For Quick Alerts
  ALLOW NOTIFICATIONS  
  For Daily Alerts

  'ಗಂಗೂಬಾಯಿ ಕಾಠಿಯಾವಾಡಿ' ಚಿತ್ರೀಕರಣ ಮುಕ್ತಾಯ: ಕುತೂಹಲ ಮೂಡಿಸಿದ ಬನ್ಸಾಲಿ ಮುಂದಿನ ಸಿನಿಮಾ

  |

  ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಾಂಬಿನೇಷನ್ ನ ಬಹುನಿರೀಕ್ಷೆಯ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ಚಿತ್ರೀಕರಣ ಮುಕ್ತಾಯಗೊಳಿಸಿದ್ದಾರೆ. ಸುಮಾರು ಎರಡು ವರ್ಷಗಳಿಂದ ಗಂಗೂಬಾಯಿ ಕಾಠಿಯಾವಾಡಿ ಚಿತ್ರೀಕರಣದಲ್ಲಿ ನಿರತರಾಗಿದ್ದ ಆಲಿಯಾ ಕೊರೊನಾ ನಡುವೆಯೂ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿದ್ದಾರೆ.

  ಕೊರೊನಾ ಕಾರಣದಿಂದ ಸಿನಿಮಾ ಚಿತ್ರೀಕರಣ ತಡವಾಗುತ್ತಲೇ ಬಂದಿತ್ತು. ದೀರ್ಘಕಾಲದ ಚಿತ್ರೀಕರಣದ ಬಳಿಕ ಕೊನೆಗೂ 'ಗಂಗೂಬಾಯಿ ಕಾಠಿಯಾವಾಡಿ' ಮುಗಿಸಿ ಹೊಸ ಸಿನಿಮಾದ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ ಸಂಜಯ್ ಲೀಲಾ ಬನ್ಸಾಲಿ.

  ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಹಾಜರಾಗಿದ್ದ ಇಡೀ ತಂಡ ಮುಂಬೈ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡಿ ಮುಗಿಸಿದೆ. ಅಂದಹಾಗೆ ಗಂಗೂಬಾಯಿ ಸಿನಿಮಾ ನೈಜ ಘಟನೆ ಆಧರಿಸಿದ ಚಿತ್ರವಾಗಿದೆ. ಮುಂಬೈನ ಕಾಮಾಟಿಪುರದ ಡಾನ್ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಗಂಗೂಬಾಯಿಯಾಗಿ ನಟಿ ಆಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

  ಇತ್ತೀಚಿಗೆ ಗಂಗೂಬಾಯಿ ಸಿನಿಮಾದ ವಿರುದ್ಧ ಅವರ ದತ್ತು ಪುತ್ರ ಎಂದು ಹೇಳಿಕೊಳ್ಳುತ್ತಿರುವ ಬಾಬುರಾವ್ ಶಾ ಆಕ್ರೋಶ ಹೊರಹಾಕಿದ್ದರು. ಚಿತ್ರದಲ್ಲಿ ಗಂಗೂಬಾಯಿ ಅವರನ್ನು ಕೆಟ್ಟದಾಗಿ ತೊರಿಸಲಾಗಿದೆ ಎಂದು ಚಿತ್ರತಂಡದ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೇ ಸಂಜಯ್ ಲೀಲಾ ಬನ್ಸಾಲಿ ಮತ್ತು ನಿರ್ಮಾಣ ಸಂಸ್ಥೆ ವಿರುದ್ಧ ದೂರು ನೀಡಿದ್ದರು.

  ಕೊರೊನಾ, ವಿವಾದಗಳ ನಡುವೆಯೂ ಚಿತ್ರೀಕರಣ ಮಾಡಿ ಮುಗಿಸಿದೆ ಸಿನಿಮಾತಂಡ. ಅಂದಹಾಗೆ ನಿರ್ದೇಶಕ ಬನ್ಸಾಲಿ ಗಂಗೂಬಾಯಿ ಮುಗಿಸುತ್ತಿದ್ದಂತೆ ಮುಂದಿನ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಬನ್ಸಾಲಿ ಗಂಗೂಬಾಯಿ ಸಿನಿಮಾ ಬಳಿಕ 'ಹೀರಾ ಮಂಡಿ' ವೆಬ್ ಸರಣಿ ಚಿತ್ರೀಕರಣ ಪ್ರಾರಂಭ ಮಾಡುತ್ತಿದ್ದಾರೆ.

  ನಿಖಿಲ್ ಕುಮಾರಸ್ವಾಮಿ ಮನೇಲಿ ಸಂತೋಷ- ಸಂಭ್ರಮ ! | Oneindia Kannada

  ಗಂಗೂಬಾಯಿ ಚಿತ್ರೀಕರಣ ನಡೆದ ಸ್ಥಳದಲ್ಲೇ 'ಹೀರಾ ಮಂಡಿ' ವೆಬ್ ಸರಣಿ ಪ್ರಾರಂಭಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರಂತೆ. ಅಂದಹಾಗೆ ಹೀರಾ ಮಂಡಿ ಬನ್ಸಾಲಿ ನಿರ್ಮಾಣದಲ್ಲಿ ಮೂಡಿರುತ್ತಿರುವ ಸಿನಿಮಾ. ವೆಬ್ ಸರಣಿಗೆ ವಿಭು ಪುರಿ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ ಬನ್ಸಾಲಿ ನಿರ್ದೇಶನದ ಮುಂದಿನ ಸಿನಿಮಾದ ಮೇಲೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಯಾವ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಕಾದುನೋಡಬೇಕು.

  English summary
  Bollywood Actress Alia Bhatt completes Gangubai Kathiawadi shooting. Director Sanjay Leela Bhansali starts new project on same floor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X