ಅಪ್ಪ-ಅಮ್ಮನ ಕಣ್ಣಲ್ಲಿ ನೀರು ತರಿಸಿದ ನಟಿ 'ಆಲಿಯಾ ಭಟ್'

By Pavithra

ಆಲಿಯಾ ಭಟ್ ವಯಸ್ಸು ಚಿಕ್ಕದಾದರೂ ಕೂಡ ಸಿನಿಮಾ ಆಯ್ಕೆಯಲ್ಲಿ ಮಾತ್ರ ಪ್ರಬುದ್ಧತೆ ತೋರುವ ನಟಿ. ಸಾಕಷ್ಟು ಭಿನ್ನ ಎನ್ನಿಸುವ ಹೈವೇ, ಉಡ್ತಾ ಪಂಜಾಬ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ನಾನ್ಯಾರಿಗೂ ಕಮ್ಮಿ ಇಲ್ಲ ಎಂದು ತಿಳಿಸಿದ ನಟಿ. ಇಷ್ಟೆಲ್ಲಾ ಸುದ್ದಿ ಮಾಡಿರುವ ನಟಿ ಈಗ ಆಕೆಯ ಅಪ್ಪ ಅಮ್ಮನ ಕಣ್ಣಲ್ಲಿ ನೀರು ತರಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಆಲಿಯಾ ಪೋಷಕರ ಕಣ್ಣಲ್ಲಿ ನೀರು ತರಿಸಿದ್ದು ನೋವುಂಟು ಮಾಡಿ ಅಲ್ಲ. ಅಭಿನಯದ ಮೂಲಕ, ಹೌದು ಆಲಿಯಾ ಭಟ್ ಅಭಿನಯ 'ರಾಝಿ' ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ರಾಝಿ' ಚಿತ್ರದ ಅಭಿನಯ ನೋಡಿ ಆಲಿಯಾ ತಂದೆ-ತಾಯಿ ಆನಂದ ಬಾಷ್ಪ ಸುರಿಸಿದ್ದಾರೆ. ಜಂಗ್ಲಿ ಪಿಕ್ಚರ್ಸ್ ಮತ್ತು ಧರ್ಮ ಪ್ರೊಡಕ್ಷನ್ಸ್‌ ಜಂಟಿ ನಿರ್ಮಾಣ ಮಾಡಿರುವ 'ರಾಝಿ' ಚಿತ್ರದ ಸದ್ಯ ಬಿಟೌನ್ ನಲ್ಲಿ ಸಖತ್ ಸುದ್ದಿ ಮಾಡುತ್ತಿದೆ.

ಪ್ರೀ ಟ್ರೇಲರ್ ವಿಡಿಯೋ ಮತ್ತು ಪೋಸ್ಟರ್ ನಲ್ಲಿ ಆಲಿಯಾ ಭಟ್ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಸೂಚನೆ ನೀಡಿತ್ತು ಚಿತ್ರತಂಡ. ಆದರೆ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಟ್ರೇಲರ್ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದೆ. ಆಲಿಯಾ ಅಭಿನಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Alia Bhatts parents reacted to the Raazi trailer

ಸದ್ಯ ಬಿಡುಗಡೆ ಆಗಿರುವ ಟ್ರೇಲರ್ ನಲ್ಲಿ ಆಲಿಯಾ ಭಾರತೀಯಳಾಗಿ, ಅವರ ತಂದೆ ಪಾಕಿಸ್ತಾನಿಯಾಗಿರುವ ಕಾರಣ ಪಾಕಿಸ್ತಾನಿಯನ್ನು ಮದುವೆ ಆಗಿ ಪಾಕ್‌ನಲ್ಲೇ ಭಾರತದ ಕಣ್ಣು ಮತ್ತು ಕಿವಿಯಾಗಿ ಕಾಣಲಿದ್ದು ಗೂಢಚಾರಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುದ್ದಿನ ಹಾಗೂ ವಿಧೇಯ ಮಗಳಾಗಿ, ಗೃಹಿಣಿ ಮತ್ತು ಗೂಢಚಾರಿಣಿಯಾಗಿ ಏಕಕಾಲಕ್ಕೆ ಮೂರು ಭಿನ್ನ ಶೇಡ್ ಗಳಲ್ಲಿ ಆಲಿಯಾ ಗಮನ ಸೆಳೆಯುತ್ತಾರೆ ಎನ್ನುವುದನ್ನ ಚಿತ್ರತಂಡ ಬಿಟ್ಟುಕೊಟ್ಟಿದೆ.

Alia Bhatts parents reacted to the Raazi trailer

ಚಿತ್ರದಲ್ಲಿ ಆಲಿಯಾ ಭಟ್‍ ಪತಿಯಾಗಿ ವಿಕಿ ಕೌಶಾಲ್ ಅಭಿನಯಿಸಿದ್ದಾರೆ. ವಿನೀತ್ ಜೈನ್, ಕರಣ್ ಜೋಹರ್ ಮತ್ತು ಅಪೂರ್ವ ಮೆಹ್ತಾ ಹಾಗೂ ಪ್ರೀತಿ ಶಹಾನಿ ಸಹ ನಿರ್ಮಾಣದ ಈ ಚಿತ್ರಕ್ಕೆ ಮೇಘನಾ ಗುಲ್ಜಾರ್ ಆಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್‌ನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಈ ಚಿತ್ರ ಮೇ 11, 2018ಕ್ಕೆ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ.

More from Filmibeat

English summary
Bhatt's parents reacted to the Raazi trailer with whistles and tears, Raazi Indian period thriller film directed by Meghana Gulzar and produced by Karan Johar. It features Alia Bhatt and Vicky Kaushal in lead roles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X