ಆಲಿಯಾ ಭಟ್ ಬಾಲ್ಯದ ಗೆಳತಿಗೆ ಮನಸೋತ ಯುವ ನಿರ್ದೇಶಕ ; ಮುಂದಿನ ತಿಂಗಳು ಮದುವೆ
ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವ ಈ ಸುದ್ದಿಗಳಲ್ಲಿ ಲವ್ ಮತ್ತು ಬ್ರೇಕಪ್ ಕಥೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ.
ಇನ್ನು, ಯಾರಾದರೂ ಜೊತೆಯಾಗಿ ಕಾಣಿಸಿಕೊಂಡರೆ ಸಾಕು... ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಪುಕಾರು ಹಬ್ಬುತ್ತೆ. ಕೆಲ ಒಮ್ಮೆ ಹೀಗೆ ಹಬ್ಬಿದ ಸುದ್ದಿ ನಿಜಾ ಕೂಡ ಆಗಿದೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಈ ಸಾಲಿಗೆ ಈಗ ಆಕಾಂಕ್ಷಾ ರಂಜನ್ ಕಪೂರ್ ಮತ್ತು ಶರಣ್ ಶರ್ಮಾ ಕೂಡ ಸೇರಲಿದ್ದಾರೆ ಅನ್ನೋದು ಸದ್ಯದ ಲೇಟೆಸ್ಟ್ ನ್ಯೂಸ್.

ಹೌದು. ಆಕಾಂಕ್ಷಾ ರಂಜನ್ ಕಪೂರ್, ಬಾಲಿವುಡ್ ನ ಚೆಲುವೆ. 2020ರಲ್ಲಿ ತೆರೆಗೆ ಬಂದ "ಗಿಲ್ಟಿ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಆಕಾಂಕ್ಷಾ, ರಾಜ್ ಕುಮಾರ್ ರಾವ್ ಮತ್ತು ಹುಮಾ ಖುರೇಶಿ ಅಭಿನಯದ "ಮೋನಿಕಾ ಓ ಮೈ ಡಾರ್ಲಿಂಗ್" ಚಿತ್ರದಲ್ಲಿಯೂ ಅಭಿನಯಿಸಿದ್ದರು.
ಇನ್ನು ಆಕಾಂಕ್ಷಾ ಕೇವಲ ನಟಿ ಮಾತ್ರವಲ್ಲ. ಫ್ಯಾಷನ್ ಐಕಾನ್ ಕೂಡ ಹೌದು. ಸೋಶಿಯಲ್ ಮೀಡಿಯಾ ಸ್ಟಾರ್ ಕೂಡ ಹೌದು. ಎಲ್ಲಕ್ಕಿಂತ ಮುಖ್ಯವಾಗಿ ಆಲಿಯಾ ಭಟ್ ಅವರ ಬಾಲ್ಯದ ಗೆಳತಿ ಈ ಆಕಾಂಕ್ಷಾ.
ಇಂಥಾ ಆಕಾಂಕ್ಷಾ ಬಾಲಿವುಡ್ ನ ಖ್ಯಾತ ನಿರ್ದೇಶಕ ಶರಣ್ ಶರ್ಮಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಅನುಮಾನ ಹಲವರಲ್ಲಿತ್ತು. ಕೆಲ ದಿನಗಳ ಹಿಂದೆ ಈ ಅನುಮಾನ ನಿಜವೂ ಆಗಿದೆ. ಸದ್ಯ ಇವರಿಬ್ಬರು ತಮ್ಮ ಪ್ರೇಮ ಕಥೆಯ ಮೇಲೆ ಮದುವೆಯ ಮುದ್ರೆ ಒತ್ತಲು ಅಣಿಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
"ಹಿಂದೂಸ್ತಾನ್ ಟೈಮ್ಸ್" ಈ ಕುರಿತು ವರದಿಯನ್ನು ಮಾಡಿದ್ದು ಆ ಪ್ರಕಾರ ಜುಲೈ ಹನ್ನೊಂದರಂದು ಇಬ್ಬರ ಮದುವೆ ಸರಳವಾಗಿ ನಡೆಯಲಿದೆ. ಚಿತ್ರರಂಗದ ಕೆಲವೇ ಕೆಲ ಆಪ್ತರು ಈ ಮದುವೆಯಲ್ಲಿ ಭಾಗವಹಿಸಲಿದ್ದು ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರು ಸಪ್ತಪದಿ ತುಳಿಯಲಿದ್ದಾರೆ.

