Ranbir Kapoor-Alia Bhatt wedding: ಭರ್ಜರಿಯಾಗಿ ಸಾಗಿದೆ ಆಲಿಯಾ, ರಣ್ಬೀರ್ ಮದುವೆ ತಯಾರಿ!

ಬಾಲಿವುಡ್‌ನ ತಾರಾ ಜೋಡಿ ರಣ್ಬೀರ್ ಕಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿ ಮದುವೆ ಬಗ್ಗೆ ಒಂದಲ್ಲಾ ಒಂದು ಸುದ್ದಿ ಹರಿದಾಡುತ್ತಾ ಇದೆ. ವರ್ಷಗಳಿಂದ ಇವರ ಮದುವೆ ಸುದ್ದಿ ಸದ್ದು ಮಾಡುತ್ತಲೇ ಇದೆ. ಕಳೆದ ವರ್ಷವೇ ಮದುವೆ ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಮದುವೆ ಈ ವರ್ಷಕ್ಕೆ ಮುಂದೂಡಲ್ಪಟ್ಟಿತ್ತು. ಮೂಲಗಳ ಪ್ರಕಾರ ಆಲಿಯಾ ಮತ್ತು ರಣ್‌ಬೀರ್ ಮದುವೆ ಏಪ್ರಿಲ್ 17ರಂದು ನಿಗದಿ ಆಗಿದೆ.

ಆಲಿಯಾ, ರಣ್ಬೀರ್ ಮದುವೆ ಅದ್ಧೂರಿಯಾಗಿ ಇರುವುದಿಲ್ಲ, ಬದಲಿಗೆ ಸರಳವಾಗಿ ನಡೆಯಲಿದೆ ಎಂದು ಬಾಲಿವುಡ್‌ ಮೂಲಗಳು ಹೇಳುತ್ತಿವೆ. ಮದುವೆಯಲ್ಲಿ ಕೇವಲ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿ ಆಗಲಿದ್ದಾರಂತೆ. ಇವರ ಮದುವೆ ಬಗ್ಗೆ ಕುಟುಂಬಸ್ಥರು ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ರಹಸ್ಯವಾಗಿ ಮದುವೆ ತಯಾರಿ ನಡೆಯುತ್ತಿದೆ.

ರಣ್ಬೀರ್ ಮತ್ತು ಆಲಿಯಾ ಮನೆಯ ಮೇಲೆ, ಅಲ್ಲಿನ ಕ್ಯಾಮೆರಾಗಳು ಕಣ್ಣಿಟ್ಟಿವೆ. ಸದ್ಯ ಮನೆಯಲ್ಲಿ ನಡೆಯುತ್ತಿರುವ ಮದುವೆ ಕಾರ್ಯದ ತಯಾರಿ ವಿಡಿಯೋಗಳು ವೈರಲ್ ಆಗಿವೆ. ಮುಂಬೈನಲ್ಲಿ ಇರುವ ರಣ್ಬೀರ್ ಮನೆಯ ಸುತ್ತಲೂ ಅಲಂಕಾರ ಶುರುವಾಗಿದೆ. ಜೊತೆಗೆ ಯಾರಿಗೂ ಕಾಣಿಸದೆ ಇರಲಿ ಎನ್ನುವ ಕಾರಣಕ್ಕೆ ಮನೆಯ ಸುತ್ತಲು ಬಟ್ಟೆಯನ್ನು ಕಟ್ಟಲಾಗುತ್ತಿದೆ.

Alia Bhatt Married Ranbir Wedding Preparation Get Started

ಇನ್ನು ಮದುವೆ ಮನೆ ಅಂದರೆ ಊಟ ಭರ್ಜರಿಯಾಗಿ ಇರುತ್ತದೆ. ಹಾಗಾಗಿ ಮನೆಯ ಒಳಗೆ ಕೇಟ್ರಿಂಗ್‌ನವರು ಅಡುಗೆ ಪಾತ್ರಗಳನ್ನು ತೆಗೆದುಕೊಂಡು ಹೋಗುವ ವಿಡಿಯೋ ಕೂಡ ವೈರಲ್ ಆಗಿದೆ. ಅಷ್ಟೇ ಅಲ್ಲಾ ಖ್ಯಾತ ವಸ್ತ್ರ ವಿನ್ಯಾಸಕ ಸಭ್ಯಸಾಚಿ ಕಡೆಯಿಂದ ಬಂದ ಬಟ್ಟೆಗಳನ್ನು ಮನೆಯೊಳಗೆ ತೆಗೆದುಕೊಂಡು ಹೋಗುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ಇದೆ.

Alia Bhatt Married Ranbir Wedding Preparation Get Started

ಕಪೂರ್ ಕುಟುಂಬದ ಒಡೆತನದ ಐತಿಹಾಸಿಕ ಸ್ಟುಡಿಯೋ ಆರ್‌ಕೆ ಸ್ಟುಡಿಯೋನಲ್ಲಿ ರಣ್ಬೀರ್ ಹಾಗೂ ಆಲಿಯಾ ಭಟ್ ವಿವಾಹ ಜರುಗಲಿದೆ. ಈ ವಿಚಾರವನ್ನು ರಣ್ಬೀರ್ ಕುಟುಂಬದ ಆಪ್ತರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಮದುವೆ, ರಣ್ಬೀರ್ ಕಪೂರ್ ತಾತ ರಾಜ್ ಕಪೂರ್ ಕಟ್ಟಿದ ಸ್ಟುಡಿಯೋದಲ್ಲಿ ನಡೆಯಲಿದೆಯಂತೆ. ರಣ್ಬೀರ್ ತಂದೆ ರಿಶಿ ಕಪೂರ್ ಹಾಗೂ ನೀತಾ ಕೂಡ ಆರ್‌ಕೆ ಹೌಸ್‌ನಲ್ಲಿಯೇ ಮದುವೆ ಆಗಿದ್ದರು. ಈಗ ರಣ್ಬೀರ್ ಮತ್ತು ಆಲಿಯಾ ವಿವಾಹ ಕೂಡ ಆರ್‌ಕೆ ಗೆಸ್ಟ್‌ಹೌಸ್‌ನಲ್ಲೆ ಜರುಗುತ್ತಿದೆ. ಈ ತಾರಾ ಜೋಡಿಯ ವಿವಾಹಕ್ಕೆ ಕುಟುಂಬದವರು ಮತ್ತು ತಾರಾ ಜೋಡಿಯ ಅತ್ಯಾಪ್ತ ಗೆಳೆಯರಿಗಷ್ಟೆ ಆಹ್ವಾನ ನೀಡಿದೆ ಎನ್ನಲಾಗುತ್ತಿದೆ.

More from Filmibeat

English summary
Alia Bhatt Married Ranbir Wedding Preparation Get Started, Video Went Viral,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X