Just In
Don't Miss!
- News
ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಜೈಲು ಶಿಕ್ಷೆ ಇಂದಿಗೆ ಅಂತ್ಯ, ಆಸ್ಪತ್ರೆಯಿಂದಲೇ ಬಿಡುಗಡೆ ಸಾಧ್ಯತೆ
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಣಬೀರ್ ಕಪೂರ್ ಇದ್ದ ಅಪಾರ್ಟಮೆಂಟ್ ನಲ್ಲೇ 32 ಕೋಟಿ ರೂ. ಫ್ಲಾಟ್ ಖರೀದಿಸಿದ ಅಲಿಯಾ ಭಟ್
ಬಾಲಿವುಡ್ ನ ಖ್ಯಾತ ನಟಿ ಅಲಿಯಾ ಭಟ್ ಮುಂಬೈನಲ್ಲಿ ದುಬಾರಿ ಬೆಲೆಯ ಫ್ಲಾಟ್ ಖರೀದಿಸಿ ಸುದ್ದಿಯಲ್ಲಿದ್ದಾರೆ. 32 ಕೋಟಿ ರೂಪಾಯಿ ಬೆಲೆ ಬಾಳುವ ಫ್ಲಾಟ್ ಎಂದು ಹೇಳಲಾಗುತ್ತಿದೆ. ಈಗಾಗಲೇ ಅಲಿಯಾ ಬಳಿ ಎರಡು ಐಷಾರಾಮಿ ಬಂಗಲೆಗಳಿವೆ. ಇದೀಗ ಹೊಸ ಫ್ಲಾಟ್ ಕೂಡ ಸೇರಿಕೊಂಡಿದೆ.
ವಿಶೇಷ ಎಂದರೆ ಅಲಿಯಾ ಸದ್ಯ ಖರೀದಿ ಮಾಡಿರುವ ಫ್ಲಾಟ್ ಭಾವಿ ಪತಿ ರಣಬೀರ್ ಕಪೂರ್ ಇದ್ದ ಅಪಾರ್ಟ್ ಮೆಂಟ್ ನಲ್ಲೇ. ರಣಬೀರ್ ಕಪೂರ್ ಫ್ಲಾಟ್ ಇರುವುದು 7 ಮಹಡಿಯಲ್ಲಾದರೆ, ಅಲಿಯಾ ಖರೀದಿ ಮಾಡಿರುವ ಫ್ಲಾಟ್ 5ನೇ ಮಹಡಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ನಟನೆ ಜೊತೆಗೆ ಹೊಸ ಉದ್ಯಮಕ್ಕೆ ಕೈ ಹಾಕಿದ ಆಲಿಯಾ ಭಟ್
ಅಲಿಯಾ ಮತ್ತು ರಣಬೀರ್ ಪ್ರೀತಿ ಪ್ರೇಮದ ವಿಚಾರವೇನು ಗುಟ್ಟಾಗಿ ಉಳಿದಿಲ್ಲ. ಇಬ್ಬರು ಸದಾ ಜೊತೆಯಾಗಿ ಓಡಾಡಿಕೊಂಡಿದ್ದಾರೆ. ಆದರೆ ಇಬ್ಬರ ಬಗ್ಗೆ ಎಷ್ಟೇ ವದಂತಿಗಳು ಹರಿದಾಡಿದರೂ ಇಬ್ಬರು ಬಾಯಿಬಿಟ್ಟು ಒಪ್ಪಿಕೊಂಡಿಲ್ಲ. ಆದರೆ ಇಬ್ಬರೂ ಮದುವೆ ಆಗುವುದು ಪಕ್ಕಾ ಎನ್ನುತ್ತಿವೆ ಮೂಲಗಳು.
ಅದೇನೆ ಇರಲಿ ಸದ್ಯ ಅಲಿಯಾ ಖದೀರಿ ಮಾಡಿರುವ ಫ್ಲಾಟ್ 2,460 ಚದರ ಅಡಿ ವಿಸ್ತೀರ್ಣ ಹೊಂದಿದೆಯಂತೆ. 2021ರಲ್ಲಿ ಅಲಿಯಾ ಮತ್ತು ರಣಬೀರ್ ಮದುವೆ ಆಗಲಿದ್ದು, ಪೂರ್ವಭಾವಿಯಾಗಿ ಮನೆ ಖರೀದಿ ಮಾಡಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.
ಅಲಿಯಾ ಹೊಸ ಮನೆಯ ಒಳಾಂಗಣ ವಿನ್ಯಾಸವನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಮಾಡಿದ್ದಾರೆ. ಗೌರಿ ಖಾನ್ ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಎನ್ನುವುದು ಗೊತ್ತಿರುವ ವಿಚಾರ. ಬಾಲಿವುಡ್ ನ ಸಾಕಷ್ಟು ಕಲಾವಿದರ ಮನೆಗೆ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಇದೀಗ ಅಲಿಯಾ ಹೊಸ ಮನೆಯ ಅಂದವನ್ನು ಹೆಚ್ಚಿಸಿದ್ದಾರೆ ಗೌರಿ ಖಾನ್.