twitter
    For Quick Alerts
    ALLOW NOTIFICATIONS  
    For Daily Alerts

    ಸ್ವಜನಪಕ್ಷಪಾತದ ಆರೋಪ: ಟೀಕಾಕಾರರಿಗೆ ಆಲಿಯಾ ಭಟ್ ತಾಯಿ ತಿರುಗೇಟು

    By Avani Malnad
    |

    ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಬಾಲಿವುಡ್‌ನ ಸ್ವಜನಪಕ್ಷಪಾತವೇ ಕಾರಣ. ಪ್ರತಿಭಾವಂತ ನಟರಿಗೆ ಸಿಗಬೇಕಾದ ಅವಕಾಶಗಳನ್ನು ತಪ್ಪಿಸಿ ಸ್ಟಾರ್‌ಗಳ ಮಕ್ಕಳಿಗೇ ನೀಡಲಾಗುತ್ತಿದೆ. ಒಳ್ಳೆಯ ಸಿನಿಮಾಗಳು ಯಾವಾಗಲೂ ಅವರ ಪಾಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಸೋನಂ ಕಪೂರ್ ಸೇರಿದಂತೆ ಅನೇಕ ತಾರಾ ಕುಟುಂಬದ ಕಲಾವಿದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

    Recommended Video

    ಕಿಡ್ನಿ ವೈಫಲ್ಯಕ್ಕೆ ಒಳಗಾದ ಅಭಿಮಾನಿಯ ನೆರವಿಗೆ ನಿಂತ ಕಿಚ್ಚ ಸುದೀಪ್|Sudeep Helped fan for Medical Treatment

    ಅದರಲ್ಲಿಯೂ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಸುಶಾಂತ್ ಎಂದರೆ ಯಾರು? ಎಂದು ಕೇಳಿದ್ದಲ್ಲದೆ, ತಾವು ಕೊಲ್ಲಲು ಬಯಸಿರುವ ನಟ ಎಂದರೆ ಸುಶಾಂತ್ ಎಂದಿದ್ದ ಆಲಿಯಾರನ್ನು ಹಿಗ್ಗಾಮುಗ್ಗಾ ಟೀಕಿಸಲಾಗುತ್ತಿದೆ. ಸುಶಾಂತ್ ಸಾವಿನ ಹಿಂದೆ ಆಲಿಯಾ ತಂದೆ ಮಹೇಶ್ ಭಟ್ ಕೈವಾಡವಿದೆ ಎಂಬ ಆರೋಪವೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಈ ನಡುವೆ ತಮ್ಮ ಮಗಳ ವಿರುದ್ಧದ ಆನ್‌ಲೈನ್ ವಾಗ್ದಾಳಿಗೆ ಆಲಿಯಾ ತಾಯಿ ಸೋನಿ ರಾಜ್ದಾನ್ ಕಿಡಿಕಾರಿದ್ದಾರೆ. ಮುಂದೆ ಓದಿ...

    ಮಕ್ಕಳಿಗಾಗಿ ಅದನ್ನೇ ಮಾಡುತ್ತಾರೆ

    ಮಕ್ಕಳಿಗಾಗಿ ಅದನ್ನೇ ಮಾಡುತ್ತಾರೆ

    ನಿರ್ದೇಶಕ ಹನ್ಸಲ್ ಮೆಹ್ತಾ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸೋನಿ, ಮಗಳನ್ನು ಟೀಕಿಸುವವರ ವಿರುದ್ಧ ಹರಿಹಾಯ್ದಿದ್ದಾರೆ. 'ಇಂದು ನೆಪೋಟಿಸಂ ಬಗ್ಗೆ ಗದ್ದಲ ಎಬ್ಬಿಸುತ್ತಿರುವವರು ಒಂದು ದಿನ ತಮ್ಮ ಮಕ್ಕಳಿಗಾಗಿ ಅದನ್ನೇ ಮಾಡುತ್ತಾರೆ. ಅವರು ಚಿತ್ರೋದ್ಯಮ ಸೇರಲು ಬಯಸಿದ್ದರೆ ಏನು? ಅವರ ಆಸೆಯನ್ನು ತಡೆಯಲು ಮುಂದಾಗುತ್ತಾರೆಯೇ?' ಎಂದು ಸೋನಿ ಪ್ರಶ್ನಿಸಿದ್ದಾರೆ.

