Alia Bhatt Deepfake: ಯುವತಿಯ ಅಶ್ಲೀಲ ವಿಡಿಯೋಗೆ ಆಲಿಯಾ ಭಟ್ ಮುಖ ಅಂಟಿಸಿದ ಕಿಡಿಗೇಡಿಗಳು

Alia Bhatt Deepfake Viral Video: ತಂತ್ರಜ್ಞಾನ ಮಾನವ ಕುಲದ ಒಲಿತಿಗೆ ಉಪಯೋಗ ಆಗುತ್ತಿರುವುದಕ್ಕಿಂತ ಕೆಟ್ಟ ಉದ್ದೇಶಕ್ಕೆ ಬಳಕೆಯಾಗುವುದು ಹೆಚ್ಚಾಗ್ತಿದೆ. AI ತಂತ್ರಜ್ಞಾನವೂ ಈಗ ಅದೇ ಹಾದಿ ಹಿಡಿದಿದೆ. ಸದ್ಯ ಭಾರತದಲ್ಲಿ ಡೀಪ್‌ಫೇಕ್ ವಿಡಿಯೋ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಕಿಡಿಗೇಡಿಗಳು ಸೆಲೆಬ್ರೆಟಿಗಳ ತೇಜೊವಧೆ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ.

ಸೋಶಿಯಲ್ ಮೀಡಿಯಾ ಜಮಾನದಲ್ಲಿ ಯಾವುದು ರಿಯಲ್? ಯಾವುದು ಫೇಕ್? ಅನ್ನೋದೇ ಗೊತ್ತಾಗುತ್ತಿಲ್ಲ. ಅಷ್ಟರಮಟ್ಟಿಗೆ ತಂತ್ರಜ್ಞಾನ ಬಳಸಿ ಹುಲಿಯನ್ನು ಬೆಕ್ಕಿನ ತರ ಬೆಕ್ಕನ್ನು ಹುಲಿ ತರ ತೋರಿಸಲಾಗುತ್ತಿದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಅಶ್ಲೀಲ ವಿಡಿಯೋ, ಫೋಟೊಗಳಿಗೆ ಮಾರ್ಪ್ ಮಾಡಿ ನಟಿಯರ ಮುಖ ಅಂಟಿಸಿ ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಡಲಾಗುತ್ತಿದೆ. ಕೆಲವರು ಇದನ್ನು ನಿಜ ಎಂದೇ ನಂಬುತ್ತಿದ್ದಾರೆ. ನಟಿಯರು ಈ ರೀತಿಯೆಲ್ಲಾ ಕ್ಯಾಮರಾ ಮುಂದೆ ಬಂದಿದ್ದಾರಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Alia Bhatt Deepfake Viral Video

ತಿಂಗಳ ಹಿಂದೆಯಷ್ಟೆ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಸದ್ದು ಮಾಡಿತ್ತು. ಈ ಬಗ್ಗೆ ಭಾರೀ ಚರ್ಚೆ ಆಗಿತ್ತು. ಇತ್ತೀಚೆಗೆ ಪ್ರಧಾನಿ ಮೋದಿ ಕೂಡ ಡೀಪ್‌ಫೇಕ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ರಶ್ಮಿಕಾ ಬಳಿಕ ಕತ್ರೀಕಾ ಕೈಫ್ ಹಾಗೂ ಕಾಜೋಲ್ ಡೀಪ್‌ಫೇಕ್‌ ವಿಡಿಯೋಗಳು ಸಖತ್ ವೈರಲ್ ಆಗಿದ್ದವು. ರಶ್ಮಿಕಾ ಪ್ರಕರಣದಲ್ಲಿ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಈಗ ಆಲಿಯಾ ಭಟ್ ಡೀಪ್‌ಫೇಕ್‌ ವಿಡಿಯೋ ಹರಿದಾಡ್ತಿದೆ.

