For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ಆರ್‌ ಮುಗಿಸಿ ಮುಂಬೈ ಕಡೆ ಹೊರಟ ಆಲಿಯಾ ಭಟ್

  |

  ಬಾಲಿವುಡ್ ನಟಿ ಆಲಿಯಾ ಭಟ್ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ಶೂಟಿಂಗ್ ಮುಗಿಸಿ ಈಗ ಮುಂಬೈಗೆ ವಾಪಸ್ ಅಗಿದ್ದಾರೆ.

  ಆರ್‌ಆರ್‌ಆರ್ ಚಿತ್ರೀಕರಣ ಮುಗಿಸಿದ ನಂತರ ಆಲಿಯಾ ಭಟ್ ಕುರಿತು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದಾಗಲೇ ಹೈದರಾಬಾದ್‌ನಿಂದ ತೆರಳಿದ್ದ ನಟಿ ಮುಂಬೈ ಏರ್‌ಪೋರ್ಟ್‌ ತಲುಪಿದ್ದಾರೆ.

  ಮುಂಬೈನಿಂದ ಹೈದರಾಬಾದ್‌ಗೆ ಬಂದ ಆಲಿಯಾ ಭಟ್-ರಶ್ಮಿಕಾ ಮಂದಣ್ಣ ಮುಂಬೈನಿಂದ ಹೈದರಾಬಾದ್‌ಗೆ ಬಂದ ಆಲಿಯಾ ಭಟ್-ರಶ್ಮಿಕಾ ಮಂದಣ್ಣ

  ಜುಲೈ 21 ರಂದು ಆಲಿಯಾ ಭಟ್ ಹೈದರಾಬಾದ್‌ಗೆ ಹೋಗಿದ್ದರು. ಆರ್‌ಆರ್‌ಆರ್ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮೇಕಪ್ ಹಚ್ಚಿಕೊಳ್ಳುತ್ತಿರುವ ಫೋಟೋ ಸಹ ಶೇರ್ ಮಾಡಿದ್ದರು. ಜುಲೈ 24 ರಂದು ತನ್ನ ಭಾಗದ ಚಿತ್ರೀಕರಣ ಮುಗಿಸಿ ತಾಯ್ನಾಡಿಗೆ ಹಿಂತಿರುಗಿದ್ದಾರೆ.

  ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗಿತ್ತಿರುವ ಆರ್‌ಆರ್‌ಆರ್ ಸಿನಿಮಾ ಕೊನೆಯ ಹಂತದ ಚಿತ್ರೀಕರಣ ಮಾಡ್ತಿದೆ. ಸದ್ಯದ ವರದಿ ಪ್ರಕಾರ, ನಟ ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ತಮ್ಮ ಪಾತ್ರಗಳ ಶೂಟಿಂಗ್ ಮುಗಿಸಿದ್ದಾರೆ.

  ಆರ್‌ಆರ್‌ಆರ್ ಚಿತ್ರದಲ್ಲಿ ಆಲಿಯಾ ಭಟ್ 'ಸೀತೆ' ಎನ್ನುವ ಪಾತ್ರ ನಿರ್ವಹಿಸಿದ್ದು, ರಾಮ್ ಚರಣ್‌ಗೆ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಅಜಯ್ ದೇವಗನ್, ಶ್ರಿಯಾ ಶರಣ್ ಸೇರಿದಂತೆ ಬ್ರಿಟಿಷ್ ಕಲಾವಿದರು ಸಹ ಅಭಿನಯಿಸಿದ್ದಾರೆ.

  ಆಲಿಯಾ ಭಟ್ ಮುಂದಿನ ಸಿನಿಮಾ

  ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ

  ಆರ್‌ಆರ್‌ಆರ್ ಚಿತ್ರ ಹೊರತುಪಡಿಸಿ ಆಲಿಯಾ ಭಟ್ ಹಿಂದಿಯ ಹಲವು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಗಂಗುಬಾಯಿ ಕಥಿಯಾವಾಡಿ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಬ್ರಹ್ಮಾಸ್ತ್ರ ಶೂಟಿಂಗ್ ಕೊನೆಯ ಹಂತದಲ್ಲಿದೆ. ಇದರ ಜೊತೆಗೆ ಡಾರ್ಲಿಂಗ್ಸ್ ಎಂಬ ಹೊಸ ಸಿನಿಮಾ ಆರಂಭಿಸಿದ್ದಾರೆ.

  English summary
  Bollywood Actress Alia Bhatt returns to Mumbai after shooting for RRR in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X