ಜುಲೈ 12ರಂದು ಜೆ ಡಬ್ಲೂ ಮ್ಯಾರಿಯಟ್ ನಲ್ಲಿ ಇವರ ಆರತಕ್ಷತೆ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಇದರ ಖರ್ಚು ವೆಚ್ಚ ಎಲ್ಲ ಶರಣ್ ಶರ್ಮಾ ಅವರದ್ದೇ.
ಅಂದ್ಹಾಗೇ ಶರಣ್ ಶರ್ಮಾ ಬಾಲಿವುಡ್ ನ ಯುವ ಮತ್ತು ಪ್ರತಿಭಾವಂತ ನಿರ್ದೇಶಕ. "ಯೇ ಜವಾನಿ ಹೇ ದಿವಾನಿ" .. " ಏ ದಿಲ್ ಹೈ ಮುಷ್ಕೀಲ್" ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಶರಣ್ ಶರ್ಮಾ, ಜಾಹ್ನವಿ ಕಪೂರ್ ಅಭಿನಯದ "ಗುಂಜನ್ ಸಕ್ಸೇನಾ- ದಿ ಕಾರ್ಗಿಲ್ ಗರ್ಲ್" ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು.
ಆ ನಂತರ "ಮಿಸ್ಟರ್ & ಮಿಸೆಸ್ ಮಾಹಿ" ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರದ ನಾಯಕಿ ಕೂಡ ಜಾಹ್ನವಿ ಕಪೂರ್ ಅನ್ನೋದು ವಿಶೇಷ. ಇನ್ನು ಶರಣ್ ಸಾಮಾನ್ಯ ವ್ಯಕ್ತಿಯಲ್ಲ. ಬದಲಿಗೆ ಹುಟ್ಟುತ್ತಲೇ ಚಿನ್ನದ ಸ್ಪೂನ್ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಕೋಟ್ಯಾಧಿಪತಿ ಎನ್ನುವುದು ಇವರ ಕುರಿತು ಕೇಳಿ ಬರುತ್ತಿರುವ ಮತ್ತೊಂದು ಸುದ್ದಿ.
2022ರಿಂದ ಆಕಾಂಕ್ಷಾ ಜೊತೆ ಶರಣ್ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ. ಈಗ ಆಗಲೇ ಹೇಳಿದಂತೆ "ಹಿಂದೂಸ್ತಾನ್ ಟೈಮ್ಸ್" ವರದಿಯ ಪ್ರಕಾರ ಮದುವೆಯ ಬಂಧನಕ್ಕೊಳಗಾಗಲಿದ್ದಾರೆ. ಸದ್ಯ ಹಲವರು ಈ ನವಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.
ಮದುವೆಯ ವಿವರ | |
|---|---|
| ವಧು | ಆಕಾಂಕ್ಷಾ ರಂಜನ್ ಕಪೂರ್ (ನಟಿ) |
| ವರ | ಶರಣ್ ಶರ್ಮಾ (ಚಿತ್ರ ನಿರ್ದೇಶಕ) |
| ಮದುವೆ ಸಮಯ | ಜುಲೈ 2026 |
| ಸ್ಥಳ | ಮುಂಬೈ, ಮಹಾರಾಷ್ಟ್ರ |
| ಅತಿಥಿಗಳ ಪಟ್ಟಿ | ಅಲಿಯಾ ಭಟ್, ರಣಬೀರ್ ಕಪೂರ್ ಮತ್ತು ಇತರರು |


Click it and Unblock the Notifications