದು ಹೇಳಿಕೊಂಡಿದ್ದರು. ದನದ ಮಾಂಸ ತಿನ್ನುವ ವ್ಯಕ್ತಿ ದೇವಾಲಯಕ್ಕೆ ಪ್ರವೇಶಿಸಬಾರದು ಎಂದು ಭಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಆಲಿಯಾ ಭಟ್‌ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಭಜರಂಗ ದಳ ಕಾರ್ಯಕರ್ತರು, ಆಲಿಯಾ ಭಟ್ ಕೆಲವು ದಿನಗಳ ಹಿಂದೆ, 'ನಾನು ಇಷ್ಟ ಇಲ್ಲದಿದ್ದರೆ ನನ್ನ ಸಿನಿಮಾ ನೋಡಬೇಡಿ' ಎಂದು ಹೇಳಿದ್ದನ್ನು ವಿರೋಧಿಸಿದ್ದಾರೆ.

  ಆಲಿಯಾ ಹಾಗೂ ರಣ್ಬೀರ್‌ಗೆ ದೇವಾಲಯ ಪ್ರವೇಶಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾದ ನಿರ್ದೇಶಕ ಅಯಾನ್ ಮುಖರ್ಜಿ ಮಾತ್ರವೇ ದೇವಾಲಯ ಪ್ರವೇಶಿಸಿದ್ದು, ದೇವರ ದರ್ಶನ ಪಡೆದಿದ್ದಾರೆ. ತಾವು ದೇವರ ದರ್ಶನ ಪಡೆದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ''ಇಂದು ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ತುಂಬಾ ಸಂತೋಷ ಮತ್ತು ಚೈತನ್ಯವನ್ನು ಅನುಭವಿಸಿದೆ. ಅತ್ಯಂತ ಸಂತೃಪ್ತಿಕರ ದರ್ಶನವನ್ನು ಪಡೆದುಕೊಂಡೆ. ಬ್ರಹ್ಮಾಸ್ತ್ರ ಚಲನಚಿತ್ರ ನಿರ್ಮಾಣದ ಪ್ರಯಾಣವನ್ನು ಮುಗಿಸಲು ಹಾಗೂ ನಮ್ಮ ಸಿನಿಮಾದ ಬಿಡುಗಡೆಗೆ ಸಕಾರಾತ್ಮಕ ಶಕ್ತಿ ಮತ್ತು ಆಶೀರ್ವಾದವನ್ನು ಪಡೆಯಲು ಈ ಭೇಟಿ ಅವಶ್ಯಕವಾಗಿತ್ತು'' ಎಂದಿದ್ದಾರೆ.

  'ಬ್ರಹ್ಮಾಸ್ತ್ರ' ಸಿನಿಮಾವು ಶಿವನ ಶಕ್ತಿಯ ಕುರಿತಾದ ಸಿನಿಮಾ ಆಗಿದ್ದು ಸಿನಿಮಾದಲ್ಲಿ ರಣ್ಬೀರ್ ಕಪೂರ್, ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಅಮಿತಾಬ್ ಬಚ್ಚನ್, ತೆಲುಗು ನಟ ನಾಗಾರ್ಜು, ಕೆಜಿಎಫ್ ಸುಂದರಿ ಮೌನಿ ರಾಯ್, ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದಾರೆ. ಸಿನಿಮಾವು ಸೆಪ್ಟೆಂಬರ್ 09 ರಂದು ಬಿಡುಗಡೆ ಆಗಲಿದೆ.

  English summary
  Alia Bhatt and Ranbir Kapoor stopped from entering Mahakaleshwar Temple. Bhajarangadal members protest against Ranbir and Alia over Ranbir's bheef eating comment.
  Wednesday, September 7, 2022, 10:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X