    ನೆಪೋಟಿಸಂ ವಿರುದ್ಧ ಹೋರಾಡಿ, ಆದರೆ ಸುಶಾಂತ್ ಹೆಸರು ಬಳಕೆ ಬೇಡ: ಇರ್ಫಾನ್ ಖಾನ್ ಮಗನ ಮನವಿನೆಪೋಟಿಸಂ ವಿರುದ್ಧ ಹೋರಾಡಿ, ಆದರೆ ಸುಶಾಂತ್ ಹೆಸರು ಬಳಕೆ ಬೇಡ: ಇರ್ಫಾನ್ ಖಾನ್ ಮಗನ ಮನವಿ

    ಅರ್ಹತೆಯೇ ಪ್ರಧಾನ

    ಅರ್ಹತೆಯೇ ಪ್ರಧಾನ

    'ಈ ನೆಪೋಟಿಸಂ ಚರ್ಚೆಯನ್ನು ಇನ್ನಷ್ಟು ವಿಸ್ತರಿಸಬೇಕು. ಇಲ್ಲಿ ಅರ್ಹತೆಯೇ ಹೆಚ್ಚು ಪ್ರಧಾನವಾಗುತ್ತದೆ. ನನ್ನಿಂದಾಗಿ ನನ್ನ ಮಗ ಇದರ ಬಾಗಿಲಿನ ಅಂಚಿಗೆ ಬಂದಿದ್ದಾನೆ. ಅದು ಯಾಕಾಗಬಾರದು? ನನ್ನ ಅತ್ಯುತ್ತಮ ಕೆಲಸಗಳಲ್ಲಿ ಆತ ಭಾಗವಾಗಿದ್ದಾನೆ. ಏಕೆಂದರೆ ಆತನಿಗೆ ಪ್ರತಿಭೆ, ಶಿಸ್ತು, ಪರಿಶ್ರಮವಿದೆ. ನನ್ನಂತೆಯೇ ಮೌಲ್ಯಗಳನ್ನು ಪ್ರತಿಪಾದಿಸುತ್ತಾನೆ. ನನ್ನ ಮಗ ಎಂಬ ಕಾರಣಕ್ಕಾಗಿ ಅಲ್ಲ ಎಂದು ಹನ್ಸಲ್ ಮೆಹ್ತಾ ಹೇಳಿದ್ದಾರೆ.

    ಬದುಕು ಕಟ್ಟಿಕೊಳ್ಳುವುದು ಅವನೇ, ನಾನಲ್ಲ

    ಬದುಕು ಕಟ್ಟಿಕೊಳ್ಳುವುದು ಅವನೇ, ನಾನಲ್ಲ

    'ಆತ ಸಿನಿಮಾಗಳನ್ನು ಮಾಡುತ್ತಾನೆ. ನಾನು ಅವುಗಳನ್ನು ನಿರ್ಮಿಸುತ್ತೇನೆ ಎಂಬ ಕಾರಣಕ್ಕೆ ಅಲ್ಲ. ನಾನು ಮಾಡದೆಯೂ ಇರಬಹುದು. ಆದರೆ ಸಿನಿಮಾ ಮಾಡಲು ಅವನಿಗೆ ಅರ್ಹತೆ ಇದೆ. ಆತ ಅದರಲ್ಲಿ ಉಳಿದುಕೊಂಡರೆ ಮಾತ್ರವೇ ವೃತ್ತಿ ಕಟ್ಟಿಕೊಳ್ಳುತ್ತಾನೆ. ಅಂತಿಮವಾಗಿ ಅವನ ವೃತ್ತಿಯನ್ನು ಕಟ್ಟಿಕೊಡುವುದು ಸ್ವತಃ ಆತನೇ ಹೊರತು ಆತನ ಅಪ್ಪನಲ್ಲ. ನನ್ನ ನೆರಳು ಆತನ ದೊಡ್ಡ ಲಾಭವೂ ಹೌದು, ಕಷ್ಟವೂ ಹೌದು' ಎಂದಿದ್ದಾರೆ.

