ಬ್ರಹ್ಮಾಸ್ತ್ರ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ ಆಲಿಯಾ ಭಟ್! ರಶ್ಮಿಕಾಗೆ ಈ ಮೂಲಕ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು!

ಈಗ ಎಲ್ಲಿ ನೋಡಿದರೂ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಅಬ್ಬರ ಜೋರಾಗಿದೆ. ಸಾಕಷ್ಟು ಸಿನಿಮಾಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇಟ್ಟುಕೊಂಡು ಸಿನಿಮಾಗಳನ್ನು ಹೊರತರುತ್ತಿದ್ದು, ಎಲ್ಲಾ ಭಾಷೆಯ ವೀಕ್ಷಕರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಸಾಕಷ್ಟು ಸಿನಿಮಾ ಇಂಡಸ್ಟ್ರಿಗಳು ಪ್ಯಾನ್ ಇಂಡಿಯಾ ಸಿನಿಮಾಗಳನ್ನೆ ಹೆಚ್ಚೆಚ್ಚು ನಿರ್ಮಾಣ ಮಾಡುತ್ತಿದ್ದು, ರಿಲೀಸ್ ಸಂದರ್ಭದಲ್ಲಿ ಆಯಾ ಭಾಷೆಯ ವೀಕ್ಷಕರನ್ನು ಸೆಳೆಯಲು ಹಲವು ಪ್ರಯತ್ನಗಳನ್ನು ಮಾಡುತ್ತವೆ. ಇದೀಗ ಅಂತದ್ದೆ ಪ್ರಯತ್ನದಲ್ಲಿ ನಟಿ ಆಲಿಯಾ ಭಟ್ ಕನ್ನಡಿಗರ ಪ್ರೀತಿ ಗೆದ್ದಿದ್ದಾರೆ. ಅದು ಹೇಗೆ ಅಂತ ಮುಂದೆ ಓದಿ.

ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಒಟ್ಟಿಗೆ ಅಭಿನಯಿಸಿರುವ ಸಿನಿಮಾ ಬ್ರಹ್ಮಾಸ್ತ್ರ. ಈ ಸಿನಿಮಾದ ಮೇಲೆ ಸಾಕಷ್ಟು ಅಭಿಮಾನಿಗಳು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಯಾಕೆಂದರೆ ಆಲಿಯಾ ಮತ್ತು ರಣಬೀರ್ ನಿಜ ಜೀವನದ ಪ್ರಣಯ ಪಕ್ಷಿಗಳು. ಇವರಿಬ್ಬರನ್ನು ಒಟ್ಟಿಗೆ ಸ್ಕ್ರೀನ್ ಮೇಲೆ ನೋಡಬೇಕು ಅನ್ನೋದು ಅಭಿಮಾನಿಗಳ ಕನಸಾಗಿತ್ತು. ಈಗ ಆ ಕನಸು ನನಸಾಗೋ ಸಮಯ ಹತ್ತಿರದಲ್ಲಿದೆ.

ಬ್ರಹ್ಮಾಸ್ತ್ರ ಬಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾವಾಗಿದ್ದು, ಈಗಾಗಲೆ ಮೇಕಿಂಗ್, ಸಾಂಗ್ ಮೂಲಕ ಗಮನ ಸೆಳೆದಿದೆ. ಇದೀಗ ಈ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಈ ವಿಚಾರದಲ್ಲಿ ಆಲಿಯಾ ಭಟ್ ಕನ್ನಡಿಗರ ಗಮನ ಸೆಳೆದಿದ್ದು, ಕನ್ನಡದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಆಲಿಯಾ ಭಟ್ ಬರೆದುಕೊಂಡಿದ್ದಾರೆ. ಈ ವಿಚಾರ ತಿಳಿದು ಕನ್ನಡಿಗರು ಆಲಿಯಾ ಅವರನ್ನು ಹಾಡಿಹೊಗಳುತ್ತಿದ್ದು, ಖಂಡಿತಾ ಸಿನಿಮಾ ನೋಡುತ್ತೇವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಈ ಮೂಲಕವೇ ಕನ್ನಡಿಗರ ಪ್ರೀತಿ ಪಡೆದ ಬಾಲಿವುಡ್ ನಟಿ

