»   » ಚಿತ್ರೀಕರಣದ ವೇಳೆ ಗಾಯಗೊಂಡ ನಟಿ ಅಲಿಯಾ ಭಟ್

ಚಿತ್ರೀಕರಣದ ವೇಳೆ ಗಾಯಗೊಂಡ ನಟಿ ಅಲಿಯಾ ಭಟ್

Posted By:
Subscribe to Filmibeat Kannada

ಬಾಲಿವುಡ್ ನಟಿ ಅಲಿಯಾ ಭಟ್ ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಅಲಿಯಾ ಅಭಿನಯದ 'ಬ್ರಹ್ಮಾಸ್ತ್ರ' ಸಿನಿಮಾದ ಶೂಟಿಂಗ್ ನಿನ್ನೆ ಬಲ್ಗೇರಯಾದಲ್ಲಿ ನಡೆಯುತ್ತಿದ್ದು, ಈ ವೇಳೆ ಈ ಘಟನೆ ನಡೆದಿದೆ.

ಚಿತ್ರೀಕರಣ ವೇಳೆ ನಡೆದ ಈ ಅವಘಡದಿಂದ ಅಲಿಯಾ ಭಟ್ ಬಲಭಾಗದ ಭುಜಕ್ಕೆ ಮತ್ತು ತೋಳಿಗೆ ಪೆಟ್ಟಾಗಿದೆ. ಈ ಘಟನೆಯಿಂದ ಸಿನಿಮಾದ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಇನ್ನು ಚಿಕಿತ್ಸೆ ಪಡೆದ ಅಲಿಯಾ ಭಟ್ ರಿಗೆ ವೈದ್ಯರು 15 ದಿನ ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ. ಚಿತ್ರದ ಒಂದು ಸನ್ನಿವೇಶ ಚಿತ್ರೀಕರಿಸುವಾಗ ಅಲಿಯಾ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

Alia Bhatt injured in Brahmastra movie shooting

'ಬ್ರಹ್ಮಾಸ್ತ್ರ' ಸಿನಿಮಾದ ಶೂಟಿಂಗ್ ಮಾರ್ಚ್ ತಿಂಗಳ ಕೊನೆಗೆ ಮುಗಿಸಿ ಭಾರತಕ್ಕೆ ಮರಳುವ ಪ್ಲಾನ್ ನಲ್ಲಿ ಚಿತ್ರತಂಡ ಇತ್ತು. ಆದರೆ ಅಲಿಯಾ ಭಟ್ ರಿಂದ ಈಗ ಚಿತ್ರದ ಶೂಟಿಂಗ್ ತಡ ಆಗಲಿದೆ. ಅಂದಹಾಗೆ, 'ಬ್ರಹ್ಮಾಸ್ತ್ರ' ಚಿತ್ರವನ್ನು ಆಯನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಅಲಿಯಾ ಜೊತೆಗೆ ರಣಬೀರ್ ಕಪೂರ್ ಅಮಿತಾಭ್ ಬಚ್ಚನ್ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ರಣಬೀರ್ ಚಿತ್ರದಲ್ಲಿ ಅಲಿಯಾ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷದ (ಆಗಸ್ಟ್ 15, 2019) ಸ್ವಾತಂತ್ಯ ದಿನದಂದು ಈ ಸಿನಿಮಾ ಬಿಡುಗಡೆಯಾಗಲಿದೆ.

ಪ್ರಭಾಸ್ ಬಗ್ಗೆ ಆಲಿಯಾ ಭಟ್ ಗೆ ಶುರುವಾಗಿದೆ ಕನಸು!

English summary
Bollywood actress Alia Bhatt injured in Brahmastra movie shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X