    ಹೌದು, ಅಪ್ಪನಿಂದಾಗಿಯೇ ನಾನಿಲ್ಲಿದ್ದೇನೆ ಏನಿವಾಗ?: ನೆಪೋಟಿಸಂ ಟೀಕೆಗೆ ಸೋನಂ ಕಪೂರ್ ಗರಂಹೌದು, ಅಪ್ಪನಿಂದಾಗಿಯೇ ನಾನಿಲ್ಲಿದ್ದೇನೆ ಏನಿವಾಗ?: ನೆಪೋಟಿಸಂ ಟೀಕೆಗೆ ಸೋನಂ ಕಪೂರ್ ಗರಂ

    ಹಿಪೊಕ್ರಸಿ ಅಂತ್ಯಗೊಳ್ಳಲಿ

    ಹಿಪೊಕ್ರಸಿ ಅಂತ್ಯಗೊಳ್ಳಲಿ

    ತಮ್ಮ ಟ್ವೀಟ್‌ಗೆ ಸೋನಿ ರಾಜ್ದಾನ್ ನೀಡಿದ್ದ ಪ್ರತಿಕ್ರಿಯೆಗೆ ಉತ್ತರಿಸಿರುವ ಹನ್ಸಲ್, 'ಕೆಲವು ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯನ್ನಾಗಿರಿಸಿಕೊಳ್ಳಲು ಚರ್ಚೆಯನ್ನು ಸಂಕುಚಿತಗೊಳಿಸಲಾಗಿದೆ. ಇದು ಸುಧಾರಣೆ ಅಥವಾ ಒಳ್ಳೆಯದಕ್ಕಾಗಿಯೇನೂ ನಡೆಯುತ್ತಿಲ್ಲ. ನೆಪೋಟಿಸಂ ಕೊನೆಯಾಗುವ ಮುನ್ನ ನಾವು ಹಿಪೊಕ್ರಸಿ ಹಾಗೂ ಪ್ರಚಾರಕ್ಕಾಗಿ ಮಾಡುವ ಪಟ್ಟಭದ್ರ ಹಿತಾಸಕ್ತಿಗಳನ್ನು ಕಡಿಮೆ ಮಾಡಬೇಕಿದೆ. ಬೆದರಿಕೆ ಮೊದಲು ಕೊನೆಯಾಗಬೇಕು. ಬೆದರಿಕೆ ಹಾಕುವವರನ್ನು ಹೊರಹಾಕಬೇಕೇ ಹೊರತು ಪ್ರತಿಭೆಗಳನ್ನಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

    'ಅವರ ಕೈಗಳಲ್ಲಿ ರಕ್ತ ಅಂಟಿಕೊಂಡಿದೆ, ನಾನು ಯಾವ ಮಟ್ಟದ ಹೋರಾಟಕ್ಕೂ ಸಿದ್ಧ': ಕಂಗನಾ'ಅವರ ಕೈಗಳಲ್ಲಿ ರಕ್ತ ಅಂಟಿಕೊಂಡಿದೆ, ನಾನು ಯಾವ ಮಟ್ಟದ ಹೋರಾಟಕ್ಕೂ ಸಿದ್ಧ': ಕಂಗನಾ

    English summary
    Alia Bhatt's mother Soni Razdan hits back at the criticisers in social media who are slamming her for nepotism.
    Thursday, June 25, 2020, 10:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X