ಈ ಮೂಲಕವೇ ಕನ್ನಡಿಗರ ಪ್ರೀತಿ ಪಡೆದ ಬಾಲಿವುಡ್ ನಟಿ

ಬ್ರಹ್ಮಾಸ್ತ್ರ ಸಿನಿಮಾ ಸೆಟ್ಟೇರಿ ಸಾಕಷ್ಟು ಸಮಯ ವೇ ಆಗಿದೆ. ಆದರೇ ಕಾರಣಾಂತರಗಳಿಂದ ಸಿನಿಮಾ ಶೂಟಿಂಗ್ ತಡವಾಗುತ್ತಿತ್ತು. ಇದೀಗ ಅದೆಲ್ಲವನ್ನು ದಾಟಿಕೊಂಡು ಬಂದು ಸಿನಿಮಾ ರಿಲೀಸ್‌ಗೆ ಚಿತ್ರತಂಡ ಸಜ್ಜಾಗಿದೆ. ಸೆಪ್ಟೆಂಬರ್ 9,2022ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, ಈ ಖುಷಿ ವಿಚಾರವನ್ನು ಆಲಿಯಾ ಭಟ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಬ್ರಹ್ಮಾಸ್ತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡದಲ್ಲೂ ತೆರೆಕಾಣುತ್ತಿದೆ. ಹೀಗಾಗಿ ಆಲಿಯಾ ಭಟ್ ಕನ್ನಡದ ಪೋಸ್ಟರ್‌ಕೂಡ ಟ್ವೀಟ್ ಮಾಡಿ ಕನ್ನಡದಲ್ಲಿ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಆಲಿಯಾ ಭಟ್ ಟ್ವೀಟ್‌ಗೆ ಕನ್ನಡಿಗರು ಕ್ಲೀನ್ ಬೋಲ್ಡ್

ಆಲಿಯಾ ಭಟ್ ಟ್ವೀಟ್‌ಗೆ ಕನ್ನಡಿಗರು ಕ್ಲೀನ್ ಬೋಲ್ಡ್

'ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ. ಮಹಾಯೋಧನೊಬ್ಬನ ಉದಯವಾಗಲಿದೆ. 09.09.2022 ಈ ದಿನಾಂಕದೊಂದಿಗೆ ಬ್ರಹ್ಮಾಸ್ತ್ರ ಪಾರ್ಟ್​ ಒನ್​: ಶಿವನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ​' ಎಂದು ಆಲಿಯಾ ಭಟ್​ ಕನ್ನಡಲ್ಲೇ ಟ್ವೀಟ್​ ಮಾಡಿದ್ದಾರೆ. ಆಲಿಯಾ ಅವರ ಈ ಟ್ವೀಟ್‌ಗೆ ಸಾಕಷ್ಟು ಅಭಿಮಾನಿಗಳು ಫಿದಾ ಆಗಿದ್ದು, ಖಂಡಿತಾ ಸಿನಿಮಾ ನೋಡುತ್ತೇವೆ, ಹಾಗೇ ರಣಬೀರ್ ಮತ್ತು ನಿಮ್ಮನ್ನು ಒಟ್ಟಿಗೆ ತೆರೆ ಮೇಲೆ ನೋಡಲು ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಮೂರು ಭಾಗಗಳಲ್ಲಿ ಸಿನಿಮಾ ರಿಲೀಸ್

ಮೂರು ಭಾಗಗಳಲ್ಲಿ ಸಿನಿಮಾ ರಿಲೀಸ್

ಬ್ರಹ್ಮಾಸ್ತ್ರ ಸಿನಿಮಾ ಮೂರು ಭಾಗಗಳಲ್ಲಿ ತೆರೆಕಾಣುತ್ತಿದೆ. ಸದ್ಯ ಮೊದಲ ಭಾಗ 09.09.2022 ರಂದು ರಿಲೀಸ್ ಆಗುತ್ತಿದ್ದು, ಮುಂದಿನ ಭಾಗದ ರಿಲೀಸ್ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹಿಂದಿ ಸೇಇದಂತೆ ಕನ್ನಡ, ತಮಿಳು, ತೆಲುಗು, ಮಲಯಾಳಂ ನಲ್ಲಿ ಸಿನಿಮಾ ತೆರೆಕಾಣಲಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾವನ್ನು ಖ್ಯಾತ ನಿರ್ದೇಶಕ ರಾಜಮೌಳಿ ಪ್ರಸ್ತುತ ಪಡಿಸುತ್ತಿದ್ದಾರೆ ಅನ್ನೋದು ವಿಶೇಷ.

