twitter
    For Quick Alerts
    ALLOW NOTIFICATIONS  
    For Daily Alerts

    ನಿರ್ದೇಶಕ ಮಹೇಶ್ ಭಟ್ ಮಗಳಿಗೆ ಅತ್ಯಾಚಾರದ ಬೆದರಿಕೆ

    |

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಅನೇಕ ನಟರು, ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಸೆಕ್ಷನ್‌ಗಳನ್ನು ಬಂದ್ ಮಾಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟ ನಂತರ ಬಾಲಿವುಡ್‌ನ ಸ್ವಜನಪಕ್ಷಪಾತದ ಕುರಿತು ತೀವ್ರ ಚರ್ಚೆಗಳು ನಡೆದಿದ್ದವು. ಈ ವೇಳೆ ಅನೇಕರು ಬಾಲಿವುಡ್‌ನ ಸಿನಿಮಾ ಕುಟುಂಬದಿಂದ ಬಂದು ತಾರೆಗಳಾಗಿ ಗುರುತಿಸಿಕೊಂಡ ಕಲಾವಿದರ ವಿರುದ್ಧ ಕಿರಿಕಾರಿದ್ದರು. ಅವರ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕಾಮೆಂಟ್ ಹಾಕತೊಡಗಿದ್ದರು. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಅವರನ್ನು ಕೆಟ್ಟಪದಗಳಿಂದ ನಿಂದಿಸತೊಡಗಿದ್ದರು.

    Recommended Video

    ಶಿವಣ್ಣನ ಭೇಟಿ ಮಾಡ್ಬೇಕು ಅನ್ನೋದು ಅವನ ಕೊನೆ ಆಸೆ ಆಗಿತ್ತು | Shivanna | Filmibeat Kannada

    ಈ ಕಾರಣದಿಂದ ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಸೋನಂ ಕಪೂರ್ ಸೇರಿದಂತೆ ಅನೇಕ ನಟಿಯರು ಇನ್‌ಸ್ಟಾಗ್ರಾಂನಲ್ಲಿ ಕಾಮೆಂಟ್ ವಿಭಾಗವನ್ನೇ ಅಡಗಿಸಿದ್ದಾರೆ. ಇದರಿಂದ ಕೆಲವರು ಅವರ ಸಂಬಂಧಿಕರ ಖಾತೆಗಳಿಗೆ ಹೋಗಿ ಕಾಮೆಂಟ್ ಮಾಡುತ್ತಿದ್ದಾರೆ.

    ಟ್ರೋಲ್ ನಿಂದ ತಪ್ಪಿಸಿಕೊಳ್ಳಲು ಕಾಮೆಂಟ್ಸ್ ಹೈಡ್ ಮಾಡಿ ಪೋಸ್ಟ್ ಮಾಡುತ್ತಿರುವ ಅಲಿಯಾ ಭಟ್ಟ್ರೋಲ್ ನಿಂದ ತಪ್ಪಿಸಿಕೊಳ್ಳಲು ಕಾಮೆಂಟ್ಸ್ ಹೈಡ್ ಮಾಡಿ ಪೋಸ್ಟ್ ಮಾಡುತ್ತಿರುವ ಅಲಿಯಾ ಭಟ್

    ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಒಳಗಾದವರಲ್ಲಿ ನಟಿ ಆಲಿಯಾ ಭಟ್ ಮತ್ತು ಅವರ ತಂದೆ ಮಹೇಶ್ ಭಟ್ ಕೂಡ ಸೇರಿದ್ದಾರೆ. ಆದರೆ ಅನೇಕರು ಆಲಿಯಾ ಸಹೋದರಿ ಶಹೀನ್ ಭಟ್ ಖಾತೆಗೆ ಹೋಗಿ ಅಶ್ಲೀಲ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಮುಂದೆ ಓದಿ...

    ಕಾನೂನು ಕ್ರಮದ ಎಚ್ಚರಿಕೆ

    ಕಾನೂನು ಕ್ರಮದ ಎಚ್ಚರಿಕೆ

    ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ನಿರ್ದೇಶಕ ಮಹೇಶ್ ಭಟ್ ಅವರ ಮತ್ತೊಬ್ಬ ಮಗಳು ಶಹೀನ್ ಭಟ್, ಸಾಮಾಜಿಕ ಜಾಲತಾಣದಲ್ಲಿ ತಮಗೆ ಅಶ್ಲೀಲ ಸಂದೇಶಗಳನ್ನು ನೀಡುವವರ ಮಾಹಿತಿ ಬಹಿರಂಗಪಡಿಸುವುದಾಗಿ ಮತ್ತು ಅವರ ವಿರುದ್ಧ ಎಲ್ಲ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

    'ಅಲಿಯಾ, ಮಹೇಶ್ ಸಾಯಬೇಕು'

    'ಅಲಿಯಾ, ಮಹೇಶ್ ಸಾಯಬೇಕು'

    ತಮಗೆ ಬಂದ ಸಂದೇಶಗಳ ಕೆಲವು ಸ್ಕ್ರೀನ್ ಶಾಟ್‌ಗಳನ್ನು ಶಹೀನ್ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಒಂದು ಸಂದೇಶದಲ್ಲಿ ಒಬ್ಬರು ಅಲಿಯಾ ಭಟ್ ಮತ್ತು ತಂದೆ ಮಹೇಶ್ ಭಟ್ ಸಾಯುವುದನ್ನು ನೋಡಲು ಬಯಸಿರುವುದಾಗಿ ಹೇಳಿದ್ದಾರೆ.

