''ನಾನು 50 ವರ್ಷ ದುಡಿದಿದ್ದನ್ನು ಮಗಳು ಆಲಿಯಾ ಎರಡು ವರ್ಷದಲ್ಲಿ ಸಂಪಾದಿಸಿದಳು''

ಬಾಲಿವುಡ್ ನಿರ್ದೇಶಕ, ಆಲಿಯಾ ಭಟ್ ತಂದೆ ಮಹೇಶ್ ಭಟ್, ಬಾಲಿವುಡ್ ಬದಲಾದ ರೀತಿ ಬಗ್ಗೆ ಮಾತನಾಡುತ್ತಾ, ನಾನು 50 ವರ್ಷಗಳಲ್ಲಿ ಕಷ್ಟಪಟ್ಟು ದುಡಿದಷ್ಟು ಹಣವನ್ನು ಆಲಿಯಾ ಭಟ್ ಕೇವಲ ಎರಡು ವರ್ಷದಲ್ಲಿ ಸಂಪಾದಿಸಿದ್ದಾಳೆ'' ಎಂದಿದ್ದಾರೆ.

ಮ್ಯಾಗಜೀನ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಹೇಶ್ ಭಟ್, ''ಆಲಿಯಾ ಭಟ್ ಸಾಧನೆ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ. ಆಲಿಯಾ ಭಟ್ ಆಕೆಯ ಪೋಷಕರ (ತಮ್ಮ) ಪ್ರತಿಫಲನ ಅಥವಾ ನೆರಳಲ್ಲ ಬದಲಿಗೆ ಆಕೆ ತನ್ನದೇ ಆದ ಪ್ರತ್ಯೇಕ ಜ್ವಾಲೆಯನ್ನು ತನ್ನಲ್ಲಿ ಹೊಂದಿದ್ದಾಳೆ'' ಎಂದಿದ್ದಾರೆ.

''ನಮ್ಮ ಕುಟುಂಬ ಸಿನಿಮಾರಂಗದ ಹಿನ್ನೆಲೆ ಇರುವ ಕುಟುಂಬವಾದರೂ ನಾವು ಕುಟುಂಬವಾಗಿ ಸಿನಿಮಾರಂಗದಿಂದ ದೂರವೇ ಉಳಿದಿದ್ದೀವಿ. ನಮ್ಮ ಮನೆಯಲ್ಲಿ ಎಂದೂ ಸಿನಿಮಾ ಪಾರ್ಟಿಗಳು ನಡೆದಿಲ್ಲ. ನಾನು ಜೀವನ ನಡೆಸಲು ಸಿನಿಮಾ ಮಾಡುತ್ತೇನೆ ಹೊರತು ವೃತ್ತಿಯನ್ನು ಎಂದೂ ಮನೆಗೆ ತಂದಿಲ್ಲ. ಆಲಿಯಾ ಭಟ್ ಸಹ ಅದನ್ನೇ ಪಾಲಿಸುತ್ತಿದ್ದಾಳೆ. ಕೆಲಸದ ಬಗ್ಗೆ ಅಗಾಧವಾದ ಶ್ರದ್ಧೆಯನ್ನು ಆಲಿಯಾ ಹೊಂದಿದ್ದಾಳೆ ಜೊತೆಗೆ ಸಹಾನುಭೂತಿಯೂ ಅವಳ ವ್ಯಕ್ತಿತ್ವದಲ್ಲಿದೆ'' ಎಂದಿದ್ದಾರೆ ಮಹೇಶ್ ಭಟ್.

