ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಸಲ್ಮಾನ್ ಗೆ ಆಲಿಯಾ ನಾಯಕಿ

ಬಾಲಿವುಡ್ ನ ಖ್ಯಾತ ನಿರ್ದೇಶಕ, ಸೂಪರ್ ಹಿಟ್ ಸಿನಿಮಾಗಳ ಸಾರಥಿ ಸಂಜಯ್ ಲೀಲಾ ಬನ್ಸಾಲಿ 'ಪದ್ಮಾವತ್' ಚಿತ್ರದ ನಂತರ 'ಇನ್ಶಲ್ಲಾಹ್' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ವಿಶೇಷ ಅಂದರೆ ಬರೋಬ್ಬರಿ 20 ವರ್ಷದ ನಂತರ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ನಾಯಕನಾಗಿ ಕಾಣಿಸಿಕೊಳ್ಳತ್ತಿದ್ದಾರೆ. 'ಹಮ್ ದಿಲ್ ದೆ ಚುಕೆ ಸನಂ' ಚಿತ್ರದ ನಂತರ ಸಲ್ಲು ಮತ್ತು ಸಂಜಯ್ ಲೀಲಾ ಬನ್ಸಾಲಿ ಒಂದಾಗುತ್ತಿರುವುದು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

'ಹಮ್ ದಿಲ್ ದೆ ಚುಕೆ ಸನಂ', 'ದೇವದಾಸ್', 'ರಾಮ್ ಲೀಲಾ', 'ಬಾಜಿರಾವ್ ಮಸ್ತಾನಿ', 'ಪದ್ಮಾವತ್' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಬನ್ಸಾಲಿಯ 'ಇನ್ಶಲ್ಲಾಹ್' ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

Alia bhatt and salman khan together in sanjay leela bhansali movie

ಬಾಲಿವುಡ್ ನಟಿಮಣಿಯರ ಪಾಲಿಗೆ ಲಕ್ಕಿ ನಿರ್ದೇಶಕರಾಗಿರುವ ಬನ್ಸಾಲಿ ಮುಂದಿನ ಸಿನಿಮಾಗೆ ನಾಯಕಿ ಯಾರಾಗ್ತಾರೆ ಅಂತ ಸಾಕಷ್ಟು ಚರ್ಚೆಗಳಾಗುತ್ತಿತ್ತು. ಇದೀಗ, ಆಲಿಯಾ ಭಟ್ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಕತೂಹಲಕ್ಕೆ ತೆರೆ ಎಳೆದಿದ್ದಾರೆ.

ಈ ಬಗ್ಗೆ ಸ್ವತಃ ಆಲಿಯಾ ಭಟ್ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದು, ಬಾಲಿವುಡ್ ನ ಮ್ಯಾಜಿಕಲ್ ಜೋಡಿ ಸಲ್ಮಾನ್ ಮತ್ತು ಬನ್ಸಾಲಿ ಜೊತೆ ಸಿನಿಮಾ ಮಾಡುತ್ತಿರುವುದಾಗಿ ಸಂತಸ ಹಂಚಿಕೊಂಡಿದ್ದಾರೆ.

ಬನ್ಸಾಲಿ ಸಿನಿಮಾಗೆ ನಾಯಕಿಯಾಗಬೇಕು ಎನ್ನುವುದು ಬಾಲಿವುಡ್ ನ ಪ್ರತಿಯೊಬ್ಬ ನಾಯಕಿಯರ ಕನಸಾಗಿರುತ್ತೆ. ಅಂತಹ ಅವಕಾಶ ಈ ಬಾರಿ ಆಲಿಯಾ ಪಾಲಾಗಿದೆ. ಇನ್ನು ಮೊದಲ ಬಾರಿಗೆ ಆಲಿಯಾ ಭಟ್ ಸಲ್ಲುಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ತೆರೆಮೇಲೆ ಬರುತ್ತಿರುವ ಈ ಫ್ರೆಶ್ ಜೋಡಿ ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ.

Alia bhatt and salman khan together in sanjay leela bhansali movie

ಬಾಲಿವುಡ್ ನ ಬ್ಯೂಟಿಫುಲ್ ಮತ್ತು ಟ್ಯಾಲೆಂಟೆಡ್ ನಟಿಣಿಯರಾದ ಮನಿಶಾ ಕೋಹಿರಾಲ, ಮಾಧುರಿ ದೀಕ್ಷಿತ್, ಐಶ್ವರ್ಯ ರೈ, ಸೋನಂ ಕಪೂರ್, ದೀಪಿಕಾ ಪಡುಕೊಣೆ ಅಂತಹ ಟಾಪ್ ನಟಿಯರು ಬನ್ಸಾಲಿ ಸಿನಿಮಾದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ. ಈಗ ಆಲಿಯಾ ಆಯ್ಕೆಯಾಗಿರುವುದು ಬಾಲಿವುಡ್ ಮಂದಿಯ ಹುಬ್ಬೇರುವಂತೆ ಮಾಡಿದೆ.

More from Filmibeat

English summary
Alia Bhatt and Salman Khan together in Sanjay Leela Bhansali's 'Inshallah'. Alia first time working with director Sanjay Leela Bhansali's movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X