ಗಿಫ್ಟ್ ಕೇಳಿದ್ದ ಜ್ಯೂ. ಎನ್‌ಟಿಆರ್: ಆದರೆ ಗರ್ಭಿಣಿ ಉಪಾಸನಾಗೆ ಬೊಂಬಾಟ್ ಗಿಫ್ಟ್ ಕಳುಹಿಸಿದ ಆಲಿಯಾ

By ಫಿಲ್ಮಿಬೀಟ್ ಡೆಸ್ಕ್

ತೆಲುಗು ನಟ ರಾಮ್‌ಚರಣ್ ಹಾಗೂ ಉಪಾಸನಾ ಮನೆಗೆ ಹೊಸ ಅತಿಥಿಯ ಸ್ವಾಗತಕ್ಕೆ ಕಾಯುತ್ತಿದ್ದಾರೆ. ಉಪಾಸನಾ 6 ತಿಂಗಳ ಗರ್ಭಿಣಿ ಆಗಿದ್ದು ಇತ್ತೀಚೆಗೆ ದುಬೈನಲ್ಲಿ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನಡೆದಿತ್ತು. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಮದುವೆಯಾಗಿ 10 ವರ್ಷಗಳ ನಂತರ ದಂಪತಿ ತಂದೆ-ತಾಯಿ ಆಗ್ತಿದ್ದಾರೆ.

ಚರಣ್- ಉಪಾಸನಾ ದಂಪತಿಗೆ ಹುಟ್ಟುವ ಮಗುವಿಗಾಗಿ ಮೆಗಾ ಫ್ಯಾಮಿಲಿ ಮಾತ್ರವಲ್ಲ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಇನ್ನು 'RRR' ಚಿತ್ರದ ರಾಮರಾಜು ಆಗಿ ಚರಣ್ ಗ್ಲೋಬಲ್ ಸ್ಟಾರ್ ಎನಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಗೋಲ್ಡನ್ ಗ್ಲೋಬ್, ಆಸ್ಕರ್ ಪ್ರಶಸ್ತಿಗಳು ಸಿಕ್ಕಿತ್ತು. ಪ್ರಶಸ್ತಿ ಸಮಾರಂಭಗಳಲ್ಲಿ ಪತಿಯ ಜೊತೆ ಉಪಾಸನಾ ಕೂಡ ಭಾಗವಹಿಸಿದ್ದರು. ಹಾಗಾಗಿ ಆಕೆಗೂ ಈ ವರ್ಷ ಸಿಕ್ಕಾಪಟ್ಟೆ ಮೆಮೊರಬಲ್. ಇದೀಗ ಉಪಾಸನಾ ಹಾಗೂ ಆಕೆಗೆ ಹುಟ್ಟುವ ಮಗುವಿಗೆ ಬೊಂಬಾಟ್ ಗಿಫ್ಟ್ ಬಂದಿದೆ.

Alia Bhatt sends surprise gift for Ramcharan Wife Upasana and their first child

'RRR' ಚಿತ್ರದಲ್ಲಿ ಸೀತಾರಾಮರಾಜು ಜೋಡಿ ಸೀತಾ ಪಾತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ನಟಿಸಿದ್ದರು. ಸಿನಿಮಾ ಶೂಟಿಂಗ್ ಸಮಯದಲ್ಲಿ ಚರಣ್, ಆಲಿಯಾ, ಜ್ಯೂ, ಎನ್‌ಟಿಆರ್ ಆತ್ಮೀಯ ಸ್ನೇಹಿತರಾಗಿದ್ದರು. ಉಪಾಸನಾ ಕೂಡ ಬಾಲಿವುಡ್ ನಟಿಗೆ ಆತ್ಮೀಯರಾಗಿದ್ದರು. ಉಪಾಸನಾ ಇದೀಗ ಗರ್ಭವತಿಯಾಗಿದ್ದು ಆಕೆಗೆ ಆಲಿಯಾ ಭಟ್ ಸರ್‌ಪ್ರೈಸ್ ಗಿಫ್ಟ್ ಕಳುಹಿಸಿದ್ದಾರೆ. ಆಲಿಯಾ ಭಟ್ 'ಈದ್ ಎ ಮಮ್ಮ' ಕ್ಲಾಟಿಂಗ್ ಬ್ರ್ಯಾಂಡ್ ಹೊಂದಿದ್ದಾರೆ. ಪುಟ್ಟ ಮಕ್ಕಳಿಗೆ ಬೇಕಾದ ಬಟ್ಟೆಬರೆ ಈ ಬ್ರ್ಯಾಂಡ್‌ನಲ್ಲಿ ಸಿಗುತ್ತದೆ.

