»   » ವೋಗ್ ನಲ್ಲಿ ಗರಿಗೆದರಿದ ಆಲಿಯಾ ಶೃಂಗಾರ ವಿಲಾಸ

ವೋಗ್ ನಲ್ಲಿ ಗರಿಗೆದರಿದ ಆಲಿಯಾ ಶೃಂಗಾರ ವಿಲಾಸ

By: ರವಿಕಿಶೋರ್
Subscribe to Filmibeat Kannada

ಚುಂಬನ ದೃಶ್ಯಗಳು, ರೊಮ್ಯಾಂಟಿಕ್ ಸನ್ನಿವೇಶಗಳಿಂದ ಬೆಳ್ಳಿತೆರೆಯನ್ನು ಬೆಚ್ಚಗೆ ಮಾಡುತ್ತಿರುವ ಬಾಲಿವುಡ್ ತಾರೆ ಆಲಿಯಾ ಭಟ್. ಮೊದಲಿನಿಂದಲೂ ತಮ್ಮ ಗ್ಲಾಮರ್ ಮೂಲಕ ಸುದ್ದಿ, ಸದ್ದು ಎರಡನ್ನೂ ಮಾಡುತ್ತಿರುವ ಬಾಲಿವುಡ್ ನ ಚಂದನದ ಗೊಂಬೆ ಈಕೆ.

ಅನತಿ ಕಾಲದಲ್ಲೇ ತಮ್ಮ ಗ್ಲಾಮರ್ ಪಾತ್ರಗಳಿಂದ ಗುರುತಿಸಿಕೊಂಡ ಬೆಡಗಿ. ಇದೀಗ ವೋಗ್ ನಿಯತಕಾಲಿಕೆಯಲ್ಲಿ ತಮ್ಮ ಅಂದಚೆಂದ ವೈಯಾರಗಳನ್ನು ತೆರೆದಿಟ್ಟಿದ್ದಾರೆ. ತೆರೆಯ ಮೇಲೆ ಸಾಕಷ್ಟು ಹಾಟ್ ಆಗಿ ಕಾಣುವ ಆಲಿಯಾ, ನಿಯತಕಾಲಿಕೆಯಲ್ಲಿ ತಮ್ಮ ಇನ್ನೊಂದು ವರಸೆಯನ್ನು ತೋರಿಸಿದ್ದಾರೆ. [ವಿಮರ್ಶೆ: ಆಲಿಯಾ ಬಿಟ್ರೆ 2 ಸ್ಟೇಟ್ಸ್ ನಲ್ಲಿ ಮತ್ತೇನಿಲ್ಲ]

ಬಹುತೇಕ ಬಾಲಿವುಡ್ ತಾರೆಗಳು ಈ ರೀತಿ ನಿಯತಕಾಲಿಕೆಗಳಲ್ಲಿ ಆಗಾಗ ತಮ್ಮ ಸೌಂದರ್ಯವನ್ನು ತೆರೆದಿಟ್ಟಿದ್ದಾರೆ. ಇದೀಗ ಆಲಿಯಾ ಭಟ್ ಸಹ ಅದೇ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಇದರಿಂದ ಇನ್ನಷ್ಟು ಪ್ರಚಾರ ಗಿಟ್ಟಿಸುವುದರ ಜೊತೆಗೆ ಬೇಗ ಜನಪ್ರಿಯರಾಗುವ ತವಕ ಅವರದು.

ಗರಿಗರಿ ಪುಟಗಳಲ್ಲಿ ಆಲಿಯಾ ಭಟ್

ವೋಗ್ ತಾಜಾ ಸಂಚಿಕೆಯಲ್ಲಿ ಆಲಿಯಾ ತಮ್ಮ ಶೃಂಗಾರ ಭರಿತ ಚಿತ್ರಗಳಲ್ಲಿ ದರ್ಶನ ನೀಡಿದ್ದಾರೆ. ಜುಲೈ 2014ರ ಸಂಚಿಕೆಯ ಗರಿಗರಿ ಪುಟಗಳು ಆಲಿಯಾ ಅವರಿಂದ ತುಂಬಿದ್ದು ನಿಯತಕಾಲಿಕೆಗೆ ಇನ್ನಷ್ಟು ರಂಗು ತುಂಬಿವೆ.

ಅಭಿಮಾನಿಗಳನ್ನು ಚಕಿತಗೊಳಿಸಿದ ತಾರೆ

ಅವರ ತಾಜಾ ಚಿತ್ರ 'ಹಮ್ಟಿ ಶರ್ಮಾ ಕಿ ದುಲ್ಹನಿಯಾ' ತೆರೆಕಂಡಿದ್ದು ಆಲಿಯಾ ಅಭಿಮಾನಿಗಳನ್ನು ಸೆಳೆಯುತ್ತಿದೆ. ಹಲವಾರು ಪ್ರಾಜೆಕ್ಟ್ ಗಳಲ್ಲಿ ಬಿಜಿಯಾಗಿರುವ ಆಲಿಯಾ ವೋಗ್ ಸಂಚಿಕೆಯಲ್ಲಿ ತಮ್ಮ ಮೈಮಾಟ ಮೆರೆದಿರುವುದು ಅಭಿಮಾನಿಗಳನ್ನು ಚಕಿತಗೊಳಿಸಿದೆ.

