Alia Bhatt-Ranbir Kapoor Marriage: ಆಲಿಯಾ-ರಣ್‌ಬೀರ್ ಗೌಪ್ಯವಾಗಿ ಮದುವೆ, ಮೂಲಗಳು ಹೇಳುತ್ತಿರೋದು ಏನು?

ಬಾಲಿವುಡ್ ನ ತಾರಾ ಜೋಡಿಗಳಾದ ಅಲಿಯಾ ಭಟ್ ಮತ್ತು ರಣ್‌ಬೀರ್ ಕಪೂರ್ ಬಗ್ಗೆ ಇದೀಗ ದಿನಕ್ಕೊಂದು ಸುದ್ದಿ ಹೊರಬರುತ್ತಿದೆ. ಈ ಜೋಡಿ ಮದುವೆ ಯಾವಾಗಾ? ಹೇಗೆ ಮದುವೆ ಆಗುತ್ತಾರೆ, ಶಾಪಿಂಗ್ ಎಲ್ಲಿ ಮಾಡುತ್ತಾರೆ? ಎಂಬೆಲ್ಲಾ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ.

ಈ ಜೋಡಿ ಆಗಲಿ ಅಥವಾ ಇವರ ಕುಟುಂಬದವರಾಗಲಿ ಮದುವೆ ಬಗ್ಗೆ ಯಾವುದೇ ಪ್ರತಿ ಕ್ರಿಯೆ ನೀಡಿಲ್ಲ. ಆದರೂ ಇವರಿಬ್ಬರ ಸುತ್ತ ಮದುವೆ ಗಾಸಿಪ್ ಹರಿದಾಡುತ್ತಲೇ ಇದೆ. ಇದರ ಬೆನ್ನಲ್ಲೇ ಇದೀಗ ಆಲಿಯಾ ರಣ್‌ಬೀರ್ ಮದುವೆ ಆಗೇ ಬಿಟ್ಟಿದ್ದಾರೆ ಎನ್ನುವ ಸುದ್ದಿ ಇದೀಗ ಹರಿದಾಡುತ್ತಿದೆ.

ಹೌದು, ಆಲಿಯಾ ಮತ್ತು ರಣ್‌ಬೀರ್ ಇಬ್ಬರು ಮದುವೆ ಆಗಿದ್ದಾರೆ ಅನ್ನೋದಕ್ಕೆ ಒಂದು ಫೋಟೊ ಕೂಡ ವೈರಲ್ ಆಗುತ್ತಿದೆ. ಆಲಿಯಾ ಮತ್ತು ರಣ್‌ಬೀರ್ ಮದುವೆ ಕಾಸ್ಟ್ಯೂಮ್‌ನಲ್ಲಿ ಇದ್ದು, ಹಾರ ಬದಲಾಯಿಸುವ ಫೋಟೊ ಇದಾಗಿದೆ.

ಈ ಪೋಟೋದ ಅಸಲಿಯತ್ತೇನು ?

ಈ ಪೋಟೋದ ಅಸಲಿಯತ್ತೇನು ?

ಹಲವು ಕಡೆ ಇವರಿಬ್ಬರ ಮದುವೆ ಫೋಟೊ ಎಂದೇ ಇದೀಗ ವರಧಿ ಕೂಡ ಆಗುತ್ತಿದೆ. ಆದರೇ ಈ ಪೋಟೋದ ಅಸಲಿಯತ್ತೇನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಮೂಲಗಳ ಪ್ರಕಾರ ಈ ತಾರಾ ಜೋಡಿಗೆ ಆಡಂಬರದ ಮದುವೆ ಇಷ್ಟವಿರಲಿಲ್ಲಾ, ಹೀಗಾಗಿ ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಇದು ಸಿನಿಮಾದ ಸ್ಟಿಲ್ , ಸ್ಟಾರ್‌ಗಳು ಹೀಗೆ ಗೊತ್ತಿಲ್ಲದೇ ಗೌಪ್ಯವಾಗಿ ಮದುವೆ ಆಗಲು ಸಾಧ್ಯವಿಲ್ಲ, ಮದುವೆ ಇನ್ನು ಆಗಿಲ್ಲಾ ಎಂದು ಹೇಳಲಾಗುತ್ತಿದೆ.

ಏಪ್ರೀಲ್‌ನಲ್ಲಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ

ಏಪ್ರೀಲ್‌ನಲ್ಲಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ

ಆದರೇ ಈ ಒಂದು ಮದುವೆ ಫೋಟೊ ಈಗಾಗಲೇ ಸಾಕಷ್ಟು ವೈರಲ್ ಆಗುತ್ತಿದ್ದು, ಇದರ ಸತ್ಯಾ ಸತ್ಯೆತೆ ಬಗ್ಗೆ ಆಲಿಯಾ ಅಥವಾ ರಣ್‌ಬೀರ್ ಅಷ್ಟೆ ಉತ್ತರಿಸಬೇಕಿದೆ. ಈ ಹಿಂದೆ ಕೂಡ ಹಲವು ಭಾರಿ ಇವರಿಬ್ಬರು ಏಪ್ರೀಲ್‌ನಲ್ಲಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಅಲ್ಲದೇ ಈ ಜೋಡಿ ಸುದ್ದಿ ಇಲ್ಲದೇ, ಗುಪ್ತವಾಗಿ ಮದುವೆ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಹಾಗೂ ಗುಪ್ತವಾಗಿ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಗಲಿದ್ದಾರೆ , ಇದಕ್ಕಾಗಿ ಈ ಜೋಡಿ ಈಗಾಗಲೇ ತಯಾರಿಯನ್ನು ಮಾಡಿಕೊಳ್ಳುತ್ತಿದೆ ಎನ್ನುವ ಸುದ್ದಿ ಎಲ್ಲೆಡೆ ಕೇಳಿ ಬಂದಿತ್ತು.

ವದಂತಿಗಳನ್ನು ತಳ್ಳಿ ಹಾಕಿದ್ದರು ಮಹೇಶ್ ಭಟ್

ವದಂತಿಗಳನ್ನು ತಳ್ಳಿ ಹಾಕಿದ್ದರು ಮಹೇಶ್ ಭಟ್

ಇನ್ನು ಇವರಿಬ್ಬರ ಏಪ್ರಿಲ್ ವೆಡ್ಡಿಂಗ್ ಬಗ್ಗೆ ಸ್ವತಃ ಆಲಿಯಾ ಭಟ್ ತಂದೆ ಮಹೇಶ್ ಭಟ್ ಪ್ರತಿಕ್ರೀಯಿಸಿ, ಈ ವದಂತಿಗಳನ್ನು ತಳ್ಳಿ ಹಾಕಿದ್ದರು ಆಲಿಯಾ ಮತ್ತು ರಣಬೀರ್ ಏಪ್ರಿಲ್‌ನಲ್ಲಿ ಮದುವೆಯಾಗುತ್ತಾರೆ ಎಂಬ ವದಂತಿಗಳು ನಿಜನಾ ಎಂದು ಆಲಿಯಾ ತಂದೆಯನ್ನು ಕೇಳಿದಾಗ, "ಮದುವೆ ವದಂತಿಗಳು ಬಹಳ ಸಮಯದಿಂದ ನಡೆಯುತ್ತಿದೆ. ನಾವು ಇನ್ನೂ ಮದುವೆಗೆ ಸಿದ್ಧವಾಗಿಲ್ಲ. ಹಾಗಿದ್ದಾಗ ಇಷ್ಟು ಬೇಗ ಮದುವೆ ಹೇಗೆ ನಡೆಯಲು ಸಾಧ್ಯ? ಎಂದು ಉತ್ತರಿಸಿದ್ದರು. ಒಂದು ವೇಳೆ ಈಗ ಹರಿದಾಡುತ್ತಿರುವ ವದಂತಿ ನಿಜವಾದರೇ ಮೊದಲು ಶಾಕ್ ಆಗೋದು ನನಗೆ. ಯಾಕೆಂದರೇ ಮದುವೆ ಬಗ್ಗೆ ಯಾವುದೇ ತಯಾರಿ ಇನ್ನು ನಡೆದಿಲ್ಲಾ. ಆಲಿಯಾ ಮತ್ತು ರಣ್‌ಬೀರ್ ಇಬ್ಬರು ಮದುವೆ ಆಗುತ್ತಾರೆ ಆದರೆ ಯಾವತ್ತು ಅನ್ನೋದು ಇನ್ನು ನಿರ್ಧಾರವಾಗಿಲ್ಲಾ" ಎಂದಿದ್ದರು.

ಒಂದು ಫೋಟೊ ಸಖತ್ ವೈರಲ್ ಆಗುತ್ತಿದೆ

ಒಂದು ಫೋಟೊ ಸಖತ್ ವೈರಲ್ ಆಗುತ್ತಿದೆ

ಯಾರು ಕೂಡ ಮದುವೆ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿಲ್ಲ. ಆದರೆ ಈಗ ಈ ಒಂದು ಫೋಟೊ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿ ಫ್ಯಾನ್ಸ್ ಕೂಡ ತಲೆಕೆಡಿಸಿಕೊಂಡಿದ್ದಾರೆ. ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ರಣ್‍ಬೀರ್ ಹಾಗೂ ಆಲಿಯಾ ಭಟ್ ಜೋಡಿ ಕೂಡ ಒಂದು. ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಚಿತ್ರೀಕರಣದ ವೇಳೆ ಇಬ್ಬರು ಡೇಟಿಂಗ್ ಆರಂಭಿಸಿದರು. ಆರಂಭದಲ್ಲಿ ತಮ್ಮ ರಿಲೆಷನ್ ಶಿಪ್ ಬಗ್ಗೆ ಎಲ್ಲೂ ಬಾಯಿ ಬಿಡದ ಈ ಜೋಡಿ ನಂತರದ ದಿನಗಳಲ್ಲಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಬಹಿರಂಗಪಡಿಸಿದರು.

More from Filmibeat

English summary
Bollywood star couple Ranbir Kapoor and Alia Bhatt are now married. Ranbir-Alia tied the knot in a private ceremony?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X