ಆಲಿಯಾ ಭಟ್ ಆಗಾಗ್ಗೆ 'ಈದ್ ಎ ಮಮ್ಮ' ಬ್ರ್ಯಾಂಡ್ ಬಟ್ಟೆಗಳನ್ನು ಸ್ನೇಹಿತರಿಗೆ ಉಡುಗೊರೆಯಾಗಿ ಕೊಡುತ್ತಿರುತ್ತಾರೆ. ಇತ್ತೀಚೆಗೆ ಯಂಗ್‌ ಟೈಗರ್ ಎನ್‌ಟಿಆರ್ ಮಕ್ಕಳಿಗೆ ಆಲಿಯಾ ಭಟ್‌ಗಳನ್ನು ಗಿಫ್ಟ್ ಮಾಡಿದ್ದರು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ತಾರಕ್, ನನಗೂ ಮುಂದಿನ ಬಾರಿ ಗಿಫ್ಟ್ ಬರುತ್ತೆ ಎಂದುಕೊಂಡಿದ್ದೇನೆ ಎಂದು ತಮಾಷೆ ಮಾಡಿದ್ದರು. ಆಲಿಯಾ ಖಂಡಿತ ಕಳುಹಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದರು. ಇದೀಗ ಉಪಾಸನಾಗೆ ಗಿಫ್ಟ್ ಕಳುಹಿಸಿದ್ದಾರೆ.

Alia Bhatt sends surprise gift for Ramcharan Wife Upasana and their first child

'ಈದ್ ಎ ಮಮ್ಮ' ಬ್ರ್ಯಾಂಡ್‌ನಲ್ಲಿ ಗರ್ಭಿಣಿಯರು ಬಳಸುವ ಬಟ್ಟೆ, ವಸ್ತುಗಳು ಸಿಗುತ್ತವೆ. ಸದ್ಯ ಅಂತಹ ಬಟ್ಟೆಗಳ ಕಿಟ್ ಅನ್ನು ಉಪಾಸನಾಗೆ ಗಿಫ್ಟ್ ಮಾಡಿದ್ದಾರೆ. ಜೊತೆಗೆ ಉಪಾಸನಾಗೆ ಹುಟ್ಟುವ ಮಗುವಿಗೂ ಬಟ್ಟೆಯ ಕಿಟ್ ಗಿಫ್ಟ್ ಸಿಕ್ಕಿದೆ. ಈ ವಿಚಾರವನ್ನು ಸ್ವತಃ ಉಪಾಸನಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ನನಗೆ ಸದ್ಯ ಏನು ಬೇಕಿತ್ತೋ ಅದು ಸಿಕ್ಕಿದೆ ಥ್ಯಾಂಕ್ಯೂ ಆಲಿಯಾ" ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ರಾಮ್‌ಚರಣ್- ಉಪಾಸನಾ ದಂಪತಿ ದುಬೈ ಪ್ರವಾಸ ಕೈಗೊಂಡಿದ್ದರು. ಆರಂಭದಲ್ಲಿ ಇದು ಬರೀ ಪ್ರವಾಸ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಲ್ಲೇ ಉಪಾಸನಾಗೆ ಸೀಮಂತ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಕುಟುಂಬದ ಆಪ್ತರು, ಸ್ನೇಹಿತರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಬೇಬಿ ಶವರ್ ಫೋಟೊಗಳು, ವಿಡಿಯೋಗಳು ಉಪಾಸನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕಾಜಲ್ ಅಗರ್‌ವಾಲ್, ನಟಿ ಗಾಯತ್ರಿ, ಸೋನಾಲಿ ಬೇಂದ್ರೆ ಸೇರಿದಂತೆ ಹಲವರು ಕಾಮೆಂಟ್ ಮಾಡಿ ಶುಭ ಹಾರೈಸಿದ್ದಾರೆ.

ಇನ್ನು ಮದುವೆಯಾಗಿ 10 ವರ್ಷಗಳ ಕಾಲ ಮಗು ಪಡೆಯದಿರಲು ಕಾರಣ ಏನು ಎನ್ನುವುದನ್ನು ಉಪಾಸನಾ ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದ್ದರು. 10 ವರ್ಷಗಳ ಕಾಲ ಮಕ್ಕಳು ಬೇಡ ಎಂದು ದಂಪತು ಮದುವೆ ಅದಾಗಲೇ ನಿರ್ಧರಿಸಿದ್ದಾರೆ ತಿಳಿಸಿದ್ದರು. ಈಗ ನಾವಿಬ್ಬರು ನಮ್ಮ ಕ್ಷೇತ್ರಗಳಲ್ಲಿ ಯಶಸ್ಸಿನ ಉತ್ತಯಂಗಕ್ಕೇರಿದ್ದೇವೆ. ನಾವು ನಮ್ಮ ಮಕ್ಕಳನ್ನು ಯಾವುದೇ ಕೊರತೆ ಇಲ್ಲದಂತೆ ಸಾಕಲು ಶಕ್ತರಾಗಿದ್ದೇವೆ. ಅದಕ್ಕೆ ಈಗ ಮಗು ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದರು. ಅಯ್ಯೋ ಮಕ್ಕಳನ್ನು ಸಾಕಲು ಸಾವಿರಾರು ಕೋಟಿ ಬೇಕಿತ್ತಾ? ಈ ಕಾರಣಕ್ಕಾಗಿ ಇಷ್ಟು ವರ್ಷ ಮಕ್ಕಳು ಮಾಡಿಕೊಳ್ಳಲಿಲ್ಲವಾ? ಇದ್ಯಾರೋ ಅತಿಯಾಯ್ತು ಎಂದು ಮಾತನಾಡಿದ್ದರು.

More from Filmibeat

English summary
Alia Bhatt sends surprise gift for RRR Actor Ramcharan Wife Upasana and their first child. Recently Ram Charan and Upasana were celebrate her baby shower with close friends and family in dubai. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X