    ಸ್ವಜನಪಕ್ಷಪಾತದ ಆರೋಪ: ಟೀಕಾಕಾರರಿಗೆ ಆಲಿಯಾ ಭಟ್ ತಾಯಿ ತಿರುಗೇಟುಸ್ವಜನಪಕ್ಷಪಾತದ ಆರೋಪ: ಟೀಕಾಕಾರರಿಗೆ ಆಲಿಯಾ ಭಟ್ ತಾಯಿ ತಿರುಗೇಟು

    ಶಹೀನ್ ಮತ್ತು ಸೋನಿಗೆ ಬೆದರಿಕೆ

    ಶಹೀನ್ ಮತ್ತು ಸೋನಿಗೆ ಬೆದರಿಕೆ

    ಇನ್ನು ಅನೇಕರು ಶಹೀನ್ ಮತ್ತು ಅವರ ತಾಯಿ ಸೋನಿ ರಾಜ್ದಾನ್‌ಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಅವರ ಮೇಲೆ ಅತ್ಯಾಚಾರ ಎಸಗುವ ಲೈಂಗಿಕ ಹಿಂಸೆಯ ಬೆದರಿಕೆಗಳನ್ನು ಕೂಡ ಹಾಕಿದ್ದಾರೆ. ಈ ರೀತಿಯ ದಾಳಿಗಳಿಂದ ತಮಗೆ ಅಚ್ಚರಿಯೇನೂ ಆಗಿಲ್ಲ ಎಂದು ಅವರು ಹೇಳಿದ್ದಾರೆ.

    ಮಹಿಳೆಯರೂ ವ್ಯಭಿಚಾರಿ ಎನ್ನುತ್ತಾರೆ

    ಮಹಿಳೆಯರೂ ವ್ಯಭಿಚಾರಿ ಎನ್ನುತ್ತಾರೆ

    ಜನರನ್ನು ಶಕ್ತಿಹೀನರನ್ನಾಗಿಸುವ ದೇಶದಲ್ಲಿ ನಾವಿದ್ದೇವೆ. ಮಹಿಳೆಯರನ್ನು ಕೀಳಾಗಿ ನೋಡುತ್ತಾರೆ. ನಿಮ್ಮ ತಾಯಿ, ಸಹೋದರಿ, ಪತ್ನಿ ಅಥವಾ ಒಬ್ಬ ವೇಶ್ಯೆಯಾಗಿರಲಿ ಎಲ್ಲರನ್ನೂ ಒಂದೇ ರೀತಿ ನೋಡುತ್ತಾರೆ. ಇಲ್ಲಿ ಪುರುಷರು ಮಾತ್ರವಲ್ಲ, ಮಹಿಳೆಯರೂ ಮತ್ತೊಬ್ಬ ಮಹಿಳೆಯನ್ನು ವ್ಯಭಿಚಾರಿ ಎಂದು ಕರೆಯುತ್ತಾರೆ ಎಂದು ಸುದೀರ್ಘ ಬರಹದಲ್ಲಿ ಹೇಳಿದ್ದಾರೆ.

    ಜಗತ್ತನ್ನು ಬದಲಿಸಬೇಕಾಗಿದೆ

    ಜಗತ್ತನ್ನು ಬದಲಿಸಬೇಕಾಗಿದೆ

    ಈ ರೀತಿಯ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕೇ ಅಥವಾ ನಿರ್ಲಕ್ಷಿಸುವುದೇ ಎನ್ನುವುದು ಗೊತ್ತಾಗುತ್ತಿರಲಿಲ್ಲ. ಏಕೆಂದರೆ ಅನೇಕ ದಿನಗಳಿಂದ ಈ ರೀತಿ ಅವಾಚ್ಯ ಪದಗಳನ್ನು ಕೇಳಿ ಕೊನೆಗೆ ಅವುಗಳನ್ನು ಬಹಿರಂಗಪಡಿಸಲು ಮುಂದಾಗಿದ್ದೇನೆ. ಮಹಿಳೆಯರನ್ನು ದೌರ್ಜನ್ಯ ಹಾಗೂ ಲೈಂಗಿಕತೆಯ ವಸ್ತುವನ್ನಾಗಿ ನೋಡುವುದಕ್ಕಿಂತ ಮನುಷ್ಯರನ್ನಾಗಿ ನೋಡುವಂತೆ ಜಗತ್ತನ್ನು ಬದಲಿಸಬೇಕಿದೆ. ನನ್ನ ವೈಯಕ್ತಿಕ ಬದುಕಿನ ಸುತ್ತ ಬೌಂಡರಿಯನ್ನು ಹಾಕಿಕೊಂಡು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದಿದ್ದಾರೆ.

    English summary
    Alia Bhatt's sister Shaheen Bhatt has shared some screenshots of threat and hate messages that she received.
    Wednesday, July 15, 2020, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X