For Quick Alerts
  ALLOW NOTIFICATIONS  
  For Daily Alerts

  'RRR' ಬಳಿಕ ಅಲ್ಲು ಅರ್ಜುನ್ ಜೊತೆ ತೆರೆಹಂಚಿಕೊಂಡ ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್

  |

  ಬಾಲಿವುಡ್ ನ ಖ್ಯಾತ ನಟಿ ಅಲಿಯಾ ಭಟ್ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಅಲಿಯಾ, ಸೀತೆಯಾಗಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್ ಗೆ ಜೋಡಿಯಾಗಿ ಕಾಣಿಸಿಕೊಂಡಿರುವ ಅಲಿಯಾ ಇದೀಗ ತೆಲುಗಿನ ಮತ್ತೋರ್ವ ಖ್ಯಾತ ನಟನ ಜೊತೆ ತೆರೆಹಂಚಿಕೊಂಡಿದ್ದಾರೆ.

  ಅದು ಮತ್ಯಾರು ಅಲ್ಲ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್. ಅಲಿಯಾ ಮೊದಲ ಬಾರಿಗೆ ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು, ಯಾವುದೋ ಸಿನಿಮಾಗಾಗಿ ಎಂದು ಭಾವಿಸಬೇಡಿ. ಇಬ್ಬರು ಒಟ್ಟಿಗೆ ತೆರೆಮೇಲೆ ಬಂದಿದ್ದು ಒಂದು ಜಾಹೀರಾತಿಗಾಗಿ.

  ಅಲ್ಲು ಅರ್ಜುನ್‌ಗೆ ವಿಲನ್ ಆದ ಫಹಾದ್ ಫಾಸಿಲ್‌ಗೆ ಭಾರಿ ಮೊತ್ತದ ಸಂಭಾವನೆಅಲ್ಲು ಅರ್ಜುನ್‌ಗೆ ವಿಲನ್ ಆದ ಫಹಾದ್ ಫಾಸಿಲ್‌ಗೆ ಭಾರಿ ಮೊತ್ತದ ಸಂಭಾವನೆ

  ಇಬ್ಬರು ಮರುಭೂಮಿಯಲ್ಲಿ ಬಸ್ ಗಾಗಿ ಕಾಯುತ್ತಿದ್ದು, ಅಲ್ಲು ಅರ್ಜುನ್, ಅಲಿಯಾ ಕಾಲೆಳೆಯುತ್ತಿರುವ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಇದೊಂದು ತಂಪು ಪಾನಿಯದ ಜಾಹೀರಾತಾಗಿದ್ದು, ಅಲಿಯಾ ಮೊದಲ ಬಾರಿಗೆ ದಕ್ಷಿಣ ಭಾರತದ ಸ್ಟಾರ್ ನಟನ ಜೊತೆ ಕಾಣಿಸಿಕೊಂಡಿದ್ದಾರೆ.

  ಅಂದಹಾಗೆ ಈ ಜಾಹೀರಾತಿನ ವಿಡಿಯೋವನ್ನು ಸ್ವತಃ ಅಲ್ಲು ಅರ್ಜುನ್ ಹಂಚಿಕೊಂಡಿದ್ದಾರೆ. ಇಬ್ಬರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಲೈಕ್ಸ್ ಒತ್ತಿ ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಆದಷ್ಟು ಬೇಗ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿ ಎಂದು ಹಾರೈಸುತ್ತಿದ್ದಾರೆ.

  ಪುನೀತ್ ದರ್ಶನ್ಗೆ ಎಚ್ಚರಿಕೆ ನೀಡಿದ್ರು ಸಚಿವ ಡಿ ಸುಧಾಕರ್ | Filmibeat Kannada

  ಅಲ್ಲು ಅರ್ಜುನ್ ಸದ್ಯ ಪುಷ್ಪಾ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಡಿ ಗ್ಲಾಮ್ ಆಗಿ ಕಾಣಿಸಿಕೊಂಡಿರುವ ಅಲ್ಲು ಮೊದಲ ಬಾರಿಗೆ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಸ್ಟೈಲಿಶ್ ಸ್ಟಾರ್. ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ.

  English summary
  Bollywood Actress Alia Bhatt and Telugu Actor Allu Arjun shares screen space for first time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X