ಕಥೆಯಲ್ಲಿದೆ ಸಾಕಷ್ಟು ರೋಚಕಥೆ!

ಕಥೆಯಲ್ಲಿದೆ ಸಾಕಷ್ಟು ರೋಚಕಥೆ!

ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟ ರಣಬೀರ್​ ಕಪೂರ್​ ಅವರು ಶಿವನ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಮೋಷನ್​ ಪೋಸ್ಟರ್​ನಿಂದ ಅಭಿಮಾನಿಗಳಲ್ಲಿ ಭಾರಿ ಕುತೂಹಲ ನಿರ್ಮಾಣ ಆಗಿದೆ. ರಣಬೀರ್​ ಕಪೂರ್​​ ಅವರ ಲುಕ್​ ಸಖತ್​ ಕ್ಯೂರಿಯಾಸಿಟಿ ಹುಟ್ಟಿಸಿದೆ. ಬ್ರಹ್ಮಾಸ್ತ್ರ ಚಿತ್ರವನ್ನು ಆಯನ್ ಮುಖರ್ಜಿ ನಿರ್ದೇಶನ ಮಾಡಿದ್ದು, ಕರಣ್ ಜೋಹರ್ ನಿರ್ಮಾಣ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಅಮಿತಾಬ್ ಬಚ್ಚನ್, ತೆಲುಗು ನಟ ಅಕ್ಕಿನೇನಿ ನಾಗರ್ಜುನ, ಮೌನಿ ರಾಯ್ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ತಾರಾಗಣವೇ ಇದೆ.

ರಶ್ಮಿಕಾ ಮಂದಣ್ಣಗೆ ಈ ಮೂಲಕ ಮತ್ತೆ ಕ್ಲಾಸ್

ರಶ್ಮಿಕಾ ಮಂದಣ್ಣಗೆ ಈ ಮೂಲಕ ಮತ್ತೆ ಕ್ಲಾಸ್

ನಟಿ ಆಲಿಯಾ ಭಟ್ ಕನ್ನಡವರೂ ಆಗಿಲ್ಲದೇ ಇದ್ದರು ಕನ್ನಡದಲ್ಲಿ ಟ್ವೀಟ್ ಮಾಡಿ ಕನ್ನಡಿಗರ ಗಮನ ಸೆಳೆದಿದ್ದಾರೆ. ಇದೀಗ ಇದನ್ನೆ ಉದಾಹರಣೆಯನ್ನಾಗಿ ಇಟ್ಟುಕೊಂಡು ನಟಿ ರಶ್ಮಿಕಾಗೆ ಮತ್ತೆ ಕಾಲೆಳೆಯುತ್ತಿದ್ದಾರೆ. ಕನ್ನಡದವರಾಗಿ ನಿಮಗೇ ಕನ್ನಡದ ಮೇಲೆ ಪ್ರೀತಿ ಇಲ್ಲ. ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ. ಪುಷ್ಪ ಚಿತ್ರದಲ್ಲಿ ಕನ್ನಡ ಡಬ್ ಕೂಡ ಮಾಡದ ನೀವು ನೀವೆಂತ ಕನ್ನಡತಿ. ಆಲಿಯಾ ಭಟ್ ಅವರನ್ನು ನೋಡಿ ಕಲಿಯಿರಿ ಎಂದು ಕಮೆಂಟ್ ಮಾಡುವ ಮೂಲಕ ರಶ್ಮಿಕಾ ಮಂದಣ್ಣಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

More from Filmibeat

English summary
Alia bhatt tweets in Kannada about Brahmastra part one film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X