For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ಆಲಿಯಾ ಭಟ್

  By Pavithra
  |

  ಆಲಿಯಾ ಭಟ್ ಅಭಿನಯದ ಸ್ಪೈ- ಥ್ರಿಲ್ಲರ್ ಚಿತ್ರ 'ರಾಝಿ' ಭಾಕ್ಟ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಡುಗಡೆ ದಿನವೇ ಅಭಿಮಾನಿಗಳಿಂದ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು ಉತ್ತಮ ವಿಮರ್ಶೆಯನ್ನು ಪಡೆದುಕೊಂಡಿತ್ತು.

  ಜಂಗ್ಲಿ ಪಿಕ್ಚರ್ಸ್ ಹಾಗೂ ಧರ್ಮಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಿರುವ 'ರಾಝಿ' 5 ದಿನಕ್ಕೆ 5.90 ಕೋಟಿ ಗಳಿಕೆ ಮಾಡಿದ್ದು ಇದುವರೆಗೆ 51.24 ರೂ.ಕಲೆಕ್ಷನ್ ಮಾಡಿದೆಯಂತೆ. 'ರಾಝಿ' ಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶನ ಮಾಡಿದ್ದಾರೆ. ಆಲಿಯಾ ಭಟ್‌ಗೆ ಜೋಡಿಯಾಗಿ ವಿಕಿ ಕೌಶಾಲ್ ಅಭಿನಯಿಸಿದ್ದಾರೆ. ಭಾರತದ ಗೂಢಚಾರಿಣಿಯಾಗಿ ಪಾಕಿಸ್ತಾನಕ್ಕೆ ಹೋಗುವ ಪಾತ್ರದಲ್ಲಿ ಆಲಿಯಾ ಭಟ್ ನಿರ್ವಹಿಸಿರುವು ಇಲ್ಲಿ ವಿಶೇಷ.

  ಅಪ್ಪ-ಅಮ್ಮನ ಕಣ್ಣಲ್ಲಿ ನೀರು ತರಿಸಿದ ನಟಿ 'ಆಲಿಯಾ ಭಟ್'ಅಪ್ಪ-ಅಮ್ಮನ ಕಣ್ಣಲ್ಲಿ ನೀರು ತರಿಸಿದ ನಟಿ 'ಆಲಿಯಾ ಭಟ್'

  1971ರ ಭಾರತ-ಪಾಕ್ ಯುದ್ಧದ ಮಹತ್ವದ ಮಾಹಿತಿ ಕಲೆಹಾಕಲು ಆಲಿಯಾ ಭಟ್‍ ರನ್ನು ಗೂಢಚಾರಿಣಿಯನ್ನಾಗಿ ಕಳುಹಿಸಲಾಗುತ್ತದೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿಸುವ ಕಥೆಯನ್ನೇ 'ರಾಝಿ' ಚಿತ್ರವನ್ನಾಗಿ ಮಾಡಲಾಗಿದೆ.

  ಆಲಿಯಾ ಭಟ್ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದು ಮಹಿಳಾ ಪ್ರೇಕ್ಷಕರಿಗಂತು ರಾಝಿ ಸಿನಿಮಾ ಹಾಟ್ ಫೇವರೆಟ್ ಆಗಿದೆ. ಚಿತ್ರದಿಂದ ಚಿತ್ರಕ್ಕೆ ಆಲಿಯಾ ಅಭಿನಯದಲ್ಲಿ ಕಂಡು ಬರುತ್ತಿರುವ ಪ್ರಬುದ್ದತೆಗೆ ಸಿನಿಮಾ ಪ್ರೇಕ್ಷಕ ಮಾರು ಹೋಗಿದ್ದಾನೆ.

  English summary
  thriller ‘Raazi’ starring the versatile Alia Bhatt and Vicky Kaushal has been maintaining a rock-solid position at the box-office. The Junglee Pictures and Dharma Productions’ film collected Rs 5.90 crore on its third weekday on Wednesday

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X