ಅಚ್ಚರಿ: ರಹಸ್ಯವಾಗಿ ಮದುವೆ ಆಗಿದ್ದಾರಂತೆ ಆಲಿಯಾ, ರಣ್ಬೀರ್!
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ಸುದ್ದಿ ಸದಾ ಮುನ್ನೆಲೆಗೆ ಬರುತ್ತದೆ. ತೆರೆ ಮರೆಯಲ್ಲಿ ಈ ಜೋಡಿ ಸಪ್ತಪದಿ ತುಳಿಯಲು ಸಜ್ಜಾಗುತ್ತಿದೆ ಎನ್ನುವ ಸುದ್ದಿ ನಿತ್ಯವೂ ಒಂದಲ್ಲಾ ಒಂದು ರೂಪದಲ್ಲಿ ಬಿ ಟೌನ್‌ನಲ್ಲಿ ಹರಿದಾಡುತ್ತಾ ಇರುತ್ತದೆ. ಇದರ ಜೊತೆಗೆ ಇವರ ಮದುಗೆ ತಯಾರಿ ಹೇಗಿದೆ ಎನ್ನುವುದು ಕೂಡ ಆಗಾಗ ವರದಿ ಆಗುತ್ತಿದೆ.
ಕೊರೊನಾ ಬಂದ ಕಾರಣ ಈ ಜೋಡಿ ತಮ್ಮ ಮದುವೆಯನ್ನು ಮುಂದೂಡಿದೆ ಎನ್ನಲಾಗುತ್ತಿದೆ. ಇಲ್ಲವಾದರೆ 2020 ಅಥವಾ 2021ರ ಡಿಸೆಂಬರ್‌ನಲ್ಲೇ ಈ ಜೋಡಿ ಮದುವೆ ಆಗ್ಬೇಕಿತ್ತಂತೆ. ಮದುವೆ ಮುಂದೂಡಲಾಗಿದೆ ಎನ್ನುವ ವಿಚಾರದ ಜೊತೆಗೆ ಮತ್ತೊಂದು ಹೊಸ ಸುದ್ದಿ ಹರಿದಾಡುತ್ತಿದೆ.
ನಟಿ ಆಲಿಯಾ ಭಟ್ ತನ್ನ ಮದುವೆ ಮತ್ತು ರಣ್ಬೀರ್ ಕಪೂರ್ ಬಗ್ಗೆ ಹೊಸ ಹೇಳಿಕೆ ನೀಡಿದ್ದಾರೆ. ಆಲಿಯಾ ನೀಡಿದ ಹೇಳಿಕೆ ಅಚ್ಚರಿ ಎನಿಸಿದರು, ಸರಿ ಎನಿಸುತ್ತೆ. ಅಷ್ಟಕ್ಕೂ ಆಲಿಯಾ ಹೇಳಿದ್ದೇನು, ಮದುವೆ ಆಯ್ತ? ಅಥವಾ ಆಗಬೇಕಾ ಎನ್ನುವುದನ್ನು ಮುಂದೆ ಓದಿ...