ಯುವತಿಯೊಬ್ಬಳು ಅಶ್ಲೀಲವಾಗಿ ಕಾಣಿಸಿಕೊಂಡು ಚಿತ್ರಿಸಿರುವ ಸೆಲ್ಫಿ ವಿಡಿಯೋಗೆ ಆಲಿಯಾ ಭಟ್ ಮುಖ ಅಂಟಿಸಿ ವೈರಲ್ ಮಾಡಲಾಗಿದೆ. ಈ ವಿಚಾರ ಬಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ಬ್ರಿಟಿಷ್-ಇಂಡಿಯನ್ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಜರಾ ಪಟೇಲ್ ಲಿಫ್ಟ್ ಒಳಗೆ ಎಂಟ್ರಿ ಕೊಡುವ ವಿಡಿಯೋಗೆ ರಶ್ಮಿಕಾ ಮಂದಣ್ಣ ಮುಖ ಮಾರ್ಪ್‌ ಮಾಡಿ ವೈರಲ್ ಮಾಡಿದ್ದರು.

Alia Bhatt Deepfake Viral Video

ಜರಾ ತುಂಡುಡುಗೆಯಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಈ ಬಗ್ಗೆ ರಶ್ಮಿಕಾ ಸಹ ಬೇಸರ ವ್ಯಕ್ತಪಡಿಸಿದ್ದರು. ಡೀಪ್‌ಪೇಕ್ ತಂತ್ರಜ್ಞಾನ ಬಳಸಿ ಮಾಡಿದ್ದ ಈ ವಿಡಿಯೋ ಬಗ್ಗೆ ಅಮಿತಾಬ್ ಬಚ್ಚನ್ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದರು.

ಭಾರತದ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಒಂದಿಷ್ಟು ಸಲಹೆಗಳನ್ನು ನೀಡಿದ್ದು, ಡೀಪ್‌ಫೇಕ್‌ಗಳ ಮೇಲಿನ ಕಾನೂನು ನಿಬಂಧನೆಗಳು, ಅವುಗಳ ರಚನೆ ಮತ್ತು ಪ್ರಸಾರದ ಮೇಲಿನ ದಂಡಗಳನ್ನು ಸಚಿವಾಲಯ ಒತ್ತಿಹೇಳಿತ್ತು. ನಾಗಚೈತನ್ಯಾ ಸೇರಿದಂತೆ ಸಾಕಷ್ಟು ಜನ ಸೆಲೆಬ್ರೆಟಿಗಳು ಈ ತಂತ್ರಜ್ಞಾನ ಮುಂದೆ ಏನೆಲ್ಲಾ ಸಮಸ್ಯೆ ತಂದೊಡ್ಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.

ರಕ್ಷಿತ್ ಶೆಟ್ಟಿ ಮಾತನಾಡಿ ಇಂತಹ ಸಾಫ್ಟ್‌ವೇಕ್, ಆಪ್‌ಗಳನ್ನು ಬಳಸುವ ವಿಚಾರದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ನಮ್ಮ ಅಕ್ಕ ಪಕ್ಕ ಇರುವವರ ಫೇಕ್ ವಿಡಿಯೋಗಳು ಇದೇ ರೀತಿ ಹರಿದಾಡುತ್ತದೆ ಎಂದಿದ್ದರು. ಕೆಲವರು ಆತಂಕ ವ್ಯಕ್ತಪಡಿಸಿದಂತೆಯೇ ರಶ್ಮಿಕಾ ಬಳಿಕ ಕತ್ರೀಕಾ ಕೈಫ್, ಕಾಜೋಲ್ ಈಗ ಆಲಿಯಾ ಭಟ್ ಡೀಪ್ ಫೇಕ್ ವಿಡಿಯೋ ಸಂಚಲನ ಸೃಷ್ಟಿಸಿದೆ.

ಕೆಲ ದಿನಗಳ ಕಾಲ ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದ ಆಲಿಯಾ ಭಟ್ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. 'ಜಿಗ್ರಾ' ಎನ್ನುವ ಸಿನಿಮಾ ನಿರ್ಮಿಸಿ ನಟಿಸುತ್ತಿದ್ದಾರೆ. ಈ ವರ್ಷ ಆಲಿಯಾ ನಟನೆಯ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಹಾಗೂ ಹಾಲಿವುಡ್‌ನ 'ಹಾರ್ಟ್ ಆಫ್ ಸ್ಟೋನ್ಸ್' ಸಿನಿಮಾಗಳು ರಿಲೀಸ್ ಆಗಿತ್ತು.

More from Filmibeat

English summary
Alia Bhatt Deepfake Video Goes Viral on social media;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X