Alia Bhatt Earned More Money In Two Years What I Earned In Fifty Years

''ಸಿನಿಮಾ ರಂಗದಲ್ಲಿ ಬಹಳ ಕಡಿಮೆ ವಯಸ್ಸಿನಲ್ಲಿಯೇ ತಲೆ ತಿರುಗುವಂತಹಾ ಪ್ರಸಿದ್ಧಿಯ ಎತ್ತರಕ್ಕೆ ಏರಿಬಿಡುತ್ತಾರೆ. ಕೆಲ ವರ್ಷಗಳ ಹಿಂದಷ್ಟೆ ಆಲಿಯಾ ಭಟ್ ಸಣ್ಣ ಹುಡುಗಿಯಾಗಿದ್ದಳು, 500 ರುಪಾಯಿ ಆಸೆಗೆ ನನ್ನ ಕಾಲಿಗೆ ಮುಲಾಮು ಹಚ್ಚಿ ಕಾಲು ಒತ್ತುತ್ತಿದ್ದಳು. ಅದಾಗಿ ಎರಡೇ ವರ್ಷದಲ್ಲಿ ಸ್ಟಾರ್ ಹೀರೋಯಿನ್ ಆಗಿಬಿಟ್ಟಳು. ನಾನು 50 ವರ್ಷದಲ್ಲಿ ದುಡಿದ ಹಣಕ್ಕಿಂತಲೂ ಹೆಚ್ಚು ಹಣವನ್ನು ಕೇವಲ ಎರಡು ವರ್ಷದಲ್ಲಿ ಸಂಪಾದನೆ ಮಾಡಿದಳು'' ಎಂದಿದ್ದಾರೆ.

''ನನಗೆ ಸಿನಿಮಾ ಮಂದಿಯ ಮೇಲೆ ಬೇರೆ ಕಲಾವಿದರ ಮೇಲೆ ಬಹಳ ಗೌರವ. ಎಲ್ಲ ಜನರು ಬರೀ ನೋಡುಗರು ಆದರೆ ಪ್ರದರ್ಶನ ನೀಡಲು ನಿಜವಾದ ಧೈರ್ಯ ಬೇಕಾಗುತ್ತದೆ. ನನಗೆ ಸಿನಿಮಾ ನಿರ್ದೇಶಕರು, ನಿರ್ಮಾಪಕರ ಬಗ್ಗೆ ಅತೀವವಾದ ಗೌರವ, ಏನೇ ಕಷ್ಟಗಳು ಎದುರಾದರೂ ಕತೆ ಹೇಳಬೇಕೆಂಬ ಅವರ ಹಪಹಪಿಕೆ ಅದ್ಭುತವಾದುದು. ಸಿನಿಮಾ ಸೋತು ಸೊನ್ನೆಗೆ ಮುಟ್ಟಿದ್ದರೂ ಮತ್ತೆ ಎದ್ದು ತಾವು ನಂಬಿದ ಕತೆ ಹೇಳಲು ಹೊರಡುತ್ತಾರಲ್ಲ ಅದು ಸಾಮಾನ್ಯವಲ್ಲ'' ಎಂದಿದ್ದಾರೆ ಮಹೇಶ್ ಭಟ್.

ಮಹೇಶ್ ಭಟ್ ಮೊದಲ ಮಗಳು ಪೂಜಾ ಭಟ್ ಸಹ ನಟಿಯಾಗಿ ಹೆಸರು ಮಾಡಿದವರು. ಈಗ ಆಲಿಯಾ ಭಟ್ ಸಹ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆಲಿಯಾ ಭಟ್‌ರ ಸಾಲು-ಸಾಲು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.

ಆಲಿಯಾ ಭಟ್ ಮೊದಲ ಬಾರಿಗೆ ನಟಿಸಿರುವ ತೆಲುಗು ಸಿನಿಮಾ 'RRR', ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಸಿನಿಮಾ 'ಗಂಗೂಭಾಯಿ ಕಾತ್ಯಾವಾಡಿ', ಅಮಿತಾಬ್ ಬಚ್ಚನ್, ರಣ್ಬೀರ್ ಕಪೂರ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಮೂರೂ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಇವುಗಳ ಹೊರತಾಗಿ ಫರ್ಹಾನ್ ಅಖ್ತರ್ ನಿರ್ದೇಶನದ 'ಆ ಜೀಲೆ ಝರಾ', ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಇನ್‌ಶಾಅಲ್ಲಾಹ್', ಮೋಹಿತ್ ಸೂರಿಯ 'ಆಶಿಕಿ 3', ಕರಣ್ ಜೋಹರ್ ನಿರ್ದೇಶನದ 'ತಕ್ತ್', 'ರಾಖಿ ಔಟ್ ರಾಣಿ ಕಿ ಪ್ರೇಮ್ ಕಹಾನಿ', 'ಡಾರ್ಲಿಂಗ್ಸ್' ಸಿನಿಮಾಗಳಲ್ಲಿ ಆಲಿಯಾ ನಟಿಸಲಿದ್ದಾರೆ.

More from Filmibeat

English summary
Bollywood director and Father of Alia Bhatt, Mahesh Bhatt said Alia Bhatt earned more money than me in just two years what I earned in last 50 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X