ರಣ್ಬೀರ್ ಜೊತೆಗೆ ಆಲಿಯಾ ಮದುವೆ ಆಗಿದ್ದಾರಂತೆ!
ಈ ಬಾರಿ ಯಾವುದೇ ಗಾಸಿಪ್ ಸುದ್ದಿ ಹಬ್ಬಿಲ್ಲ. ಯಾಕೆಂದರೆ ನೇರವಾಗಿ ನಟಿ ಆಲಿಯಾ ಭಟ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಇದಾಗಲೇ ತಾನು ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಇತ್ತೀಚೀನ ಸಂದರ್ಶನ ಒಂದರಲ್ಲಿ ಆಲಿಯಾಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಆಗ ನಟಿ ಆಲಿಯಾ ಭಟ್, "ಈಗಾಗಲೇ ನಾನು ರಣ್ಬೀರ್ ಜೊತೆಗೆ ನನ್ನ ಮನಸ್ಸಲ್ಲಿ ಮದುವೆ ಆಗಿ ಬಿಟ್ಟಿದ್ದಾನೆ." ಎಂದು ಉತ್ತರಿಸಿದ್ದಾರೆ. ಅಂದರೆ ಅದ್ಧೂರಿಯಾಗಿ ಮದುವೆ ಆಗುವುದು ನೆಪ ಮಾತ್ರ. ಅದರೆ ಮನಸ್ಸಲ್ಲಿ ಮದುವೆ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ಟೈಮ್ ಬಂದಾಗ ಮದುವೆ ಆಗುತ್ತೆ: ರಣ್ಬೀರ್!
ಇನ್ನು ಸಂದರ್ಶನದಲ್ಲಿ ಮಾತನಾಡುವ ವೇಳೆ ನಟಿ ಆಲಿಯಾ ರಣ್ಬೀರ್ ಹೇಳಿದ ಮಾತುಗಳನ್ನು ಸರಿ ಎಂದಿದ್ದಾರೆ. "ಮದುವೆ ಯಾವಾಗ ಆಗಬೇಕೋ ಆವಾಗ ಆಗುತ್ತದೆ. ಸಮಯ ಬಂದಾಗ ಎಲ್ಲವೂ ಆಗುತ್ತದೆ ಎಂದು ರಣ್ಬೀರ್ ಹೇಳಿದ್ದರು. ಅದು ಸರಿಯಾದ ಮಾತು. ಅಷ್ಟಕ್ಕೂ ನನಗೆ ಕಾಯಬೇಕು ಎನ್ನುವ ಅಗತ್ಯ ಇಲ್ಲ. ಯಾಕೆಂದರೆ ನಾನು ಬಹಳ ದಿನಗಳ ಹಿಂದೆಯೇ ಮನಸ್ಸಲ್ಲೇ ರಣ್ಬೀರ್ ಜೊತೆ ಮದುವೆ ಆಗಿ ಬಿಟ್ಟಿದ್ದೇನೆ." ಎಂದಿದ್ದಾರೆ.

2022ರ ಅಂತ್ಯಕ್ಕೆ ಆಲಿಯಾ-ರಣ್ಬೀರ್ ಮದುವೆ!
ಇನ್ನು ಈ ವರ್ಷ ಈ ಜೋಡಿ ಮದುವೆ ಆಗುತ್ತೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 2022ರ ಡಿಸೆಂಬರ್‌ನಲ್ಲಿ ಆಲಿಯಾ ಮತ್ತು ರಣ್ಬೀರ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮತ್ತೊಂದು ದೊಡ್ಡ ಮದುವೆ ಸಂಭ್ರಮಕ್ಕೆ ಬಾಲಿವುಡ್ ಸಾಕ್ಷಿ ಆಗಲಿದೆ ಎನ್ನಲಾಗುತ್ತಿದೆ. ಅದಕ್ಕೂ ಮುನ್ನ ಈ ಜೋಡಿ ಒಟ್ಟಿಗೆ ಅಭಿನಯಿಸಿರುವ ಬ್ರಹ್ಮಾಸ್ತ್ರ ಚಿತ್ರ ಸೆಪ್ಟೆಂಬರ್ 9ಕ್ಕೆ ತೆರೆಕಾಣಲಿದೆ.

ಮದುವೆಗೂ ಮುನ್ನ ಮನೆ ಖರೀದಿ!
ರಣ್ಬೀರ್ ಮತ್ತು ಆಲಿಯಾ ಮದುವೆಗೂ ಮುನ್ನ ತಮ್ಮ ಕನಸಿನ ಮನೆಯನ್ನು ಕಟ್ಟುತ್ತಿದ್ದಾರೆ. ಮನೆಯನ್ನು ವಿನ್ಯಾಸಗೊಳಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ. ಇನ್ನು ಮನೆಗೆ ಸಂಪ್ರದಾಯ ವಿನ್ಯಾಸ ಕೂಡ ನೀಡಲಾಗಿದೆ. ಇದಕ್ಕೆ ನೀತು ಕಪೂರ್ ಆಲಿಯಾ, ರಣ್ಬೀರ್‌ಗೆ ಸಲಹೆ ನೀಡಿದ್ದಾರಂತೆ. ಅವರ ಪೂರ್ವಜರ ಕಾಲದಲ್ಲಿ ಮನೆಯ ವಿನ್ಯಾಸ ಹೇಗೆ ಇರುತ್ತಿತ್ತು ಎನ್ನುವ ಸಲಹೆಗಳನ್ನು ರಣ್ಬೀರ್ ಕಪೂರ್ ತಾಯಿ ನೀಡುತ್ತಿದ್ದಾರಂತೆ. ಹಾಗಾಗಿ ಮನೆಯನ್ನು ಸಾಂಪ್ರದಾಯಿಕವಾಗಿ ಕಟ್ಟಲು ಈ ಜೋಡಿ ಮುಂದಾಗಿದೆ.


Click it and Unblock the Notifications