ಕ್ಯೂಟ್ ಗರ್ಲ್ ಅಲ್ಲ ಹಾಟ್ ಗರ್ಲ್

ಎಲ್ಲರೂ ಆಲಿಯಾ ಭಟ್ ಅವರನ್ನು ಕ್ಯೂಟ್ ಗರ್ಲ್ ಕ್ಯೂಟ್ ಗರ್ಲ್ ಎಂದು ಕರೆಯುತ್ತಾರೆ. ಆದರೆ ಆಲಿಯಾಗೆ ಆ ರೀತಿ ಕರೆಸಿಕೊಳ್ಳುವುದು ಇಷ್ಟವಿಲ್ಲವಂತೆ. ತಾನು ಕ್ಯೂಟ್ ಗರ್ಲ್ ಅಲ್ಲ ಹಾಟ್ ಗರ್ಲ್ ಎಂದು ಫೋಟೋಗಳ ಮೂಲಕ ನಿರೂಪಿಸಿಕೊಳ್ಳಲು ಹೊರಟಿದ್ದಾರೆ.

ಗರಿಗೆದರಿದ ಆಲಿಯಾ ಹುರುಪು

ವೋಗ್ ಸಂಚಿಕೆಯಲ್ಲಿ ಬ್ಲ್ಯಾಕ್ ಅಂಡ್ ವೈಟ್ ಲುಕ್ ನಲ್ಲಿ ಆಲಿಯಾ ಭಟ್. ಅವರ 'ಸ್ಟುಡೆಂಟ್ ಆಫ್ ದ ಇಯರ್, ಹೈವೇ ಹಾಗೂ 2 ಸ್ಟೇಟ್ಸ್' ಚಿತ್ರಗಳು ಬಾಕ್ಸ್ ಆಫೀಸಲ್ಲಿ ಗೆದ್ದಿದ್ದು ಅವರ ಹುರುಪನ್ನು ಇಮ್ಮಡಿಸಿದೆ.

ಇದೇನಿದು ಹೊಸ ವರಸೆ?

ಕ್ಯೂಟ್ ಆಗಿರುವ ಆಲಿಯಾ ಭಟ್ ಅವರದು ಇದೇನಿದು ವರಸೆ ಎಂದು ಅಚ್ಚರಿಯಾಗುತ್ತಿದೆಯೇ? ವೋಗ್ ಸಂಚಿಕೆಗಾಗಿ ಕೊಟ್ಟಂತಹ ವಿಭಿನ್ನ ಭಂಗಿಗಳಲ್ಲಿ ಇದೂ ಒಂದು.

ಅಭಿಮಾನಿಗಳ ನಿದ್ದೆಗೆಡಿಸಿದ ಭಂಗಿಗಳು

ವೋಗ್ ನಿಯತಕಾಲಿಕೆಯಲ್ಲಿನ ಹಾಟ್ ಭಂಗಿಗಳನ್ನು ನೋಡಿದ ಅಭಿಮಾನಿಗಳು ಸಖತ್ ಆಗಿವೆ ಎಂದಿದ್ದಾರೆ. ಅವರ ಫೋಟೋಗಳಿಗೆ ಲೈಕ್ ಗಳೂ ಬರುತ್ತಿವೆ.

ರೊಮ್ಯಾಂಟಿಕ್ ಬೆಡಗಿಯ ಹೊಸ ವರಸೆ

ತಮ್ಮ ಮೊದಲ ಚಿತ್ರ ಸ್ಟುಡೆಂಟ್ ಆಫ್ ದಿ ಇಯರ್ ನಲ್ಲಿ ಉತ್ತಮ ಅಭಿನಯ ನೀಡಿದ ಆಲಿಯಾ, ಬಳಿಕ ಹೈವೇ, 2 ಸ್ಟೇಟ್ಸ್ ಚಿತ್ರಗಳಲ್ಲಿ ಗ್ಲಾಮರ್ ವಿಶ್ವರೂಪ ಪ್ರದರ್ಶಿಸಿದರು. ಚುಂಬನ ದೃಶ್ಯಗಳು, ರೊಮ್ಯಾಂಟಿಕ್ ಸನ್ನಿವೇಶಗಳಿಂದ ಪಡ್ಡೆಗಳ ನಿದ್ದೆಕೆಡಿಸಿದರು.

ಹೊಸ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

'ಹಮ್ಟಿ ಶರ್ಮಾ ಕಿ ದುಲ್ಹನಿಯಾ' ಚಿತ್ರದ ತೆರೆಕಂಡಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆ ಚಿತ್ರ ಪ್ರೇಕ್ಷಕರ ಮನ ಗೆಲ್ಲುತ್ತಾ ಇಲ್ಲಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

English summary
Alia Bhatt is said to be the next big thing in Bollywood, her star value is increasing slowly and steadily. With all her movies being blockbuster hits and raking in major moolah at the Box Office, she is touted to be the next big star in Bollywood. And with increase in the star status, yet another high class magazine has featured her on their cover for the July, 2014 issue. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada